ಜು.1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ?: ವಾರಕ್ಕೆ 4 ದಿನ, ದಿನಕ್ಕೆ 12 ಗಂಟೆ ಕೆಲಸ!

* ವಾರಕ್ಕೆ 4 ದಿನ, ದಿನಕ್ಕೆ 12 ಗಂಟೆ ಕೆಲಸ, ಟೇಕ್‌ಹೋಮ್‌ ವೇತನ ಕಡಿತ

* ಜು.1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ?

* ಏನಿದು ಕಾರ್ಮಿಕ ಸಂಹಿತೆ? ಇಲ್ಲಿದೆ ವಿವರ

New wage code likely from July 1 Changes in Leave, reduced in hand salary pod

ನವದೆಹಲಿ(ಜೂ.22): ಮೋದಿ ಸರ್ಕಾರವು ಜುಲೈ 1 ರಿಂದ ವೇತನ, ಸಾಮಾಜಿಕ ಭದ್ರತೆ, ಉದ್ಯೋಗ ಸುರಕ್ಷತೆ ಹಾಗೂ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಯ ಆಧಾರದ ಮೇಲೆ 4 ಹೊಸ ಕಾರ್ಮಿಕ ಸಂಹಿತೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಹೊಸ ಕಾರ್ಮಿಕ ಸಂಹಿತೆಯಲ್ಲಿ ಉದ್ಯೋಗಿಗಳ ಕೆಲಸದ ಅವಧಿ, ವೇತನ, ಭವಿಷ್ಯ ನಿಧಿಯಲ್ಲಿ ಕೊಡುಗೆ, ಗಳಿಕೆ ರಜೆಯ ನಗದೀಕರಣ ಮೊದಲಾದ ವಿಚಾರಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲಾಗುವುದು ಎನ್ನಲಾಗಿದೆ.

Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

ಹೊಸ ಕಾರ್ಮಿಕ ಸಂಹಿತೆಯ ಕರಡುಗಳನ್ನು 23 ರಾಜ್ಯಗಳು ಈಗಾಗಲೇ ಪ್ರಕಟಿಸಿವೆ. ಫೆ. 2021ರಲ್ಲಿ ಕೇಂದ್ರ ಸರ್ಕಾರವು ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನಯ ಪೂರ್ಣಗೊಳಿಸಿದೆ. ಕೇಂದ್ರ ಸರ್ಕಾರವು ಸೆ.29, 2020ರಂದು ವೇತನದ ಸಂಹಿತೆ (2019), ಕೈಗಾರಿಕಾ ಸಂಬಂಧಗಳ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020) ಹಾಗೂ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಸಂಹಿತೆ (2020) ಅನ್ನು ಪ್ರಕಟಿಸಿತ್ತು.

ಕಾರ್ಮಿಕ ವಿಚಾರವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಏಕಕಾಲದಲ್ಲಿಯೇ ಹೊಸ ಸಂಹಿತೆ ಜಾರಿಗೆ ತರಲಿ ಎಂದು ಬಯಸುತ್ತಿದೆ ಎನ್ನಲಾಗಿದೆ.

ಏನೇನು ಬದಲಾವಣೆ?

ಈ ಹೊಸ ಕಾರ್ಮಿಕ ಸಂಹಿತೆ ಜಾರಿಗೆ ಬಂದರೆ ಕೈಗೆ ಬರುವ ವೇತನದ ಪ್ರಮಾಣ ಕಡಿಮೆಯಾಗಿ ಪಿಎಫ್‌ ಹಾಗೂ ಗ್ಯಾಚ್ಯುಟಿಯ ಪ್ರಮಾಣದಲ್ಲಿ ಏರಿಕೆಯಾಗಬಹುದು. ವಾರದಲ್ಲಿ 4 ದಿನ ಮಾತ್ರ ಕೆಲಸಕ್ಕೆ ಹಾಜರಾಗಬೇಕಾಗಿದ್ದು, ದೈನಂದಿನ ಕೆಲಸದ ಅವಧಿಯನ್ನು 12 ಗಂಟೆಗೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಜ್ಞರು ಹೇಳಿದ್ದಾರೆ.

Edible Oil Price:ಗೃಹಿಣಿಯರಿಗೆ ಸಿಹಿ ಸುದ್ದಿ; ಅಡುಗೆ ಎಣ್ಣೆ ಬೆಲೆ ಲೀಟರ್ ಗೆ 15ರೂ. ಇಳಿಕೆ

ರಜೆಯ ವ್ಯವಸ್ಥೆಯಲ್ಲೂ ಭಾರೀ ಬದಲಾವಣೆಗಳನ್ನು ಮಾಡಲಿದ್ದು, 1 ವರ್ಷದಲ್ಲಿ ಸರ್ಕಾರಿ ಇಲಾಖೆಗಳಿಗೆ 30 ದಿನಗಳ ರಜೆ ಸಿಗಲಿದೆ. ರಕ್ಷಣಾ ಸಿಬ್ಬಂದಿಗೆ 60 ದಿನಗಳ ರಜೆ ಸಿಗಲಿದೆ. ಕ್ಯಾರಿ ಫಾರ್ವರ್ಡ್‌ ಮಾದರಿಯಲ್ಲಿ ಉದ್ಯೋಗಿಗಳು 300 ಗಳಿಕೆ ರಜೆಯನ್ನು ನಗದು ಮಾಡಿಸಿಕೊಳ್ಳಬಹುದಾಗಿದೆ. ಪ್ರಸ್ತುತ ವಿವಿಧ ಸರ್ಕಾರಿ ವಿಭಾಗಗಳಿಗೆ 240 ರಿಂದ 300 ಗಳಿಕೆ ರಜೆಗಳು ನೀಡಲಾಗುತ್ತದೆ. 20 ವರ್ಷಗಳ ಸೇವೆಯ ಬಳಿಕ ಉದ್ಯೋಗಿಗಳು ಗಳಿಕೆ ರಜೆಯನ್ನು ನಗದಾಗಿ ಪರಿವರ್ತಿಸಬಹುದಾಗಿದೆ.

Latest Videos
Follow Us:
Download App:
  • android
  • ios