ನಾಗಾಲ್ಯಾಂಡ್(ಜೂ.05): ಮೂರು ವರ್ಷದ ಲಿಪಾವಿ ಸ್ವತಃ ಹೆಬೊಲಿಮಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರವನ್ನು ತಲುಪಿದಾಗ, ವೈದ್ಯಕೀಯ ಸಿಬ್ಬಂದಿ ಆಶ್ಚರ್ಯಚಕಿತರಾದರು. ಹುಡುಗಿಗೆ ಶೀತದ ಲಕ್ಷಣಗಳು ಇದ್ದವು, ಆದರೆ ಆಕೆಯ ಪೋಷಕರು ಕೆಲಸದಲ್ಲಿದ್ದರು. ಆದ್ದರಿಂದ ಅವಳು ತಾನೇ ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದಾಖೆ.

ಲಿಪಾವಿ ಅವರ ವೈದ್ಯರ ಭೇಟಿಯ ಫೋಟೋವನ್ನು ನಾಗಾಲ್ಯಾಂಡ್‌ನ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ರಾಜ್ಯ ಅಧ್ಯಕ್ಷ ಬೆಂಜಮಿನ್ ಯೆಪ್ತೋಮಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

"3 ವರ್ಷದ ಮಿಸ್ ಲಿಪಾವಿ ಆರೋಗ್ಯ ಕೇಂದ್ರಕ್ಕೆ ಬಂದಾಗ ವೈದ್ಯಕೀಯ ಸಿಬ್ಬಂದಿ ಆಹ್ಲಾದಕರವಾದ ಆಶ್ಚರ್ಯಕ್ಕೆ ಒಳಗಾಗಿದ್ದರು. ಆಕೆಗೆ ಶೀತದ ಲಕ್ಷಣಗಳಿತ್ತು. ಆದರೆ ಆಕೆಯ ಪೋಷಕರು ಭತ್ತದ ಗದ್ದೆಗೆ ತೆರಳಿದ್ದರಿಂದ, ಆಕೆ ಸ್ವತಃ ಬರಲು ನಿರ್ಧರಿಸಿದ್ದಾಳೆ ಎಂದು ಆಕೆ ವೈದ್ಯರಿಗೆ ಹೇಳಿದ್ದಾಳೆ.

ಬಂಗಾಳದಲ್ಲಿ ಬಿಜೆಪಿಗರಿಗೆ ನೀರು, ದಿನಸಿ ಬಂದ್: ವ್ಯಾಕ್ಸಿನ್ ಕೂಡಾ ಸಿಗಲ್ಲ!...

ವಯಸ್ಕರು ತಮ್ಮನ್ನು ಪರೀಕ್ಷಿಸಲು ಮತ್ತು ಲಸಿಕೆ ಹಾಕಲು ಹಿಂಜರಿಯುತ್ತಿರುವ ಸಮಯದಲ್ಲಿ ಲಿಪಾವಿ, ಅವರ ಮುಗ್ಧತೆಯಲ್ಲಿ ಶೀತಕ್ಕೆ ಮದ್ದು ತೆಗೆದುಕೊಳ್ಳಲು ಬಂದಿದ್ದಾರೆ. ಜವಾಬ್ದಾರಿ ತೆಗೆದುಕೊಳ್ಳುವುದು ಈ ಸಮಯದ ಅವಶ್ಯಕತೆಯಾಗಿದೆ. ಬಾಲಕಿ ಲಿಪಾವಿ ಉತ್ತಮವಾಗಿರಲಿ, ಆಕೆ ಆರೋಗ್ಯದಿಂದಿರಲಿ, ದೇವರು ಆಶೀರ್ವದಿಸಲಿ ಎಂದಿದ್ದಾರೆ.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಲಿಪಾವಿ ಅವರ ಜವಾಬ್ದಾರಿಯ ಪ್ರಜ್ಞೆಯನ್ನು ನೆಟ್ಟಿಗರು ಹೊಗಳಿದ್ದಾರೆ. ಒಬ್ಬ ಬಳಕೆದಾರರು, "ಅವಳು ಹೀರೋ. ಚಿಕ್ಕ ವಯಸ್ಸಿನಲ್ಲಿ ಈ ಬೃಹತ್ ಜವಾಬ್ದಾರಿ. ಸಾಕಷ್ಟು ಪ್ರೀತಿ ಮತ್ತು ಆಶೀರ್ವಾದಗಳು. ಇದನ್ನು ದೇಶದ ಜವಾಬ್ದಾರಿಯುತ ನಾಗರಿಕ ಎಂದು ಕರೆಯಲಾಗುತ್ತದೆ" ಎಂದು ಹೇಳಿದ್ದಾರೆ ನೆಟ್ಟಿಗರು. "ಜವಾಬ್ದಾರಿ! ಆದರೆ ಅವಳು ಹೇಗೆ ತಾನಾಗಿಯೇ ಬಂದಳು ..... ಅವಳು ಒಬ್ಬಂಟಿಯಾಗಿ ಹೊರಗೆ ಹೋಗಲು ಚಿಕ್ಕವಳು ಎಂದಿದ್ದಾರೆ.