Asianet Suvarna News Asianet Suvarna News

ವಿಮಾನ ಏರುವವರಿಗೆ  ಹೊಸ ಮಾರ್ಗಸೂಚಿ, ನಿಮಗೆ ಗೊತ್ತಿರಲೇಬೇಕು!

ದೇಶಿಯ ವಿಮಾನ ಹಾರಾಟಕ್ಕೆ ಕ್ಷಣಗಣನೆ/ ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸೂಚನೆ/ ಪ್ರಯಾಣಿಕರಿಗೆ ಥರ್ಮಲ್ ಸ್ಕಿನಿಂಗ್ ಕಡ್ಡಾಯ/ ಮಾಸ್ಕ್ , ಆರೋಗ್ಯ ಸೇತು ಆಪ್ ಇರಬೇಕು

New Rules For Domestic International Travel
Author
Bengaluru, First Published May 24, 2020, 11:05 PM IST
  • Facebook
  • Twitter
  • Whatsapp

ನವದೆಹಲಿ(ಮೇ 24) ಸುಮಾರು ಎರಡು ತಿಂಗಳಿನಿಂದ  ಬಂದ್ ಆಗಿರುವ ದೇಶಿಯ ವಿಮಾನಯಾನ ಮೇ 25 ಸೋಮವಾರ ಪುನರ್ ಆರಂಭವಾಗಲಿದೆ.  ವಿಮಾನ, ರೈಲು ಮತ್ತು  ಅಂತರರಾಜ್ಯ ಬಸ್ ಪ್ರಯಾಣಕ್ಕೆ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ. 

ವಿಮಾನ ಪ್ರಯಾಣಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಎರಡು ತಾಸು ಮುಂಚೆ ತಲುಪಿ, ತಾಪಾಸಣೆಗೆ ಒಳಪಡಬೇಕು.  ಮಾಸ್ಕ್ ಧರಿಸುವುದು  ಕಡ್ಡಾಯ,. ಕಡಿಮೆ  ಲಗೇಜ್ ತೆಗೆದುಕೊಂಡು ಹೋಗಬೇಕು. ಆರೋಗ್ಯ ಸೇತು ಆಪ್ ಮೂಲಕ ಇರಲೇಬೇಕು.

ತವರಿಗೆ ದೂರದಿಂದ ಕರೆತಂದ ಕನ್ನಡಿಗ ಫೈಲಟ್

ಪ್ರಯಾಣಿಕರನ್ನು ತಪಾಸಣೆಗೊಳಪಡಿಸಿ ಸೋಂಕು ಲಕ್ಷಣ ಇಲ್ಲದ ಪ್ರಯಾಣಿಕರನ್ನು ಮಾತ್ರ ಪ್ರಯಾಣಕ್ಕೆ ಅನುಮತಿಸಬೇಕು. ಸೋಂಕು ಲಕ್ಷಣ ಇರುವವರನ್ನು ಆರೋಗ್ಯ  ಕೇಂದ್ರಗಳಿಗೆ, ಸೋಂಕು ತೀವ್ರತೆ ಹೆಚ್ಚಿರುವವವರನ್ನು ಕೋವಿಡ್ 19 ಆಸ್ಪತ್ರೆಗಳಿಗೆ ದಾಖಲಿಸಬೇಕು ವಿಮಾನ ನಿಲ್ದಾಣದಿಂದ ಹೊರಬರುವಾಗಲೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ರವಾನಿಸಿದೆ.

ಕೊರೋನಾದಿಂದ ತತ್ತರಿಸುತ್ತಿರುವ   ಮಹಾರಾಷ್ಟ್ರ ಮತ್ತು ತಮಿಳುನಾಡು ಸರ್ಕಾರಗಳು ವಿಮಾನ ಹಾರಾಟಕ್ಕೆ ಅನುಮತಿ ನೀಡಿಲ್ಲ.   ಅಂತರರಾಜ್ಯ ಬಸ್ ಪ್ರಯಾಣ ಮತ್ತು ರೈಲು ಪ್ರಯಾಣಕ್ಕೂ ಇದೇ ಮಾರ್ಗಸೂಚಿಗಳು ಅನ್ವಯಿಸುತ್ತವೆ ಎಂದು ಸಚಿವಾಲಯ ಹೇಳಿದೆ.

ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೂ ಸಚಿವಾಲಯ ಮಾರ್ಗಸೂಚಿ ನೀಡಿದೆ.  ವಿದೇಶಗಳಿಂದ ಆಗಮಿಸುವವರು 14 ದಿನಗಳ ಕಡ್ಡಾಯ  ಕ್ವಾರಂಟೈನ್ ಗೆ ಒಳಪಡಬೇಕು. ಇದರಲ್ಲಿ ಏಳು ದಿನಗಳ  ಹೊಟೇಲ್ ಕ್ವಾರಂಟೈನ್ ,  ಏಳುದಿನಗಳ ಗೃಹ ಕ್ವಾರಂಟೈನ್  ಸೇರಿದ್ದು, ಕ್ವಾರಂಟೈನ್ ನ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. 

ಅಂತಾಷ್ಟ್ರೀಯ ವಿಮಾನ ಸೇವೆಯನ್ನು ಜೂನ್ ಮಧ್ಯಭಾಗದಿಂದ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.  ಈಗಾಗಲೇ ಹಲವು ರಾಜ್ಯಗಳಲ್ಲಿ ಬಸ್ ಸಂಚಾರ ಆರಂಭವಾಗಿದೆ. ಜೂನ್ 1 ರಿಂದ ರೈಲುಗಳು ಸಂಚಾರ ನಡೆಸಲಿವೆ. 

Follow Us:
Download App:
  • android
  • ios