ಭಾರತದ ಸಾರ್ವಭೌಮತೆ ನಾಶಕ್ಕೆ ಚೀನಾದಿಂದ ನ್ಯೂಸ್‌ಕ್ಲಿಕ್‌ಗೆ ಹಣ: ಎಫ್‌ಐಆರ್
ಭಾರತದ ಸಮಗ್ರತೆಗೆ ಧಕ್ಕೆ ತರಲು ಮತ್ತು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಚೀನಾದಿಂದ ಭಾರೀ ಪ್ರಮಾಣದ ಹಣ ಭಾರತಕ್ಕೆ ರವಾನೆಯಾಗಿತ್ತು. ಇದು ಭಾರತದ ವಿರುದ್ಧ ಬೃಹತ್ ಕ್ರಿಮಿನಲ್ ಸಂಚಿನ ಭಾಗವಾಗಿತ್ತು ಎಂದು ದೆಹಲಿ ಪೊಲೀಸರು ಶುಕ್ರವಾರ ‘ನ್ಯೂಸ್‌ಕ್ಲಿಕ್’ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನವದೆಹಲಿ: ಭಾರತದ ಸಮಗ್ರತೆಗೆ ಧಕ್ಕೆ ತರಲು ಮತ್ತು ದೇಶದಲ್ಲಿ ಅಶಾಂತಿ ಸೃಷ್ಟಿಸಲು ಚೀನಾದಿಂದ ಭಾರೀ ಪ್ರಮಾಣದ ಹಣ ಭಾರತಕ್ಕೆ ರವಾನೆಯಾಗಿತ್ತು. ಇದು ಭಾರತದ ವಿರುದ್ಧ ಬೃಹತ್ ಕ್ರಿಮಿನಲ್ ಸಂಚಿನ ಭಾಗವಾಗಿತ್ತು ಎಂದು ದೆಹಲಿ ಪೊಲೀಸರು ಶುಕ್ರವಾರ ‘ನ್ಯೂಸ್‌ಕ್ಲಿಕ್’ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಫ್‌ಐಆರ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಅಲ್ಲದೆ ಚೀನಾ ಮೂಲದ ‘ಶಾವ್‌ಮೀ’, ‘ವಿವೋ’ದಂಥ ದೊಡ್ಡ ದೊಡ್ಡ ಟೆಲಿಕಾಂ ಕಂಪನಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಹಾಗೂ ವಿದೇಶಿ ವಿನಿಮಯ ಉಲ್ಲಂಘನೆ ತಡೆ ಕಾಯ್ದೆಗೆ ವಿರುದ್ಧವಾಗಿ ಭಾರತದಲ್ಲಿ ಸಹಸ್ರಾರು ಶೆಲ್ (ಅಸ್ತಿತ್ವದಲ್ಲಿ ಇಲ್ಲದ) ಕಂಪನಿಗಳನ್ನು ಸ್ಥಾಪಿಸಿದ್ದವು. ಆ ಮೂಲಕವೂ ಭಾರತಕ್ಕೆ ಅಕ್ರಮವಾಗಿ ಹಣ ಕಳಿಸುತ್ತಿದ್ದವು ಎಂದು ದೆಹಲಿ ಪೊಲೀಸರು (Delhi Police) ಆರೋಪಿಸಿದ್ದಾರೆ.
ವಾರಗಳ ಕಾಲ ಇಳಿಕೆಯಾಗಿ ಈಗ ಮತ್ತೆ ಏರ್ತಿದೆ ಚಿನ್ನದ ದರ: ಇಂದು ಹೇಗಿದೆ ನಿಮ್ಮ ನಗರದಲ್ಲಿ ಬಂಗಾರ ದರ
ಇದಲ್ಲದೆ, ಭಾರತದ ಸಾರ್ವಭೌಮತೆಯನ್ನು ಹಾಳುಗೆಡವಲು ಸಂಚು ರೂಪಿಸಿ, ಭಾರತದ ವಿರುದ್ಧ ಅಸಂತೋಷ ಸೃಷ್ಟಿಸಲು ನ್ಯೂಸ್‌ಕ್ಲಿಕ್ ಸಂಚು ರೂಪಿಸಿತ್ತು. ಇದಕ್ಕಾಗಿ ಚೀನಾದಿಂದ ಭಾರಿ ಪ್ರಮಾಣದ ಹಣ ಸುತ್ತಿ ಬಳಸಿ ಹಾಗೂ ರಹಸ್ಯವಾಗಿ ಭಾರತಕ್ಕೆ ಬಂದಿತ್ತು ಎಂದೂ ಪೊಲೀಸರು ದೂರಿದ್ದಾರೆ.
ಅಕ್ರಮ ಹಣ:
ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ (Communist Party of China) ಸಕ್ರಿಯ ಕಾರ್ಯಕರ್ತ ನೆವಿಲ್ಲೆ ರಾಯ್ ಸಿಂಘಂ (Neville Roy Singham) ಎಂಬಾತ ಭಾರತಕ್ಕೆ ಅಕ್ರಮ ಮಾರ್ಗದಲ್ಲಿ ಭಾರೀ ಪ್ರಮಾಣದ ಹಣ ರವಾನಿಸಿದ್ದಾನೆ. ಇನ್ನು ಭಾರತದಲ್ಲಿ ಗೌತಮ್ ಭಾಟಿಯಾ (Gautam Bhatia) ಎಂಬಾತ, ಭಾರತದಲ್ಲಿ ನಿಯಮ ಉಲ್ಲಂಘಿಸಿದ್ದ ಚೀನಾ ಟೆಲಿಕಾಂ ಕಂಪನಿಗಳ ಪರ ವಾದ ಮಂಡಿಸಲು ಕಾನೂನು ತಂಡ ರಚನೆಗೆ ನೆರವಾಗಿದ್ದ. ಇದಕ್ಕೆ ಪ್ರತಿಯಾಗಿ ಆತ ಚೀನಾ ಕಂಪನಿಗಳಿಂದ ಲಾಭ ಪಡೆದುಕೊಂಡಿದ್ದ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಆದರೆ ಆತನ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ನೀಡಿಲ್ಲ.
ಅಪ್ಪಟ ರೈತ ವಿಜ್ಞಾನಿ ಪ್ರೊ.ಸ್ವಾಮಿನಾಥನ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಲೇಖನ
ಚುನಾವಣೆಗೂ ಅಡ್ಡಿ ಯತ್ನ:
2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಹಾಳು ಮಾಡಲು ಗುಂಪೊಂದರ ಜತೆ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಸಂಪಾದಕ ಪ್ರಬೀರ್ ಪುರಕಾಯಸ್ಥ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಪೇಯ್ಡ್ ನ್ಯೂಸ್:
ಚೀನಾ ಕಂಪನಿಗಳಿಂದ ಭಾರಿ ಪ್ರಮಾಣದಲ್ಲಿ ಹಣ ಸಂದಾಯವಾದ ಬಳಿಕ ನ್ಯೂಸ್‌ಕ್ಲಿಕ್ ವೆಬ್‌ಸೈಟ್ ಭಾರತಕ್ಕೆ ಪ್ರತಿಕೂಲವಾದ ‘ಪೇಯ್ಡ್ ನ್ಯೂಸ್’ಗಳನ್ನು ವರದಿ ಮಾಡಿತ್ತು. ಭಾರತ ಸರ್ಕಾರದ ನೀತಿಗಳು, ಯೋಜನೆಗಳನ್ನು ಟೀಕಿಸಿ, ಚೀನಾದ ನೀತಿಗಳನ್ನು ಉತ್ತೇಜಿಸಿತ್ತು ಎಂದು ದೂರಲಾಗಿದೆ.
ಚೀನಾ ನೆರವಿನಿಂದ ದೇಶ ವಿರೋಧಿ ಸುದ್ದಿ, 7 ದಿನ ಪೊಲೀಸ್ ಕಸ್ಟಡಿಯಲ್ಲಿ ನ್ಯೂಸ್‌ಕ್ಲಿಕ್ ಸಂಸ್ಥಾಪಕ, ಹೆಚ್ಆರ್!