ಗಣೇಶ ಚತುರ್ಥಿಗೆ ನೂತನ ಸಂಸತ್ ಭವನದಲ್ಲಿ ಕಲಾಪ ಆರಂಭ?
ಸೆ.18ರಿಂದ ಕರೆಯಲಾಗಿರುವ ವಿಶೇಷ ಸಂಸತ್ ಅಧಿವೇಶನ ಹಳೆಯ ಸಂಸತ್ ಭವನದಲ್ಲಿ ಆರಂಭವಾಗಲಿದ್ದು, ಗಣೇಶ ಹಬ್ಬದ ಪ್ರಯುಕ್ತ ಇದನ್ನು ಸೆ.19ರಿಂದ ಹೊಸ ಸಂಸತ್ ಕಟ್ಟಡಕ್ಕೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ.

ನವದೆಹಲಿ: ಸೆ.18ರಿಂದ ಕರೆಯಲಾಗಿರುವ ವಿಶೇಷ ಸಂಸತ್ ಅಧಿವೇಶನ ಹಳೆಯ ಸಂಸತ್ ಭವನದಲ್ಲಿ ಆರಂಭವಾಗಲಿದ್ದು, ಗಣೇಶ ಹಬ್ಬದ ಪ್ರಯುಕ್ತ ಇದನ್ನು ಸೆ.19ರಿಂದ ಹೊಸ ಸಂಸತ್ ಕಟ್ಟಡಕ್ಕೆ ವರ್ಗಾಯಿಸಲಾಗುತ್ತದೆ ಎಂದು ಹೇಳಲಾಗಿದೆ. ಸೆ.18ರಿಂದ 5 ದಿನಗಳ ಕಾಲ 17ನೇ ಲೋಕಸಭೆಯ ವಿಶೇಷ ಆಧಿವೇಶನ ಕರೆಯಲಾಗಿದ್ದು, ಈ ವೇಳೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದರು. ಹೊಸ ಸಂಸತ್ ಭವನವನ್ನು ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಆದರೂ ಕಳೆದ ತಿಂಗಳು ಮುಕ್ತಾಯವಾದ ಮುಂಗಾರು ಅಧಿವೇಶನವನ್ನು ಹಳೆ ಸಂಸತ್ ಭವನದಲ್ಲೇ ನಡೆಸಲಾಗಿತ್ತು. ಇದೀಗ ಕರೆದಿರುವ ವಿಶೇಷ ಆಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಲು ನಿರ್ಧರಿಸಲಾಗಿದೆ.
75 ರೂಪಾಯಿ ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ
ನೂತನ ಸಂಸತ್ ಭವನ ಉದ್ಘಾಟನೆಯ ಸ್ಮರಣಾರ್ಥ 75 ರೂಪಾಯಿ ಮುಖಬೆಲೆಯ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ. ಈ ನಾಣ್ಯದಲ್ಲಿ ಶೇ.50ರಷ್ಟುಬೆಳ್ಳಿ, ಶೇ.40ರಷ್ಟುತಾಮ್ರ ಶೇ.5ರಷ್ಟುನಿಕ್ಕಲ್ ಹಾಗೂ ಶೇ.5ರಷ್ಟುಝಿಂಕ್ ಮಿಶ್ರಣದಿಂದ ತಯಾರಿಸಲಾಗಿದೆ. ಇದರ ತೂಕ 34.65ರಿಂದ 35.35 ಗ್ರಾಂ ಇದ್ದು, ಭಾರತದ ಲಾಂಛನ ಅಶೋಕ ಚಕ್ರದ ಮುದ್ರೆ ಇರಲಿದೆ. ಇದರ ಕೆಳಗೆ ದೇವನಾಗರಿಯಲ್ಲಿ ಭಾರತ ಹಾಗೂ ಇಂಗ್ಲಿಷ್‌ನಲ್ಲಿ ಇಂಡಿಯಾ ಎಂದು ಮುದ್ರಣವಾಗಲಿದೆ. ಇದರ ಕೆಳಗೆ ರುಪಾಯಿ ಚಿಹ್ನೆ ಅದರ ಪಕ್ಕದಲ್ಲಿ 75 ಎಂದು ಬರೆಯಲಾಗಿದೆ.
ಹೊಸ ಸಂಸತ್ ಭವನ 140 ಕೋಟಿ ಭಾರತೀಯರ ಕನಸಿನ ಪ್ರತಿಬಿಂಬ, ಬಸವಣ್ಣ ಉಲ್ಲೇಖಿಸಿ ಮೋದಿ ಭಾಷಣ!
ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಸಂಸತ್ ಭವನ ಭಾರತದ ವೈವಿದ್ಯತೆಯ ಸಂಸ್ಕೃತಿ, ಭಾರತದ ಪ್ರಜಾಪ್ರಭುತ್ವದ ಪ್ರತಿಬಿಂಬವಾಗಿದೆ. ಭವ್ಯ ಭಾರತ ಆಧುನಿಕ ಮೂಲಸೌಕರ್ಯದ ಭಾರತವಾಗಿದೆ. ಹೊಸ ಸಂಸತ್ ಭವನದಲ್ಲಿ ಸೂರ್ಯನ ಕಿರಣ ನೇರವಾಗಿ ಒಳ ಪ್ರವೇಶಿಸುತ್ತದೆ. ಇದರಿಂದ ವಿದ್ಯುತ್ ಉಪಯೋಗ ಕಡಿಮೆ. ಅತ್ಯಾಧುನಿಕ ಗೆಜೆಟ್ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಂಸತ್ ಭವನ ಉದ್ಘಾಟನೆ ವೇಳೆ ಶೃಂಗೇರಿ ಪುರೋಹಿತರಿಂದ ಪೂಜಾ ಕೈಂಕರ್ಯ: ರಾಜದಂಡ ಪ್ರತಿಷ್ಠಾಪನೆಯ ಹೈಲೈಟ್ಸ್..