Asianet Suvarna News Asianet Suvarna News

ಕೋವಿಡ್‌ ಅಣಕಿಗೆ ಒಳಗಾದವರು, ಕೋವಿಡ್‌ ಅಣಕಿಸುವವರ ನಡುವೆ ಸೃಷ್ಟಿಯಾಗಿದೆ ಜಗತ್ತು..!

ಅನಿರೀಕ್ಷಿತ ರೀತಿಯ ಏಕತೆಯು ಗಾಳಿಯಲ್ಲಿದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋವಿಡ್‌ ಬಂದು, ಪರಿಪೂರ್ಣ ಆಸ್ಪತ್ರೆಯ ಉಡುಗೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೋವಿಡ್‌ ಬಂದು ಆಸ್ಪತ್ರೆ ಸೇರಿಕೊಂಡಿದ್ದಾಗಿದೆ. ಅತ್ತ ದೆಹಲಿಯಲ್ಲಿ ಅಮಿತ್‌ ಶಾ ಕೂಡ ವೈರಸ್‌ಗೆ ಸಿಲುಕಿ ಖಾಸಗಿ ಆಸ್ಪತ್ರೆಗೆ ಸೇರಿದ್ದಾರೆ. ಕೋವಿಡ್‌ ದಯೆಯಿಂದ ಭಾರತವು ವೈರಲ್‌ ಕುಟುಂಬವಾಗಿ ಒಂದಾಗುತ್ತಿದೆ.

new world Created after covid 19 pandemic
Author
Bengaluru, First Published Aug 9, 2020, 2:20 PM IST | Last Updated Aug 9, 2020, 2:20 PM IST

ಬೆಂಗಳೂರು (ಆ. 09): ಅನಿರೀಕ್ಷಿತ ರೀತಿಯ ಏಕತೆಯು ಗಾಳಿಯಲ್ಲಿದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೋವಿಡ್‌ ಬಂದು, ಪರಿಪೂರ್ಣ ಆಸ್ಪತ್ರೆಯ ಉಡುಗೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಕೋವಿಡ್‌ ಬಂದು ಆಸ್ಪತ್ರೆ ಸೇರಿಕೊಂಡಿದ್ದಾಗಿದೆ. ಅತ್ತ ದೆಹಲಿಯಲ್ಲಿ ಅಮಿತ್‌ ಶಾ ಕೂಡ ವೈರಸ್‌ಗೆ ಸಿಲುಕಿ ಖಾಸಗಿ ಆಸ್ಪತ್ರೆಗೆ ಸೇರಿದ್ದಾರೆ. ಕೋವಿಡ್‌ ದಯೆಯಿಂದ ಭಾರತವು ವೈರಲ್‌ ಕುಟುಂಬವಾಗಿ ಒಂದಾಗುತ್ತಿದೆ.

ನಮ್ಮ ದೇಶವು ಮುಂದುವರಿಯುತ್ತಿರುವ ರೀತಿಗೆ ಇದರಿಂದ ಒಳ್ಳೆಯದೇ ಆಗಬಹುದು. ಪ್ರತಿಯೊಬ್ಬರಿಗೂ ಗೊತ್ತಿರುವಂತೆ ಎಲ್ಲ ರೀತಿಯ ಕಾರಣಗಳಿಗೂ ನಮ್ಮ ನಾಯಕರಲ್ಲಿ ಗುಂಪುಗಾರಿಕೆಯ ಬಡಿದಾಟ ಇದ್ದದ್ದೇ. ಎಡಪಂಥೀಯ ಮತ್ತು ಬಲಪಂಥೀಯ ಹೋರಾಟ ಇದ್ದಾಗ ಸಿದ್ಧಾಂತವು ಕಾರಣವಾಗಿತ್ತು. ಅದೇನೋ ಸರಿ, ಏಕೆಂದರೆ, ಆ ದಿನಗಳಲ್ಲಿ ಎಡ-ಬಲವನ್ನು ಸ್ವಾಭಾವಿಕವಾದದ್ದು ಮತ್ತು ದೇಶವನ್ನು ಒಡೆಯುವಂಥ ಅನಾರೋಗ್ಯಕರ ಮಾರ್ಗವೆಂದು ಕಾಣುತ್ತಿರಲಿಲ್ಲ. ಯಾವಾಗ ಹಿಂದುತ್ವವು ಪ್ರಮುಖ ನಿರ್ಧಾರಕ ಶಕ್ತಿಯಾಯಿತೋ ಆಗ ಪರಿಸ್ಥಿತಿಯು ಸಂಕೀರ್ಣವಾಯಿತು. ಅದು ಹಿಂದುಗಳನ್ನೂ ಒಳ್ಳೆಯ ಹಿಂದು ಮತ್ತು ಒಳ್ಳೆಯವರಲ್ಲದ ಹಿಂದು ಎಂದು ವಿಭಜಿಸಿತು. ಒಳ್ಳೆಯ ಮತ್ತು ಒಳ್ಳೆಯವರಲ್ಲದ ಎಂಬುದರ ವ್ಯಾಖ್ಯೆಗಳು ನಿಮ್ಮ ದೃಷ್ಟಿಯ ಕೋನವನ್ನು ಅವಲಂಬಿಸಿರುತ್ತದೆ. ಇದೀಗ, ಕೋವಿಡ್‌ ಭಾರತೀಯ ಮತ್ತು ಕೋವಿಡ್‌ ಇಲ್ಲದ ಭಾರತೀಯ ಎಂದು ನಮ್ಮನ್ನು ವಿಭಜಿಸಿದ್ದರೆ ಭವಿಷ್ಯವು ಉಜ್ವಲವಾಗಿರಬಹುದೆಂದು ಭಾಸವಾಗುತ್ತಿದೆ.

ಆದರೆ ಇದರಲ್ಲೂ ರಾಜಕಾರಣಿಗಳು ಮಧ್ಯಪ್ರವೇಶಿಸಿದ್ದಾರೆ ಮತ್ತು ಸಂಗತಿಗಳನ್ನು ಹೆಚ್ಚು ಸಂದಿಗ್ಧ ಮತ್ತು ಸಂಕೀರ್ಣ ಮಾಡುತ್ತಿದ್ದಾರೆ. ನಾವು ನಮ್ಮಷ್ಟಕ್ಕೆ ಹೊಸ ಆಧುನಿಕತಾ ಸಿದ್ಧಾಂತಕ್ಕೆ ತಕ್ಕಂತೆ ನಮ್ಮನು ವಿಭಾಗಿಸಿಕೊಳ್ಳಬಹುದು ಎಂದು ಆಲೋಚಿಸುತ್ತಿರುವಾಗಲೇ, ಕೋವಿಡ್‌ ಯಡಿಯೂರಪ್ಪನವರು ಕೋವಿಡ್‌ ಸಿದ್ದರಾಮಯ್ಯ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ.

ಸಿಲಿಕಾನ್ ಸಿಟಿ ಜನರ ಬದುಕಿಗೆ ಕೊರೊನಾ ಬರೆ; 50 ಸಾವಿರ ಶಾಪ್‌ಗಳು ಕ್ಲೋಸ್.!

ಅವರು ಅದನ್ನು ಔಪಚಾರಿಕವಾದ ಫೋಟೋ ಹೊಡೆಸಿಕೊಳ್ಳುವ ಮಟ್ಟಕ್ಕೆ ಬಿಟ್ಟಿದ್ದರೆ ಸಂಗತಿಗಳೆಲ್ಲ ಸರಿಯಾಗಿಯೇ ಇರುತ್ತಿದ್ದವು. ಆದರೆ ಅವರು ಸ್ನೇಹಿತರಂತೆ ಮಾತುಕತೆಯಲ್ಲಿ ತೊಡಗಿದರು, ಅತ್ಯಪರೂಪದ ಸಂತೋಷಿಗಳಾದರು ಮತ್ತು ಹೃದಯ ಬಿಚ್ಚಿ ನಗುವುದಕ್ಕೂ ಆರಂಭಿಸಿದರು ಎಂದು ಹೇಳಲಾಗಿದೆ. ಅವರು ಕೋವಿಡ್‌ ಅನ್ನು ಬೆಸುಗೆಯ ಬಲವನ್ನಾಗಿ ಬದಲಾಯಿಸಿದರು. ಕೋವಿಡ್‌ ಲೇಪಿತ ರಾಜಕೀಯವು ನಮ್ಮ ದೇಶವನ್ನು ಎತ್ತ ಒಯ್ಯುತ್ತಿದೆ?

ನಾವು ದೆಹಲಿಯ ಕಡೆಗೆ ತಿರುಗಿದರೆ ಅಲ್ಲಿ ದೇಶದ ಅತ್ಯಂತ ಬುದ್ಧಿವಂತರು ಅಧಿಕಾರದ ಸ್ಥಾನದಲ್ಲಿದ್ದಾರೆ. ಇಂಥ ಸನ್ನಿವೇಶದಲ್ಲಿ ನಮ್ಮನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಸೂಕ್ಷ್ಮ ವಿವೇಚನೆಯುಳ್ಳ ಸಚಿವರನ್ನು ನಾವು ನಿರೀಕ್ಷಿಸುತ್ತೇವೆ. ಆದರೆ, ಕೆಲ ಕೇಂದ್ರ ಸಚಿವರು ತಮಗೆ ಕೋವಿಡ್‌ ತಗಲುವುದಕ್ಕೆ ಮೊದಲು, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತವು ಹೇಗೆ ಯಶಸ್ವಿಯಾಗಿದೆ ಎಂದು ಜಗತ್ತಿಗೆ ಸಾರುವುದರಲ್ಲಿ ತತ್ಪರರಾಗಿದ್ದರು. ಯಶಸ್ಸನ್ನು ಅಳೆಯುವುದಕ್ಕೆ ಅವರು ತಮ್ಮದೇ ದಾರಿಯನ್ನು ಕಂಡುಕೊಂಡಿದ್ದರು.

ಅವರ ಪ್ರಕಾರ ವೈರಸ್‌ನಿಂದ ಭಾರತದಲ್ಲಿ ಸತ್ತವರ ಪ್ರಮಾಣವು ಇತರ ದೇಶಗಳಲ್ಲಿ ಅದರಿಂದ ಸತ್ತವರ ಪ್ರಮಾಣಕ್ಕಿಂತ ಕಡಿಮೆ. ನಾವು ಈ ಯುದ್ಧದಲ್ಲಿ ಚೆನ್ನಾಗಿಯೇ ಹೋರಾಡಿದ್ದೇವೆ ಎಂಬುದನ್ನು ಅದು ತೋರಿಸುತ್ತದೆ ಎಂದು ಹೇಳಿದ್ದರು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಬ್ರೆಜಿಲ್‌ನ ಅದಕ್ಷತೆಯು ಭಾರತದ ದಕ್ಷತೆಯನ್ನು ಅಳೆಯುವ ಮಾನದಂಡ. ನಿಜವಾಗಿಯೂ, ಸೋಂಕುರೋಗದ ಅತ್ಯಂತ ತೀವ್ರವಾದ ಬೆಳವಣಿಗೆಯನ್ನು ಭಾರತವು ದಾಖಲಿಸಿದೆ. ಮತ್ತು ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಮೂರನೆ ಸ್ಥಾನದಲ್ಲಿದೆ. ಆ ಸೋಂಕಿತರ ಸಂಖ್ಯೆಯಲ್ಲಿ ಈಗ ಕೇಂದ್ರ ಸಚಿವರೂ ಸೇರಿಕೊಂಡಿದ್ದಾರೆ. ಸಮಸ್ಯೆಯನ್ನು ನಿರ್ವಹಿಸುವಲ್ಲಿ ಭಾರತವು ಹೆಚ್ಚು ವ್ಯವಹಾರಕುಶಲತೆಯಿಂದ ವರ್ತಿಸುವುದೆಂದು ಆಶಿಸೋಣ.

ಆದರೆ ಒಂದು ಸಂಗತಿಯು ಈಗಾಗಲೆ ಸ್ಪಷ್ಟವಾಗಿದೆ. ಈ ಅನಿರೀಕ್ಷಿತ, ಅಪರಿಚಿತ ಮತ್ತು ಸೊಕ್ಕಿನ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ನಮ್ಮ ಆರೋಗ್ಯ ಮೂಲಸೌಕರ್ಯಗಳ ಅಳವಿಗೆ ಮೀರಿದೆ. ಪ್ರತಿ ದಿನವೂ ಸುಮಾರು 50 ಸಾವಿರ ಸೋಂಕಿತರು ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಆರೋಗ್ಯ ಸಿಬ್ಬಂದಿ ನಿಯಮಿತವಾಗಿ ಭೇಟಿ ನೀಡದ ದೂರದ ಒಳನಾಡುಗಳ ಸಂಖ್ಯೆ ಬಹುಶಃ ಇದರಲ್ಲಿ ಸೇರ್ಪಡೆಯಾಗಿಲ್ಲ. ತೀವ್ರ ರೋಗಪೀಡಿತ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ರೋಗ ಪರೀಕ್ಷೆ ಪ್ರಮಾಣವು ತುಂಬ ಕೆಳಗಿದೆ ಎಂಬುದನ್ನು ನಾವು ಮರೆಯದಿರೋಣ. ಇಂಥ ಸಂಗತಿಗಳನ್ನೆಲ್ಲ ನಾವು ಗಣನೆಗೆ ತೆಗೆದುಕೊಂಡರೆ ನಿಜವಾದ ಸಂಖ್ಯೆಯು ಭಯ ಹುಟ್ಟಿಸುವಷ್ಟಾಗಬಹುದು.

ಹಾಕಿ ಟೀಂ ಇಡಿಯಾದ ನಾಯಕ ಸೇರಿ ಐವರಿಗೆ ಕೊರೊನಾ ಕನ್ಫರ್ಮ್..!

ಆದರೆ ಈಗ ಯಾರೂ ಭಯಪಡುವಂತೆ ಕಾಣುವುದಿಲ್ಲ, ಏಕೆಂದರೆ ಕರ್ನಾಟಕದ ಜನಪ್ರಿಯ ನಾಯಕರು ಆಸ್ಪತ್ರೆಯಲ್ಲಿ ಸಂತೋಷದಿಂದ ಇದ್ದಾರೆ. ಜನಸಾಮಾನ್ಯರು ಮಾನಸಿಕವಾಗಿ ತಮ್ಮ ನಾಯಕರನ್ನು ಅನುಸರಿಸುತ್ತಾರೆ. ಹೀಗಾಗಿ ಕೋವಿಡ್‌ ಕೇವಲ ಮಾದರಿಯಾಗುತ್ತಿಲ್ಲ, ಆದರೆ ದೇಶಭಕ್ತಿಯ ಕುರುಹೂ ಆಗುವ ಸಾಧ್ಯತೆಗಳಿವೆ. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಖಂಡಿತವಾಗಿಯೂ ಕೋವಿಡ್‌ ಒಂದು ಆನಂದಿಸಬಹುದಾದ ಅನುಭವ ಎಂಬ ಭಾವನೆಯನ್ನು ಮೂಡಿಸಿದ್ದಾರೆ. ಈ ನಾಯಕರ ಕಟ್ಟಾಅನುಯಾಯಿಗಳು ನಿಷ್ಠೆಯ ಸಂಕೇತವಾಗಿ ತಾವೂ ಕೋವಿಡ್‌ ಬರಿಸಿಕೊಂಡರೆ ಯಾರನ್ನು ಆಕ್ಷೇಪಿಸಬೇಕು!

ಪರಿಸ್ಥಿತಿಯ ನೋವಿನ ಮುಖವನ್ನು ಬೆಳಕಿಗೆ ತಂದವರು ದೆಹಲಿಯ ಉಪಮುಖ್ಯಮಂತ್ರಿ ಮನಿಶ್‌ ಸಿಸೋಡಿಯಾ. ಎಲ್ಲ ಅಧಿಕಾರವನ್ನು ಹೊಂದಿರುವ ದೆಹಲಿಯ ಉಪ ರಾಜ್ಯಪಾಲರಿಗೆ ಅಧಿಕಾರವಿಲ್ಲದ ಈ ಸಚಿವರು ಬರೆದ ಪತ್ರದಲ್ಲಿ, ವಾರದ ಮಾರುಕಟ್ಟೆಗಳನ್ನು ಬಂದ್‌ ಮಾಡಿರುವುದರಿಂದ ಐದು ಲಕ್ಷ ಕುಟುಂಬಗಳು ಬಲವಂತವಾಗಿ ತಮ್ಮ ಮನೆಗಳಲ್ಲಿ ಕೆಲಸವಿಲ್ಲದೆ ಕುಳಿತಿವೆ. ಕೋವಿಡ್‌ ನಿಯಂತ್ರಣಕ್ಕೆ ಬಂದಿರುವುದರಿಂದ ಹೋಟೆಲ್‌ಗಳು ಮತ್ತು ಮಾರುಕಟ್ಟೆಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದರು. ಹೀಗೆ ಮಾಡದೆ ಇದ್ದರೆ, ದೆಹಲಿಯ ಆರ್ಥಿಕ ಪರಿಸ್ಥಿತಿಗೆ ಮತ್ತು ಲಕ್ಷಾಂತರ ಜನರ ನಿರೀಕ್ಷೆಗಳಿಗೆ ಅನ್ಯಾಯವೆಸಗಿದಂತೆ ಆಗುತ್ತದೆ ಎಂದು ಹೇಳಿದ್ದರು. ಉಪ ರಾಜ್ಯಪಾಲರು ಪ್ರಭಾವಿತರಾಗಲಿಲ್ಲ. ಸಂಪುಟದ ಪ್ರಸ್ತಾವನೆ/ ವಿನಂತಿಯನ್ನು ಅವರು ತಿರಸ್ಕರಿಸಿದರು. ನೀಡಿದ ಕಾರಣ, ಪರಿಸ್ಥಿತಿ ನಾಜೂಕಾಗಿಯೇ ಇದೆ ಎಂಬುದು. ನೇಮಕಗೊಂಡ ಅಧಿಕಾರಿಯ ಮುಂದೆ ಚುನಾಯಿತ ಸರ್ಕಾರ ಬಾಗುವಂತಾಯಿತು.

ಕೋವಿಡ್‌ನಿಂದಾದ ಪರಿಣಾಮಗಳನ್ನು ಅನೇಕ ಜನರು ಸಂಶಯಾತೀತವಾಗಿ ಸ್ವಾಗತಿಸಿಯೂ ಇದ್ದಾರೆ. ಲಾಕ್‌ಡೌನ್‌ನಿಂದ ಹಲವು ದೇಶಗಳಲ್ಲಿ ಲಕ್ಷಾಂತರ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಆದರೆ ಸಾವಿರಾರು ಜನರಿಗೆ ಸಂತೋಷವೂ ಆಗಿದೆ, ಏಕೆಂದರೆ ಅವರು ಮನೆಯಲ್ಲಿ ಕುಳಿತು ಬದುಕನ್ನು ಆನಂದಿಸುತ್ತಿದ್ದಾರೆ. ನಿಮ್ಮ ಬಳಿ ಎಲ್ಲ ಅನುಕೂಲಗಳು ಇದ್ದರೆ ಅದರಿಂದ ನೀವು ಕೆಲಸವಿಲ್ಲದೆಯೂ ಬದುಕಬಹುದು. ಆಗ ಕೋವಿಡ್‌ ಅನ್ನು ನಿರ್ಲಕ್ಷಿಸುವ ವಿಶೇಷ ವ್ಯಕ್ತಿಗಳಲ್ಲಿ ನೀವು ಒಬ್ಬರಾಗುತ್ತೀರಿ. ಕಥೆಯ ನೀತಿ: ಕೋವಿಡ್‌ ಅಣಕಿಗೆ ಒಳಗಾದವರು ಮತ್ತು ಕೋವಿಡ್‌ಅನ್ನು ಅಣಕಿಸುವವರ ನಡುವೆ ಜಗತ್ತು ವಿಭಜನೆಗೊಂಡಿದೆ.

- ಟಿಜೆಎಸ್ ಜಾರ್ಜ್ 

Latest Videos
Follow Us:
Download App:
  • android
  • ios