ಮುಂಬೈ ಏರ್‌ಪೋರ್ಟ್‌ನಲ್ಲಿ ಎರಡು ಸಮೋಸಾ, ಒಂಚು ಚಹಾಗೆ ಇರುವ ದರವನ್ನು ನೋಡಿ, ಇದೇನಾ ಅಚ್ಚೇದಿನ್‌ ಎನ್ನುವ ರೀತಿಯಲ್ಲಿ ಪೋಸ್ಟ್‌ ಮಾಡಿದ ಖಾಸಗಿ ಸುದ್ದಿಸಂಸ್ಥೆಯ ಪತ್ರಕರ್ತೆ ಫರಾ ಖಾನ್‌ರನ್ನು ಟ್ವಿಟರ್‌ನಲ್ಲಿ ಫುಲ್‌ ಟ್ರೋಲ್‌ ಮಾಡಲಾಗಿದೆ. ಅವರ ಟ್ವೀಟ್‌ಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿದೆ. 

ಬೆಂಗಳೂರು (ಜ.9): ಚಹಾ ಹಾಗೂ ಸಮೋಸಾ ಇಂದಿಗೂ ಕೂಡ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸಂಜೆಯ ವೇಳೆ ಲಘು ಉಪಹಾರದ ಖಾದ್ಯ. ಅದು ಮಾತ್ರವಲ್ಲದೆ ಇದು ಜೇಬಿಗೂ ಕೂಡ ಅಷ್ಟಾಗಿ ಕತ್ತರಿ ಹಾಕೋದಿಲ್ಲ. ಈ ರುಚಿಕರವಾದ ಹಾಗೂ ಸವಿಯಾದ ಸಮೋಸಾವನ್ನು ದಕ್ಷಿಣ ಭಾರತದಲ್ಲೂ ಕೂಡ ಹಲವಾರು ರಾಜ್ಯಗಳಲ್ಲಿ ಸಂಜೆಯ ಸಮಯದ ಉತ್ತಮ ಖಾದ್ಯ. ಆದರೆ, ಖಾಸಗಿ ಸುದ್ದಿಸಂಸ್ಥೆಯ ಪತ್ರಕರ್ತೆ ಫರಾ ಖಾನ್‌, ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಚಹಾ, ಸಮೋಸಾ ಹಾಗೂ ನೀರಿನ ಬಾಟಲಿ ಖರೀದಿ ಮಾಡಿದ ದೊಡ್ಡ ಬಿಲ್‌ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಇದೇನಾ ಅಚ್ಚೇದಿನ್ ಎನ್ನುವ ರೀತಿಯಲ್ಲಿ ಅವರು ಟ್ವಿಟರ್‌ ಪೋಸ್ಟ್‌ ಮಾಡಿದ್ದು ಟ್ವಿಟರ್‌ನಲ್ಲಿ ಸಾಕಷ್ಟು ಭಿನ್ನ ಭಿನ್ನ ಪ್ರತಿಕ್ರಿಯೆಗಳಿಗೆ ಆಹಾರವಾಗಿದೆ. ಸೆಲೆಬ್ರಿಟಿಗಳ ಈ ಬೃಹತ್ ಬಿಲ್‌ಗಳು ಸಾಮಾನ್ಯವಾಗಿ ಇಂಟರ್ನೆಟ್‌ನಲ್ಲಿ ಕೆಲವು ಉಲ್ಲಾಸದ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ.

ಮುಂಬೈ ಏರ್‌ಪೋರ್ಟ್‌ನಲ್ಲಿ ತಾವು ಆರ್ಡರ್‌ ಮಾಡಿದ್ದ ಆಹಾರದ ಬಿಲ್‌ಅನ್ನು ಫರಾ ಖಾನ್‌ ಹಂಚಿಕೊಂಡಿದ್ದಾರೆ. ಇದರಲ್ಲಿ ಆಕೆ ಒಂದು ಜಿಂಜರ್‌ ಟೀ, ಎರಡು ಸಮೋಸಾ ಹಾಗೂ ಅರ್ಧಲೀಟರ್‌ ಬಾಟಲ್‌ಅನ್ನು ಆರ್ಡರ್‌ ಮಾಡಿದ್ದರು. ಇದಕ್ಕೆ ಆದ ಒಟ್ಟು ಬಿಲ್‌ 490 ರೂಪಾಯಿ. ಚಹಾ ಹಾಗೂ ಸಮೋಸಾ ಒಳ್ಳೆಯ ಕಾಂಬಿನೇಷನ್‌ ಆದರೂ, ಇದಕ್ಕೆ 500 ರೂಪಾಯಿ ತೀರಾ ದುಬಾರಿಯೇ. ಅಚ್ಚೇದಿನ್‌ ಇಲ್ಲಿದೆ ಎಂದು ಅವರು ಮಾಡಿರುವ ಟ್ವೀಟ್‌ಗೆ ಈಗಾಗಲೇ 2.4 ಮಿಲಿಯನ್‌ ವೀವ್ಸ್‌ ಬಂದಿದ್ದರೆ, 16 ಸಾವಿರ ಲೈಕ್ಸ್‌, 6200 ಕಾಮೆಂಟ್ಸ್‌, 3785 ರೀಟ್ವೀಟ್‌ಗಳು ಬಂದಿವೆ. ಇವುಗಳಿಗಿಂತ ಹೆಚ್ಚಾಗಿ ಅವರನ್ನು ಟ್ರೋಲ್‌ ಮಾಡಿರುವ ರೀತಿ ಕೂಡ ಮಜವಾಗಿದೆ.

Scroll to load tweet…


'ಲೌಂಡ್ರಿ ಜರ್ನಲಿಸ್ಟ್‌ ಚಾಚಿ ಮೊದಲು ರೆಡ್‌ಬಸ್‌ನಲ್ಲಿ ಹೋಗ್ತಿದ್ದರು ಹಾಗೂ 10 ರೂಪಾಯಿಯ ಟೀ ಕುಡಿಯುತ್ತಿದ್ದರು. ಅವರೀಗ ಫ್ಲೈಟ್‌ನಲ್ಲಿ ಓಡಾಡ್ತಿದ್ದಾರೆ ಹಾಗೂ 160 ರೂಪಾಯಿಯ ಟೀ ಕುಡೀತಿದ್ದಾರೆ. ಇದು ಅಚ್ಚೇ ದಿನ್‌ ಅಲ್ಲದೇ ಇನ್ನೇನು' ಎಂದು ಸ್ವಾತಿ ಬೆಲ್ಲಂ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ದೀದಿ..ಏರ್‌ಪೋರ್ಟ್‌ನ ಕೆಲವೇ ದೂರದಲ್ಲಿ ಮಸ್ತಾನಾ ಟೀ ಸ್ಟಾಲ್‌ ಇತ್ತಲ್ವ. ನೀವು ಅಲ್ಲಿಗೆ ಹೋಗಿದ್ದರೆ, ನಿಮ್ಮೆಲ್ಲಾ ಆರ್ಡರ್‌ಗಳು 40 ರೂಪಾಯಿ ಅಲ್ಲಿ ಮುಗಿದು ಹೋಗ್ತಿದ್ದವು' ಎಂದು ಹಿಮಾಂಶು ಮಿಶ್ರಾ ಎನ್ನುವವರು ಟ್ವೀಟ್‌ ಮಾಡಿದ್ದಾರೆ. 'ಬಹುಶಃ ನೀವು.. ಪ್ರಯಾಣಕ್ಕೆ ಫ್ಲೈಟ್‌ನ ಬದಲು ಆಟೋ ರಿಕ್ಷಾ ಬಳಕೆ ಮಾಡಬೇಕಿತ್ತು' ಎಂದು ಮ್ಯಾಕ್ಸ್‌ಟೆರ್ನ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

'ನೀವು ಏರ್‌ಪೋರ್ಟ್‌ನಿಂದ ಹೊರಬನ್ನಿ. ಈ-ರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ ಹಾಗೆ ನಿಮಗೆ ಬಾಬಾ ಕ್ಯಾಂಟೀನ್‌ ಸಿಗ್ತದೆ. ಅಲ್ಲಿ ಎಲ್ಲಾ 30ರೂಪಾಯಿಯಲ್ಲಿ ಮುಗಿದು ಹೋಗುತ್ತದೆ. ಆ ನಂತರ ಟ್ರೇನ್‌ ಹಿಡಿದು, ಎಲ್ಲಿಗೆ ಬೇಕಾದರೂ ಹೋಗಿ' ಎಂದು ಅವ್ನೀಶ್‌ ಬರಿಯಾ ಎನ್ನುವವರು ಬರೆದಿದ್ದಾರೆ.

'ಛೇ ನೀವು ಈ ಟ್ವೀಟ್‌ ಮಾಡುವ ಸಲುವಾಗಿ 490 ರೂಪಾಯಿ ಖರ್ಚು ಮಾಡಿದ್ದೀರಿ. ನಿಜಕ್ಕೂ ದುಬಾರಿ' ಎಂದು ಆನಂದ್‌ ಟಿ ಪ್ರಸಾದ್‌ ಎನ್ನುವವರು ಪ್ರತಿಕ್ರಿಯೆ ನೀಡಿದ್ದಾರೆ. ಚಹಾಗೆ 10 ರೂಪಾಯಿ, ಸಮೋಸಾಗೆ 10 ರೂಪಾಯಿ, ಬಿಸ್ಲೆರಿ ವಾಟರ್‌ಗೆ 18 ರೂಪಾಯಿ. ಇದು ಧೋಲ್‌ಪುರದಲ್ಲಿ. ಇದು ಕೂಡ ಅಚ್ಚೇದಿನ್‌ ಅಲ್ಲವೆ' ಎಂದು ಇನ್ನೊಬ್ಬರು ಬರೆದಿದ್ದಾರೆ.

PM Modi Birthday: ಬಡ ಜನರ 'ಅಚ್ಚೇದಿನ್‌' ಸಲುವಾಗಿ ಪ್ರಧಾನಿ ಮೋದಿ ಘೋಷಿಸಿದ 10 ಯೋಜನೆಗಳು

'ಈ ಟ್ವೀಟ್‌ ಮಾಡಿದ್ದರಿಂದ ನಮಗೆ ಅನಿಸೋದು ಏನೆಂದರೆ, ಬಹುಶಃ ನೀವು ಇದೇ ಮೊದಲ ಬಾರಿ ಏರ್‌ಪೋರ್ಟ್‌ಗೆ ಹೊಕ್ಕಿರೋ ರೀತಿ ಇದೆ' ಎಂದು ಬರೆದಿದ್ದಾರೆ. 'ನಾನು ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿದಾಗಲೆಲ್ಲಾ ನನ್ನ ಸುವರ್ಣ ನಿಯಮ... 50 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಕಾಫಿ ಮತ್ತು ತಿಂಡಿಗಳನ್ನು ಸೇವಿಸಿ ನಂತರ ಒಳಗೆ ಹೋಗಿ. ಈ ರೀತಿ 100 ರಲ್ಲಿ ಹಣವನ್ನು ಎಂದಿಗೂ ಎಸೆಯಬೇಡಿ. ಬೀದಿಗಳಲ್ಲಿ ಭಿಕ್ಷೆ ಬೇಡುವ ಯಾರಿಗಾದರೂ ಅದನ್ನು ನೀಡಿ' ಎಂದು ಇನ್ನೊಬ್ಬರು ಬರೆದಿದ್ದಾರೆ.

ಎಲ್ಲಪ್ಪ ಅಚ್ಚೇದಿನ್, ಸಿದ್ದು ಪ್ರಶ್ನೆಗೆ ದಾಖಲೆ ಸಮೇತ ಬೊಮ್ಮಾಯಿ ಉತ್ತರ!

'ನೀವು ಜಂಕ್ ಫುಡ್ ಅನ್ನು ಏಕೆ ಖರೀದಿಸುತ್ತೀರಿ? ಬದಲಿಗೆ ಮನೆಯಿಂದ ಟಿಫಿನ್ ಕ್ಯಾರಿಯರ್ ಒಯ್ಯುವುದೇ? ಉಚಿತ ಉಚಿತ ಉಚಿತ. ವಿಮಾನ ನಿಲ್ದಾಣಗಳಲ್ಲಿ ಟೀ/ಕಾಫಿ ತುಂಬಾ ದುಬಾರಿಯಾಗಿದೆ. ಆದ್ದರಿಂದ, ನಿಮ್ಮ ಕುತ್ತಿಗೆಗೆ ಥರ್ಮೋಸ್ ಫ್ಲಾಸ್ಕ್ ಅನ್ನು ಒಯ್ಯಿರಿ. ಉಚಿತ ಉಚಿತ ಉಚಿತ. ರಸ್ತೆಬದಿ ಸಮೋಸಾ 10 ರೂ. ನಿಮ್ಮ ಕಾರನ್ನು ನಿಲ್ಲಿಸಿ ಮತ್ತು ಮುಂದಿನ ಬಾರಿ ಕೆಲವನ್ನು ಆರಿಸಿ' ಎಂದು ಇನ್ನೊಬರು ಬರೆದಿದ್ದಾರೆ.