Asianet Suvarna News Asianet Suvarna News

ಸಾಮಾಜಿಕ ಮಾಧ್ಯಮ ಬಳಕೆದಾರರ ಸಮಸ್ಯೆ ಆಲಿಸಲು ಸಮಿತಿ

* ಐಟಿ ಸಚಿವಾಲಯದ ಕರಡು ಪ್ರಕಟ

* ಕುಂದುಕೊರತೆ ಅಧಿಕಾರಿ ನಿರ್ಣಯ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ

* 30 ದಿನದೊಳಗೆ ಆಕ್ಷೇಪಣೆ, ಸಲಹೆ-ಸೂಚನೆ ಸಲ್ಲಿಸಲು ಅವಕಾ

News IT rules to ensure Big tech platforms do not contravene constitutional rights govt pod
Author
Bangalore, First Published Jun 7, 2022, 5:09 AM IST

ನವದೆಹಲಿ(ಜೂ.07): ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ ನಿಯಮಗಳ ತಿದ್ದುಪಡಿ ಕರಡನ್ನು ಪ್ರಕಟಿಸಿದೆ. ಇದರಲ್ಲಿ ಸಾಮಾಜಿಕ ಜಾಲತಾಣಗಳ ಕುಂದುಕೊರತೆ ಅಧಿಕಾರಿ (ಗ್ರೀವಿಯನ್ಸ್‌ ಆಫೀಸರ್‌) ನಿರ್ಣಯವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕುಂದುಕೊರತೆ ಮೇಲ್ಮನವಿ ಸಮಿತಿ ಸ್ಥಾಪಿಸುವ ಚಿಂತನೆ ನಡೆಸಿದೆ.

ಈ ಕರಡು ನಿಯಮಗಳಿಗೆ ಆಕ್ಷೇಪಣೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಇನ್ನು 30 ದಿನದೊಳಗೆ ಜನರು ಅನಿಸಿಕೆ-ಅಭಿಪ್ರಾಯ-ಆಕ್ಷೇಪ ತಿಳಿಸಬಹುದು. ಜೂನ್‌ ಮಧ್ಯಭಾಗದಲ್ಲಿನ ಜನತೆಯೊಂದಿಗೆ ಸಭೆಯನ್ನೂ ನಡೆಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

Rajeev Chandrasekhar: ಗ್ಯಾಲಿಯಂ ನೈಟ್ರೇಟ್‌ ತಂತ್ರಜ್ಞಾನಕ್ಕೆ ಮಹತ್ವ

ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಟ್ವೀಟರ್‌ನಂತಹ ಸಾಮಾಜಿಕ ಜಾಲತಾಣಗಳು ಸೆಲೆಬ್ರಿಟಿ ಸೇರಿದಂತೆ ಹಲವರ ಖಾತೆಗಳನ್ನು ರದ್ದುಗೊಳಿಸಿದ ಘಟನೆಗಳು ಪದೇಪದೇ ವರದಿಯಾಗುತ್ತಿರುವೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಹಕ್ಕು ಕಾಪಾಡುವ ಇರಾದೆ ಸರ್ಕಾರಕ್ಕಿದೆ.

ಏನು ತಿದ್ದುಪಡಿ?

ಸಾಮಾಜಿಕ ಜಾಲತಾಣಗಳ ಕುಂದುಕೊರತೆ ಅಧಿಕಾರಿ (ಗ್ರೀವಿಯನ್ಸ್‌ ಆಫೀಸರ್‌) ನಿರ್ಣಯವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು ಕೇಂದ್ರವು ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಸ್ಥಾಪಿಸುವುದು ಕರಡು ನಿಯಮದಲ್ಲಿದೆ.

ರಾಜಪಥದಲ್ಲಿ ಹಾರಲಿದೆ ಶ್ರೀನಗರ ಕಾಪಾಡಿದ, ಬಾಂಗ್ಲಾಗೆ ಸ್ವಾತಂತ್ರ್ಯ ಕೊಟ್ಟ ವಿಂಟೇಜ್ ಡಕೋಟಾ!

ಸಾಮಾಜಿಕ ಜಾಲತಾಣಗಳ ಬಳಕೆದಾರನು ಕುಂದುಕೊರತೆ ಅಧಿಕಾರಿ ಕ್ರಮ ಜರುಗಿಸಿದ 30 ದಿನಗಳೊಳಗಾಗಿ ಸಮಿತಿಗೆ ಮೇಲ್ಮನವಿ ಸಲ್ಲಿಸಬೇಕು. ಸಮಿತಿಯು ಮೇಲ್ಮನವಿ ಶೀಘ್ರ ವಿಚಾರಣೆ ನಡೆಸಿ, ಅರ್ಜಿ ಸ್ವೀಕರಿಸಿದ 30 ದಿನಗಳೊಳಗೆ ಪ್ರಕರಣ ಇತ್ಯರ್ಥಗೊಳಿಸಬೇಕು. ಎಲ್ಲ ಸಾಮಾಜಿಕ ಜಾಲತಾಣದ ಕಂಪನಿಗಳು ಸಮಿತಿಯ ನಿರ್ಣಯಕ್ಕೆ ಬದ್ಧವಾಗಿರಬೇಕು ಎಂದು ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ತಿದ್ದುಪಡಿಯ ಕರಡು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios