: ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣ| ಅಂಬಾನಿ ಮನೆ ಮುಂದೆ ಸ್ಫೋಟಕ: ಇಬ್ಬರ ನಕಲಿ ಎನ್ಕೌಂಟರ್‌ಗೆ ವಾಝೆ ಸ್ಕೆಚ್‌!

ಮುಂಬೈ(ಏ.15): ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣದಲ್ಲಿ ಬಂಧಿಯಾಗಿರುವ ಪೊಲೀಸ್‌ ಅಧಿಕಾರಿ ಸಚಿನ್‌ ವಾಝೆ, ಈ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ‘ನಕಲಿ ಎನ್‌ಕೌಂಟರ್‌’ ಮೂಲಕ ಹತ್ಯೆ ನಡೆಸಿ ಅದರ ಯಶಸ್ಸು ಪಡೆಯುವ ದೊಡ್ಡ ಯೋಜನೆ ರೂಪಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ವಾಝೆ ಮನೆ ಪರಿಶೀಲಿನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಪಾಸ್‌ಪೋರ್ಟ್‌ ಲಭ್ಯವಾಗಿದೆ. ವಾಝೆ ಈ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿ ಸೇರಿ ಇಬ್ಬರನ್ನು ನಕಲಿ ಎನ್‌ಕೌಂಟರ್‌ ಮೂಲಕ ಹತ್ಯೆ ಮಾಡಲು ಯೋಜನೆ ರೂಪಿಸಿದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಕಳೆದ ಫೆ.25ರಂದು ಮುಕೇಶ್‌ ಅಂಬಾನಿ ಮನೆಮುಂದೆ ಸ್ಫೋಟಕ ಇದ್ದ ಕಾರು ಪತ್ತೆಯಾಗಿತ್ತು. ಅದರ ಬೆನ್ನಲ್ಲೇ ಕಾರಿನ ಮಾಲೀಕ ಮನ್ಸುಖ್‌ ಹಿರೇನ್‌ ಹತ್ಯೆಯಾಗಿತ್ತು.