Asianet Suvarna News Asianet Suvarna News

ಗಂಗಾ ನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!

  • ಗಂಗಾ ನದಿಯಲ್ಲಿ ತೇಲಿ ಬಂದ ಹಸಗೂಸು ರಕ್ಷಿಸಿದ ದೋಣಿಗಾರ
  • ಗಂಗಾ ನದಿ ನೀಡಿದ ಉಡುಗೊರೆ ಎಂದು ನಾವಿಕ
  • ರಕ್ಷಿಸಿದ ಹೆಣ್ಣು ಮಗಳನ್ನು ಆಸ್ಪತ್ರೆ ದಾಖಲಿಸಿದ ಪೊಲೀಸರು
  • ಪುಟ್ಟ ಕಂದನಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯ ನೀಡುವುದಾಗಿ ಸರ್ಕಾರದ ಭರವಸೆ
Newborn girl found in a wooden box floating in ganga river Rescued By Boatman ckm
Author
Bengaluru, First Published Jun 17, 2021, 3:21 PM IST

ಉತ್ತರ ಪ್ರದೇಶ(ಜೂ.17): ಗಂಗಾ ನದಿಯಲ್ಲಿ ದೋಣಿ ಮೂಲಕ ಜೀವ ಸಾಗಿಸುತ್ತಿದ್ದ ದೋಣಿಗಾರನಿಗೆ ಗುಲ್ಲು ಚೌದರಿಗೆ ಅಚ್ಚರಿ ಕಾದಿತ್ತು. ಕಾರಣ ನದಿಯಲ್ಲಿ ಮರದ ಪೆಟ್ಟಿಗೆಯೊಂದು ತೇಲಿ ಬಂದಿದೆ. ಅಲಂಕರಿಸಿದ್ದ ಈ ಪೆಟ್ಟಿಗೆಯತ್ತ ತನ್ನ ದೋಣಿಯನ್ನು ಹುಟ್ಟು ಹಾಕಿ ಹರಸಾಹಸ ಮಾಡಿ ದಡ ಸೇರಿಸಿದ್ದಾನೆ. ಇನ್ನು ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಪುಟ್ಟ ಕಂದಮ್ಮ ನಿದ್ರಿಸುತ್ತಿದೆ.

ಶೀತಕ್ಕೆ ಮದ್ದು ಕೊಡಿ: ಒಬ್ಬಳೇ ಆಸ್ಪತ್ರೆಗೆ ಬಂದ 3 ವರ್ಷದ ಬಾಲೆ..!.

ಹೆಣ್ಣು ಮಗುವನ್ನು ಪೆಟ್ಟೆಯಲ್ಲಿಟ್ಟು ಗಂಗಾ ನದಿಯಲ್ಲಿ ತೇಲಿ ಬಿಟ್ಟ ಪುಣ್ಯಾತ್ಮರು ಯಾರು ಅನ್ನೋ ಕುರಿತು ತನಿಖೆ ನಡೆಯುತ್ತಿದೆ. ಆದರೆ ಪುಟ್ಟ ಕಂದಮ್ಮನ ಪಡೆದ ಗುಲ್ಲು ಚೌಧರಿ ಸಂತಸ ಹೇಳತೀರದು. ಗಂಗಾ ನದಿ ನೀಡಿದ ಉಡುಗೊರೆ ಎಂದು ಸ್ವೀಕರಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ಶಿಶು ವೈದ್ಯಕ್ಷೀಯ ಪರೀಕ್ಷೆಗಳನ್ನು ನಡೆಸಿ ಪೊಷಕರ ಪತ್ತೆ ಹಚ್ಚಲ ಪೊಲೀಸರು ಮುಂದಾಗಿದ್ದಾರೆ. ಸದ್ಯ ಈ ಮಗುವಿನ ಪೋಷಣೆ ಜವಾಬ್ದಾರಿ ಯಾರಿಗೆ ನೀಡಬೇಕು ಅನ್ನೋ ಕುರಿತು ಪೊಲೀಸರು ಯಾವುದೇ ಸ್ಪಷ್ಟತೆ ನೀಡಿಲ್ಲ.  ಆದರೆ ಮಗುವನ್ನು ರಕ್ಷಿಸಿದ ಗುಲ್ಲಾ ಚೌಧರಿಗಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿನಂದನೆ ಸಲ್ಲಿಸಿದ್ದಾರೆ.

ಗಿನ್ನೆಸ್‌ ದಾಖಲೆ: 10 ಮಕ್ಕಳನ್ನು ಹೆತ್ತಳು ತಾಯಿ!

ಮಗುವನ್ನು ಬೆಳೆಸಲು ಸರ್ಕಾರ ವ್ಯವಸ್ಥೆ ಮಾಡಲಿದೆ. ಮಗುವಿಗೆ ಸರ್ಕಾರದ ಎಲ್ಲಾ ನೆರವು ಹಾಗೂ ಎಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ರಕ್ಷಿಸಿದ ಹೆಣ್ಣು ಮಗುವನ್ನು ತನಗೆ ನೀಡಬೇಕು ಎಂದು ಗುಲ್ಲಾ ಚೌಧರಿ ಮನವಿ ಮಾಡಿದ್ದಾರೆ. ದೇವರು ನನಗೆ ನೀಡಿದ ಉಡುಗೊರೆ. ಮುದ್ದಾಗಿ ಸಾಕುವುದಾಗಿ ಗುಲ್ಲಾ ಚೌಧರಿ ಹೇಳಿದ್ದಾರೆ. ಆದರೆ ಸದ್ಯ ಮಗು ಮಕ್ಕಳ ಆರೈಕೆ ಕೇಂದ್ರದಲ್ಲಿದ್ದು, ಸರ್ಕಾರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದೆ.

Follow Us:
Download App:
  • android
  • ios