Asianet Suvarna News Asianet Suvarna News

Women Power: ಹೆರಿಗೆ ನೋವಲ್ಲೇ ಸೈಕಲ್ ತುಳಿದು ಅಸ್ಪತ್ರೆ ತಲುಪಿದ ಸಂಸದೆ, ನಾರಿ ಶಕ್ತಿಗೆ ತಲೆಬಾಗಿದ ವಿಶ್ವ!

* ನಾರಿ ಶಕ್ತಿಗಿಲ್ಲ ಸರಿಸಾಟಿ

* ಹೆರಿಗೆ ನೋವಿನ ಮಧ್ಯೆ ಸೈಕಲ್ ತುಳಿದು ಆಸ್ಪತ್ರೆ ತಲುಪಿದ ಸಂಸದೆ

* ಸಂಸದೆಯ ಧೈರ್ಯ, ಸಹನೆಗೆ ಭೇಷ್ ಎಂದ ವಿಶ್ವ

New Zealand MP gives birth after cycling to hospital in labour Viral story pod
Author
Bangalore, First Published Nov 28, 2021, 8:43 PM IST

ನ್ಯೂಜಿಲೆಂಡ್(ನ.28): ಮಹಿಳೆ ಏನು ಮಾಡಲು ಸಾಧ್ಯವಿಲ್ಲ? ಆಕೆಯಿಂದ ಏನು ಬೇಕಾದರೂ ಮಾಡಲು ಸಾಧ್ಯ. ಇಂತಹ ವಿಷಯಗಳನ್ನು ಆಗಾಗ್ಗೆ ಹೇಳಲಾಗುತ್ತದೆ ಮತ್ತು ಕೇಳಲಾಗುತ್ತದೆ. ಆದರೆ ನ್ಯೂಜಿಲೆಂಡ್ ಸಂಸದರು (New Zealand MP)  ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೆರಿಗೆ (Labor Pain) ನೋವಿದ್ದರೂ ಖುದ್ದು ತಾನೇ ಸೈಕಲ್ (Cycling) ತುಳಿಯುತ್ತಾ ಆಸ್ಪತ್ರೆ ತಲುಪಿದ್ದಾರೆ. ನಂತರ ಒಂದು ಗಂಟೆಯ ಬಳಿಕ ಇಲ್ಲಿಅವರ ಹೆರಿಗೆ (Delivery)ಮಾಡಲಾಗಿದೆ. ನ್ಯೂಜಿಲೆಂಡ್ ಸಂಸದೆ ಜೂಲಿ ಅನ್ನೆ ಜೆಂಟರ್ (Julie Anne Genter) ಅವರ ಕಥೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಜೆಂಟರ್ ಅವರ ಪೋಸ್ಟ್‌ನಲ್ಲಿ ಏನು ಬರೆದಿದ್ದಾರೆ?

ಸಂಸದೆ ಜೂಲಿ ಅನ್ನೆ ಜೆಂಟರ್ ಅವರಿಗೆ ಮಧ್ಯಾಹ್ನ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇದಾದ ನಂತರ ಆಕೆ ಸೈಕಲ್ ತುಳಿದು ಆಸ್ಪತ್ರೆ ತಲುಪಿದ್ದಾಳೆ. ಸುಮಾರು ಒಂದು ಗಂಟೆಯ ನಂತರ  ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಗ್ಗೆ ಬರೆದ ಜೆಂಡರ್, ದೊಡ್ಡ ಸುದ್ದಿ! ಇಂದು ಮುಂಜಾನೆ 3.04 ಕ್ಕೆ ನಾವು ನಮ್ಮ ಕುಟುಂಬದ ಹೊಸ ಸದಸ್ಯರನ್ನು ಸ್ವಾಗತಿಸಿದೆವು. ನಾನು ನಿಜವಾಗಿಯೂ ಸೈಕಲ್ ಓಡಿಸಲು ಯೋಜಿಸುತ್ತಿದ್ದೆ, ಆದರೆ ಕೊನೆಯಲ್ಲಿ ಅದು ನಿಜವಾಯಿತು. ನಾವು ಆಸ್ಪತ್ರೆಗೆ ಹೋಗಲು 2 ಗಂಟೆಗೆ ಹೊರಡುವಾಗ, ಹೆಚ್ಚಿನ ತೊಂದರೆ ಇರಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ ನೋವು ತೀವ್ರಗೊಂಡಿತು. ನಂತರ 2 ರಿಂದ 3 ಕಿಲೋಮೀಟರ್ ದೂರವನ್ನು ಕ್ರಮಿಸಲು ಸುಮಾರು 10 ನಿಮಿಷಗಳನ್ನು ತೆಗೆದುಕೊಂಡಿತು. ನನ್ನ ಹೊಟ್ಟೆಯಲ್ಲಿ ಆರೋಗ್ಯವಂತ ಮಗು ನಿದ್ರಿಸುತ್ತಿದೆ ಎಂದು ನಮಗೆ ತಿಳಿದಿತ್ತು. ಅದರ ತಂದೆಯಂತೆಯೇ ಶಾಂತ. ಆಸ್ಪತ್ರೆ ತಲುಪಿದ ನಂತರ ದೊಡ್ಡ ತಂಡ ಸಿಕ್ಕಿತು. ಶೀಘ್ರದಲ್ಲೇ ನಾನು ಅವನ ಸಮ್ಮುಖದಲ್ಲಿ ಮಗುವಿಗೆ ಜನ್ಮ ನೀಡಿದೆ ಎಂದಿದ್ದಾರೆ.

“Big news! At 3.04am this morning we welcomed the newest member of our family. I genuinely wasn’t planning to cycle in labour, but it did end up happening. My contractions weren’t that bad when we left at 2am to go to the hospital - though they were 2-3 min apart and picking up in intensity by the time we arrived 10 minutes later. (I’m smiling in the car park right after one.) And amazingly now we have a healthy, happy little one sleeping, as is her dad. Feeling blessed to have had excellent care and support from a great team, in what turned out to be a very fast (and happily uncomplicated) birth.” 

ಸೈಕ್ಲಿಂಗ್ ಪ್ರಯೋಜನಕಾರಿ ಎಂದಿದ್ದ ಜನರು

ಜೆಂಟರ್ ಅವರ ಪೋಸ್ಟ್ ನೆಟಿಜನ್‌ಗಳಿಂದ ಹೆಚ್ಚು ಮೆಚ್ಚುಗೆ ಪಡೆದಿದೆ. ಜನರು ಹಾರೈಸಿದ್ದಾರೆ. ಇನ್ನು ಕೆಲವರು ಹೆರಿಗೆ ಸಮಯದಲ್ಲಿ ಸೈಕ್ಲಿಂಗ್ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಯಿತು ಎಂದಿದ್ದಾರೆ. ಸೈಕಲ್ ನಲ್ಲಿ ಮಗುವಿಗೆ ಜನ್ಮ ನೀಡಲು ಜೆಂಟರ್ ಆಸ್ಪತ್ರೆ ತಲುಪಿದ್ದು ಇದೇ ಮೊದಲಲ್ಲ. ಮೂರು ವರ್ಷಗಳ ಹಿಂದೆಯೂ ಸೈಕಲ್ ನಲ್ಲಿ ಆಕ್ಲೆಂಡ್ ಆಸ್ಪತ್ರೆಗೆ ಬಂದು ಮಗುವಿಗೆ ಜನ್ಮ ನೀಡಿದ್ದರು.

Follow Us:
Download App:
  • android
  • ios