Asianet Suvarna News Asianet Suvarna News

2022 Calendar: ಹೊಸ ವರ್ಷದಲ್ಲಿದೆ 23ಕ್ಕೂ ಹೆಚ್ಚು ಸಾರ್ವಜನಿಕ ರಜೆ, ಹಾಲಿಡೇ ಲಿಸ್ಟ್‌ಗೆ ಕ್ಯಾಬಿನೆಟ್ ಅನುಮೋದನೆ!

  • ಹೊಸ ವರ್ಷ ಬರಮಾಡಿಕೊಳ್ಳಲು ಈಗಿನಿಂದಲೇ ತಯಾರಿ ಆರಂಭ
  • 2022ರಲ್ಲಿನ ಸಾರ್ವಜನಿಕ ರಜೆ ಪಟ್ಟಿಗೆ ಕ್ಯಾಬಿನೆಟ್ ಅನುಮೋದನೆ
  • 2 ಮತ್ತು 4ನೇ ಶನಿವಾರ ಹೊರತು ಪಡಿಸಿ 23 ರಜೆ
New Year Cabinet approved list of public holidays for calendar year 2022 India ckm
Author
Bengaluru, First Published Nov 27, 2021, 7:01 PM IST
  • Facebook
  • Twitter
  • Whatsapp

ನವದೆಹಲಿ(ನ.27):  ಪ್ರಸಕ್ತ ವರ್ಷಕ್ಕೆ ಗುಡ್ ಬೈ ಹೇಳಿ ಹೊಸ ವರ್ಷವನ್ನು(New Year 2022) ಬರಮಾಡಿಕೊಳ್ಳಲು ತಯಾರಿ ಆರಂಭಗೊಂಡಿದೆ. 2021ರ ವರ್ಷ ಹಲವು ಏಳು ಬೀಳುಗಳನ್ನು ಕಂಡ ವರ್ಷವಾಗಿದೆ. ಇದೀಗ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಮತ್ತೊಂದು ಕಾರಣವಿದೆ. 2022ರ ಸಾರ್ವಜನಿಕ ರಜೆ(Holiday) ಪಟ್ಟಿಗೆ ಕ್ಯಾಬಿನೆಟ್ ಅನುಮೋದನೆ(Cabinet) ನೀಡಿದೆ. ಮುಂದಿನ ವರ್ಷ 23ಕ್ಕೂ ಹೆಚ್ಚು ಸಾರ್ವಜನಿಕ ರಜೆಗೆ(Public holiday) ಅನುಮೋದನೆ ನೀಡಲಾಗಿದೆ.

ಕ್ಯಾಬಿನೆಟ್ ಅನುಮೋದನೆ ನೀಡಿರವ ರಜೆ ಪಟ್ಟಿಯಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆಗಳು ಸೇರಿಸಲಾಗಿಲ್ಲ. ಪ್ರತಿ ತಿಂಗಳ 2 ಮತ್ತು 4ನೇ ಶನಿವಾರದ ರಜೆ ಸೇರಿದರೆ ವರ್ಷದಲ್ಲಿ 24 ರಜೆಗಳು ಸಿಗಲಿದೆ. ಇದರೊಂದಿಗೆ 23ಕ್ಕೂ ಹೆಚ್ಚು ಸಾರ್ವಜನಿಕ ರಜೆಗಳು ಸಿಗಲಿದೆ. 

Bank Holiday:ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್!

2022ರ ಕ್ಯಾಲೆಂಡರ್ ವರ್ಷದ ರಜಾದಿನಗಳು:
ಜನವರಿ 15, 2022, ಶನಿವಾರ, ಮಕರ ಸಂಕ್ರಾತಿ, ಉತ್ತರಾಯಣ ಪುಣ್ಯಕಾಲ
ಜನವರಿ 26, 2022, ಬುಧವಾರ, ಗಣರಾಜ್ಯೋತ್ಸವ ದಿನ
ಮಾರ್ಚ್ 1, 2022, ಮಂಗಳವಾರ, ಮಹಾ ಶಿವರಾತ್ರಿ
ಎಪ್ರಿಲ್ 1, 2022, ಶುಕ್ರವಾರ, ಕ್ಲೋಸಿಂಗ್ ಆಫ್ ಬ್ಯಾಂಕ್ ಅಕೌಂಟ್(ಆರ್ಥಿಕ ವರ್ಷಾಂತ್ಯ ದಿನ)
ಎಪ್ರಿಲ್ 2, 2022, ಶನಿವಾರ, ಯುಗಾದಿ
ಎಪ್ರಿಲ್ 14, 2022, ಗುರುವಾರ, ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
ಎಪ್ರಿಲ್ 15, 2022, ಶುಕ್ರವಾರ, ಗುಡ್ ಫ್ರೈಡೇ
ಮೇ 1, 2022, ಭಾನುವಾರ, ಕಾರ್ಮಿಕರ ದಿನ
ಮೇ, 3, 2022, ಮಂಗಳವಾರ, ಬಸವ ಜಯಂತಿ, ಅಕ್ಷಯ ತೃತೀಯ
ಜುಲೈ 10, 2022, ಭಾನುವಾರ, ಬಕ್ರಿದ್
ಆಗಸ್ಟ್ 9, 2022, ಮಂಗಳವಾರ, ಮೊಹರಂ
ಆಗಸ್ಟ್ 15, 2022, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 31, 2022, ಬುಧವಾರ, ವರಸಿದ್ದಿ ವಿನಾಯಕ ವ್ರತ
ಸೆಪ್ಟೆಂಬರ್ 25, 2022, ಭಾನುವಾರ , ಮಹಾಲಯ ಅಮವಾಸ್ಯೆ
ಅಕ್ಟೋಬರ್ 2, 2022, ಭಾನುವಾರ, ಗಾಂಧಿ ಜಯಂತಿ
ಅಕ್ಟೋಬರ್ 4, 2022, ಮಂಗಳವಾರ, ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 5, 2022, ಬುಧವಾರ, ವಿಜಯದಶಮಿ
ಅಕ್ಟೋಬರ್ 9, 2022, ಭಾನುವಾರ, ವಾಲ್ಮೀಕಿ ಜಯಂತಿ
ಅಕ್ಟೋಬರ್ 24, 2022, ಸೋಮವಾರ, ನರಕ ಚತುರ್ದಶಿ
ಅಕ್ಟೋಬರ್ 26, 2022, ಬುಧವಾರ, ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 1, 2022, ಮಂಗಳವಾರ, ಕನ್ನಡ ರಾಜ್ಯೋತ್ಸವ
ನವೆಂಬರ್ 11, 2022, ಶುಕ್ರವಾರ, ಕನಕದಾಸ ಜಯಂತಿ
ಡಿಸೆಂಬರ್ 25, 2022, ಭಾನುವಾರ, ಕ್ರಿಸ್ಮಸ್

23 ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಭಾನುವಾರ ರಜೆಯೂ ಸೇರಿಕೊಳ್ಳಲಿದೆ. ಆದರೆ ಈ ಬಾರಿ 5 ಸಾರ್ವಜನಿಕ ರಜೆಗಳು ಭಾನುವಾರ ಬಂದಿದೆ. ಇದು ಹಲವರಿಗೆ ಕೊಂಚ ನಿರಾಸೆ ತರುವುದು ಸುಳ್ಳಲಿಲ್ಲ. ಭಾನುವಾರ (Sunday)ಹೊರತು ಪಡಿಸಿ ಇತರ ದಿನಗಳಲ್ಲಿ ಈ ಸಾರ್ವಜನಿಕ ರಜೆ ಆಗಮಿಸಿದ್ದರೆ ಸಂಭ್ರಮ ಮತ್ತಷ್ಟು ಡಬಲ್ ಅನ್ನೋದು ಹಲವರ ಮಾತಾಗಿದೆ.

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಕೊಡುಗೆ

ಕರ್ನಾಟಕದಲ್ಲಿ(Karnataka) ಕೆಲ ಜಿಲ್ಲೆಗಳಲ್ಲಿ ಅಲ್ಲಿನ ವಿಶೇಷತೆಗಳಿಗೆ ಅನುಗುಣವಾಗಿ ರಜೆಗಳಿವೆ. ಉದಾಹರಣೆಗ ಕೊಡಗು(Kodagu) ಜಿಲ್ಲೆಯಲ್ಲಿ ಸೆಪ್ಟೆಂಬರ್ 3, 2022ರಂದು ಕೈಲ್ ಮೂಹೂರ್ತಕ್ಕಾಗಿ ರಜೆ ನೀಡಲಾಗಿದೆ. ಇನ್ನು ಅಕ್ಟೋಬರ್ 18 ರಂದು ಕಾವೇರಿ ಸಂಕ್ರಮಣ  ಹಾಗೂ ಡಿಸೆಂಬರ್ 8 ರಂದು ಹುತ್ತರಿಗೆ ರಜೆ ನೀಡಲಾಗಿದೆ. ಕರ್ನಾಟಕ ಇತರ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಗಳ ಜಾತ್ರೆ ಸೇರಿದಂತೆ ಇತರ ವಿಶೇಷ ದಿನಗಳಿಗೆ ರಜೆ ನೀಡಲಾಗಿದೆ. ಇದೀಗ ಈ ರಜಾ ದಿನಗಳಲ್ಲಿ ಕೊರೋನಾ ಎಚ್ಚರಿಕೆಯೊಂದಿಗೆ ರಜಾ ದಿನ ಪ್ಲಾನ್ ಮಾಡಿಕೊಳ್ಳಬಹುದು.

Follow Us:
Download App:
  • android
  • ios