Asianet Suvarna News Asianet Suvarna News

ಕೊರೋನಾ ನಂತ್ರ ರೂಪುಗೊಳ್ಳುತ್ತಿರುವ ವಿಶ್ವಕ್ಕೆ ಭಾರತವೇ ಗುರು; ಪ್ರಧಾನಿ ಮೋದಿ!

ಭಾರತ ಇದೀಗ ವಿಶ್ವದ ಶಕ್ತಿಯಾಗಿ ಹೊರಹೊಮ್ಮಿದೆ. ಇದೇ ಶಕ್ತಿ ವಿಶ್ವ ರೂಪುಗೊಳ್ಳಲು ನೆರವಾಗಲಿದೆ. ಕೊರೋನಾ ನಂತ್ರ ಉದಯವಾಗುತ್ತಿರುವ ವಿಶ್ವಕ್ಕೆ ಭಾರತದ ದಾರಿ ದೀಪವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. NDA ಕೂಟದ ನಾಯಕನ್ನುದ್ದೇಶಿಸಿ ಮೋದಿ ಮಾಡಿದ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

New world order is about to take shape and India play big role Pm Modi addressed NDA leaders ckm
Author
Bengaluru, First Published Jan 30, 2021, 8:43 PM IST

ನವದೆಹಲಿ(ಜ.30): ಕೊರೋನಾ ವಕ್ಕರಿಸಿದ ಬಳಿಕ ಇಡೀ ವಿಶ್ವವೇ ಭಾರತದ ನೆರವನ್ನು ಬಯಸುತ್ತಿದೆ.  ಆರಂಭಿಕ ಹಂತದಲ್ಲಿ ಭಾರತ ತೆಗೆದುಕೊಂಡ ನಿರ್ಣಯಗಳನ್ನು ಇತರ ದೇಶಗಳು ಅಳವಡಿಸಿಕೊಂಡಿತು. ಇದೀಗ ಭಾರತದಿಂದ ಕೊರೋನಾ ಲಸಿಕೆಯನ್ನು ಎದುರುನೋಡುತ್ತಿದೆ. ಇದೀಗ ಇಡೀ ವಿಶ್ವ ಚೇತರಿಸಿಕೊಳ್ಳುತ್ತಿದೆ. ಹೊಸದಾಗಿ ರೂಪುಗೊಳ್ಳುತ್ತಿದೆ. ಈ ರೂಪುಗೊಳ್ಳುತ್ತಿರುವ ಹೊಸ ವಿಶ್ವದಲ್ಲಿ ಭಾರತದ ಪಾತ್ರವೇ ಪ್ರಮುಖ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಸ್ತ್ರಾಸ್ತ್ರ ತಯಾರಿಯಲ್ಲಿ ವಿಶ್ವಕ್ಕೇ ಲೀಡರ್ ಆಗಲಿದೆ ಭಾರತ : ಮೋದಿ

ಎನ್‌ಡಿಎ ಕೂಟದ ನಾಯಕನ್ನುದ್ದೇಶಿ ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಹೊಸ ವಿಶ್ವ ಹಾಗೂ ಭಾರತದ ಪಾತ್ರ ಕುರಿತು ಹಲವು ವಿಚಾರ ಬೆಳಕು ಚೆಲ್ಲಿದ್ದಾರೆ.  ಪಸಕ್ತ ದಶಕ ಅತೀ ಮುಖ್ಯವಾಗಿದೆ. ಎರಡನೇ ಮಹಾ ಯುದ್ಧದ ಬಳಿಕ ನಿರ್ಮಾಣವಾಗಿರುವ ಪರಿಸ್ಥಿತಿ ಈಗಲೂ ಇದೆ. ಆದರೆ ಅಂದು ಭಾರತದ ಪರಿಸ್ಥಿತಿ ಹಾಗೂ ಶಕ್ತಿ ಸಾಮರ್ಥ್ಯವೇ ಬೇರೆಯಾಗಿತ್ತು. ಆದರೆ ಇಂದು ಭಾರತ ಮೂಕ ಪ್ರೇಕ್ಷಕರಾಗುವುದಿಲ್ಲ. ನಮ್ಮ ಸಂಪ್ರದಾಯಗಳು ಮತ್ತು ವಸುದೈವಕಂ ಕುಟುಂಬಕಂ ಆದರ್ಶಗಳಿಂದ ಸೂರ್ಯನಂತೆ ಪ್ರಜ್ವಲಿಸಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಎನ್‌ಡಿಎ ಕೂಟದ ನಾಯಕರನ್ನುದ್ದೇಶಿ ಮೋದಿ ಮಾಡಿದ ಭಾಷಣವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. 

 

ಕೊರೋನಾ ವಕ್ಕರಿಸಿದ ಬಳಿಕ ಎಲ್ಲವೂ ಬದಲಾಗಿದೆ. ಎಲ್ಲಾ ಕ್ಷೇತ್ರಗಳು ಹೊಸ ಸವಾಲನ್ನು ಸ್ವೀಕರಿಸಿ ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತವೇ ಇತರ ದೇಶಕ್ಕೆ ಮಾದರಿಯಾಗಿದೆ. ಇನ್ನು ಕೊರೋನಾ ಲಸಿಕೆ ವಿತರಣೆಯಲ್ಲಿ ಅತೀ ದೊಡ್ಡ ವಾಕ್ಸಿನೇಶನ್‌ಗೆ ಚಾಲನೆ ನೀಡಿದೆ. ಭಾರತದ ಕಾರ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಇತರ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿದೆ. 

Follow Us:
Download App:
  • android
  • ios