Bank Holiday:ಡಿಸೆಂಬರ್ ನಲ್ಲಿ12 ದಿನ ಬ್ಯಾಂಕ್ ಕ್ಲೋಸ್!
ಡಿಸೆಂಬರ್ ನಲ್ಲಿ ಬ್ಯಾಂಕ್ಗೆ ಹೋಗೋ ಮುನ್ನ ನೀವು ಯಾವೆಲ್ಲ ದಿನ ರಜೆಯಿದೆ ಎಂದು ನೋಡಿ ಹೋಗೋದು ಒಳ್ಳೆಯದು. ಏಕೆಂದ್ರೆ ಡಿಸೆಂಬರ್ ನಲ್ಲಿ 12 ದಿನ ಬ್ಯಾಂಕ್ ಕಾರ್ಯನಿರ್ವಹಿಸೋದಿಲ್ಲ.
ನೀವೇನಾದ್ರೂ ಡಿಸೆಂಬರ್ ನಲ್ಲಿ ಬ್ಯಾಂಕ್ಗೆ (Bank) ಹೋಗಿ ಒಂದಿಷ್ಟು ಕೆಲಸಗಳನ್ನು ಮುಗಿಸಿಕೊಂಡು ಬರೋ ಪ್ಲ್ಯಾನ್(plan) ಹಾಕೊಂಡಿದ್ರೆ ನಿಮಗೆ ಈ ವಿಷಯ ತಿಳಿದಿರಲೇಬೇಕು. ಅದೇನಪ್ಪ ಅಂದ್ರೆ ಡಿಸೆಂಬರ್ ನಲ್ಲಿ ಬ್ಯಾಂಕ್ಗೆ ಬರೋಬರಿ 12 ದಿನಗಳ ರಜೆಯಿದೆ (Holidays). ಭಾರತೀಯ ರಿಸರ್ವ್ ಬ್ಯಾಂಕ್ನ (RBI)ರಜಾದಿನಗಳ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ12 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ. ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಈ ರಜಾಪಟ್ಟಿಯಲ್ಲಿ(Holiday list) ಸೇರ್ಪಡೆಯಾಗಿವೆ. ಹೀಗಾಗಿ ಡಿಸೆಂಬರ್ ನಲ್ಲಿ ಬ್ಯಾಂಕ್ಗೆ ಭೇಟಿ ನೀಡೋ ಮುನ್ನ ನೀವು ಈ ರಜಾಪಟ್ಟಿಯನ್ನು ಗಮನಿಸಿ ಹೋಗೋದು ಒಳ್ಳೆಯದು. ತುರ್ತಾಗಿ ಮಾಡಬೇಕಾದ ಬ್ಯಾಂಕಿಂಗ್ ವ್ಯವಹಾರಗಳೇನಾದ್ರೂ ಈ ರಜಾದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಂದು ಇಟ್ಟುಕೊಳ್ಳಿ.
ಯಾವೆಲ್ಲ ದಿನ ರಜೆ?
ಡಿಸೆಂಬರ್ 3: ಫೀಸ್ಟ್ ಆಫ್ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿಸೆಂಬರ್ 5: ಭಾನುವಾರ
ಡಿಸೆಂಬರ್ 11: ಎರಡನೇ ಶನಿವಾರ
ಡಿಸೆಂಬರ್ 12: ಭಾನುವಾರ
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 24: ಕ್ರಿಸ್ಮಸ್ ಈವ್
ಡಿಸೆಂಬರ್ 25: ಕ್ರಿಸ್ಮಸ್ ಮತ್ತು ನಾಲ್ಕನೇ ಶನಿವಾರ
ಡಿಸೆಂಬರ್ 26: ಭಾನುವಾರ
ಡಿಸೆಂಬರ್ 27: ಕ್ರಿಸ್ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್
Gold rate:ಬಂಗಾರಪ್ರಿಯರೆ ಗಮನಿಸಿ, ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ
ಆನ್ಲೈನ್ ವ್ಯವಹಾರಕ್ಕೆ ಅಡ್ಡಿಯಿಲ್ಲ
ಈ ಎಲ್ಲ ರಜಾದಿನಗಳಂದು ಆನ್ಲೈನ್ ಬ್ಯಾಂಕಿಂಗ್ ವ್ಯವಹಾರಗಳಿಗೆ ಯಾವುದೇ ತೊಂದರೆಯಾಗೋದಿಲ್ಲ. ಹೀಗಾಗಿ ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಹೊಂದಿರೋರು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಆದ್ರೆ ಬ್ಯಾಂಕ್ಗೆ ಹೋಗಿಯೇ ಮಾಡುವಂತಹ ಕೆಲಸಗಳಿದ್ರೆ ಮಾತ್ರ ರಜಾ ದಿನಗಳನ್ನು ಗಮನಿಸಿ ಹೋಗಿ.
ಆನ್ಲೈನ್ ಬ್ಯಾಂಕಿಂಗ್ (Online Banking) ಹೊಂದಿರದ ಗ್ರಾಹಕರಿಗೆ ತೊಂದ್ರೆ
ಗ್ರಾಮೀಣ ಭಾಗದ ಅನೇಕ ಜನರಿಗೆ ಆನ್ಲೈನ್ ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ತಿಳಿದಿಲ್ಲ. ಅವರು ಪ್ರತಿ ಕೆಲಸಕ್ಕೂ ಬ್ಯಾಂಕಿಗೆ ಹೋಗುತ್ತಾರೆ. ಖಾತೆಯಲ್ಲಿರೋ ಹಣ ಪಡೆಯಲು ಕೂಡ ಬ್ಯಾಂಕ್ಗೇ ಹೋಗುವಂತಹ ಜನರಿದ್ದಾರೆ. ಅಂಥವರಿಗೆ ಈ ರೀತಿ ಸಾಲು ಸಾಲು ರಜೆಗಳು ಬಂದಾಗ ತೊಂದರೆಯಾಗೋದು ಸಾಮಾನ್ಯ. ಹೀಗಾಗಿ ಖರ್ಚಿಗೆ ಅಗತ್ಯವಿರೋವಷ್ಟು ಹಣವನ್ನು ಮೊದಲೇ ತೆಗೆದಿಟ್ಟುಕೊಳ್ಳಿ. ಇದ್ರಿಂದ ಈ ರಜಾದಿನಗಳಂದು ಪರದಾಡಬೇಕಾದ ಅನಿವಾರ್ಯತೆ ತಪ್ಪುತ್ತದೆ. ಇನ್ನು ಸಾಲ ಪಡೆಯೋದು ಸೇರಿದಂತೆ ಯಾವುದಾದ್ರೂ ಪ್ರಮುಖ ಕೆಲಸಗಳಿಗೆ ಬ್ಯಾಂಕ್ಗೆ ದಾಖಲೆಗಳನ್ನು ಸಲ್ಲಿಸೋ ಕಾರ್ಯವಿದ್ರೂ ಕೂಡ ಈ ರಜಾದಿನಗಳನ್ನು ಗಮನದಲ್ಲಿಟ್ಟುಕೊಳ್ಳಿ. ಅದ್ರಲ್ಲೂ 24ರಿಂದ 27 ತನಕ ಸತತ 4 ದಿನಗಳು ರಜೆಯಿರೋ ಕಾರಣ ಈ ಸಮಯದಲ್ಲಿ ಯಾವುದೇ ಬ್ಯಾಂಕಿಂಗ್ ವ್ಯವಹಾರಗಳನ್ನಿಟ್ಟುಕೊಳ್ಳಬೇಡಿ.
Mukesh Ambaniಗೆ ಬಿಗ್ ಶಾಕ್, ಗೌತಮ್ ಅದಾನಿ ಈಗ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ!
ಎಲ್ಲ ರಾಜ್ಯಗಳಲ್ಲೂ12 ದಿನ ರಜೆಯಿಲ್ಲ
ರಿಸರ್ವ್ ಬ್ಯಾಂಕ್ ರಜಾಪಟ್ಟಿಯಲ್ಲಿದೆ ಎಂದ ಮಾತ್ರಕ್ಕೆ ಎಲ್ಲ ರಾಜ್ಯಗಳ ಬ್ಯಾಂಕ್ಗಳಿಗೆ 12 ದಿನಗಳ ರಜೆ ಇರೋದಿಲ್ಲ. ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಸಾರ್ವಜನಿಕ ಹಾಗೂ ಗೆಜೆಟೆಡ್ ರಜಾ ದಿನಗಳು ಮಾತ್ರ ದೇಶಾದ್ಯಂತ ಎಲ್ಲ ಬ್ಯಾಂಕ್ಗಳಿಗೂ ಅನ್ವಯಿಸುತ್ತವೆ. ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಕೂಡ ಈ ಪಟ್ಟಿಯಲ್ಲಿ ಸೇರಿರೋ ಕಾರಣ ಈ ದಿನಗಳಂದು ದೇಶಾದ್ಯಂತ ಬ್ಯಾಂಕ್ಗಳು ಕಾರ್ಯನಿರ್ವಹಿಸೋದಿಲ್ಲ. ಕೆಲವೊಂದು ರಜೆಗಳನ್ನು ಆಯಾ ರಾಜ್ಯಗಳ ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ನೀಡಲಾಗುತ್ತದೆ. ಹೀಗಾಗಿ ಕರ್ನಾಟದ ಬ್ಯಾಂಕ್ಗಳಿಗೆ ಡಿಸೆಂಬರ್ನಲ್ಲಿ 12 ದಿನಗಳ ರಜೆಯಿದೆ ಎಂದ ಮಾತ್ರಕ್ಕೆ ಬೇರೆ ರಾಜ್ಯಗಳಲ್ಲಿನ ಬ್ಯಾಂಕ್ಗಳಿಗೂ ಇಷ್ಟೇ ದಿನ ರಜೆಯಿದೆ ಎಂದರ್ಥವಲ್ಲ.