Asianet Suvarna News Asianet Suvarna News

Republic Day Celebration ಬದಲಾದ ರಾಜಪಥದಲ್ಲಿ ಮೊದಲ ಗಣರಾಜ್ಯೋತ್ಸವ, ಭಿನ್ನವಾಗಿ ಕಾಣಲಿದೆ ಈ ಬಾರಿಯ ಪರೇಡ್‌!

  • ಸೆಂಟ್ರಲ್‌ ವಿಸ್ತಾ ಯೋಜನೆಯಿಂದ ರಾಜಪಥಕ್ಕೆ ಹೊಸರೂಪ
  • ಕಾಮಗಾರಿ ಪೂರ್ಣವಾಗದಿದ್ದರೂ ಸಾಕಷ್ಟುಬದಲಾವಣೆ
  • ಪ್ರವಾಸಿಗರಿಗೆ ಕುಳಿತುಕೊಳ್ಳಲು ಟೆರೇಸ್‌ ಗಾರ್ಡನ್‌ಗಳನ್ನು ನಿರ್ಮಾಣ
New look Rajpath all set host Republic Day Celebration and parade replaced red sand path ckm
Author
Bengaluru, First Published Jan 25, 2022, 4:45 AM IST

ನವದೆಹಲಿ(ಜ.25): ರಾಷ್ಟ್ರ ರಾಜಧಾನಿಯ ರಾಜಪಥದಲ್ಲಿ(Rajpath) ಜ.26ರಂದು ನಡೆಯಲಿರುವ ಈ ಬಾರಿಯ ಗಣರಾಜ್ಯೋತ್ಸವದ ಪರೇಡ್‌(Republic Day parade) ಸಾಕಷ್ಟುಭಿನ್ನವಾಗಿರಲಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್‌ ವಿಸ್ತಾ(Central Vista) ಯೋಜನೆಯಡಿ ರಾಜಪಥದ ಚಹರೆ ಬಹುತೇಕ ಬದಲಾವಣೆಯಾಗಿದ್ದು, ಅಲ್ಲಿ ಮೊದಲ ಬಾರಿ ಪರೇಡ್‌ ನಡೆಯುತ್ತಿದೆ.

ಸೆಂಟ್ರಲ್‌ ವಿಸ್ತಾ ಕಾಮಗಾರಿ ಇನ್ನೂ ಮುಗಿದಿಲ್ಲವಾದರೂ ಪರೇಡ್‌(Delhi Parade) ನಡೆಯುವ ಬುಲೇವಾರ್ಡ್‌ಗೆ ಈಗಾಗಲೇ ಹೊಸ ರೂಪ ಬಂದಿದೆ. ಹಿಂದೆ ಇದ್ದ ಕೆಂಪು ಮರಳಿನ ಫುಟ್‌ಪಾತ್‌(Footpath) ತೆಗೆದು ಹೊಸ ಫುಟ್‌ಪಾತ್‌ಗಳನ್ನು ನಿರ್ಮಿಸಲಾಗಿದೆ. ಸುಮಾರು 94,600 ಮೀಟರ್‌ನಷ್ಟುನಡಿಗೆಯ ದಾರಿ ನಿರ್ಮಿಸಲಾಗಿದೆ. 442 ಕಲ್ಲಿನ ಬೆಂಚ್‌ಗಳನ್ನೂ, ಅಕ್ಕಪಕ್ಕದಲ್ಲಿರುವ ಕಾಲುವೆಗೆ 16 ಸೇತುವೆಗಳನ್ನೂ ನಿರ್ಮಿಸಲಾಗಿದೆ. ಹೊಸತಾಗಿ 114 ಆಧುನಿಕ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ರಾಜಪಥದ ಸುತ್ತಮುತ್ತ 133 ಹೊಸ ದೀಪದ ಕಂಬಗಳು ತಲೆಯೆತ್ತಿವೆ. ಇವುಗಳಿಂದಾಗಿ ರಾಜಪಥ ಮೊದಲಿಗಿಂತ ಸುಂದರವಾಗಿ ಕಾಣಿಸುತ್ತಿದೆ.

Threat To PM Modi: ಮೋದಿಗೆ ಗಣರಾಜ್ಯ ದಿನದ ವೇಳೆ ಉಗ್ರ ಬೆದರಿಕೆ: ಹೈ ಅಲರ್ಟ್‌

ಇಂಡಿಯಾ ಗೇಟ್‌(India gate) ಮತ್ತು ರಾಷ್ಟ್ರಪತಿ ಭವನದ(Rastrapati Bhavan) ನಡುವೆ 900 ಲ್ಯಾಂಪ್‌ ಪೋಸ್ಟ್‌ಗಳನ್ನು ನಿಲ್ಲಿಸಲಾಗಿದೆ. ಗಣರಾಜ್ಯೋತ್ಸವ ಪರೇಡ್‌ಗೆಂದು ಸುಮಾರು 500 ಕಲಾವಿದರು 75 ಮೀಟರ್‌ ಉದ್ದದ ಬೋರ್ಡ್‌ಗಳ ಮೇಲೆ ಜನರಿಗೆ ಕಡಿಮೆ ತಿಳಿದಿರುವ ಸ್ವಾತಂತ್ರ್ಯ ಹೋರಾಟಗಾರರ ಬೃಹತ್‌ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ. ರಾಜಪಥದ ಎರಡೂ ಕಡೆ ಎಲ್ಲೆಲ್ಲೂ ಹಸಿರು ಕಾಣಿಸುತ್ತಿದೆ. ವಾಹನಗಳ ಪಾರ್ಕಿಂಗ್‌ಗೆ ಹೆಚ್ಚು ಸ್ಥಳಾವಕಾಶ ಒದಗಿಸಲಾಗಿದೆ.

Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?

ಪ್ರವಾಸಿಗರಿಗೆ ಟೆರೇಸ್‌ ಗಾರ್ಡನ್‌:
‘ಸೆಂಟ್ರಲ್‌ ವಿಸ್ತಾ ಯೋಜನೆಗಾಗಿ 25 ಮರಗಳನ್ನು ತೆಗೆದು, ಅವುಗಳಲ್ಲಿ 22ನ್ನು ಸ್ಥಳಾಂತರಿಸಿ, 3ನ್ನು ಇಲ್ಲೇ ನೆಡಲಾಗಿದೆ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಟೆರೇಸ್‌ ಗಾರ್ಡನ್‌ಗಳನ್ನು ನಿರ್ಮಿಸಲಾಗಿದೆ. ಹೊಸ ಸೆಂಟ್ರಲ್‌ ವಿಸ್ತಾ ಅವೆನ್ಯೂದಲ್ಲಿ 4087 ಮರಗಳಿರಲಿವೆ. ಕೊರೋನಾ ಮುಗಿದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚುವುದರಿಂದ 50 ಬಸ್‌ಗಳೂ ಸೇರಿದಂತೆ 1000 ವಾಹನಗಳಿಗೆ ಪಾರ್ಕಿಂಗ್‌ ನಿರ್ಮಿಸಲಾಗಿದೆ. ನಾಲ್ಕು ಅಂಡರ್‌ಪಾಸ್‌ ನಿರ್ಮಿಸಲಾಗುತ್ತಿದೆ. ಸ್ವಚ್ಛ ಭಾರತ ಯೋಜನೆಯಡಿ 162 ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ. ಚರಂಡಿ ಹಾಗೂ ವಿದ್ಯುತ್‌ ಲೈನ್‌ಗಳನ್ನು ನೆಲದಡಿ ನಿರ್ಮಿಸಲಾಗಿದೆ. 880 ಎಲೆಕ್ಟ್ರಿಕ್‌ ಮ್ಯಾನ್‌ಹೋಲ್‌ ಹಾಗೂ 611 ಮ್ಯಾನ್‌ಹೋಲ್‌ ನಿರ್ಮಿಸಲಾಗಿದೆ’ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

ಲಸಿಕೆ ಪಡೆದವರು, 15 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪರೇಡ್‌ ವೀಕ್ಷಣೆ ಅವಕಾಶ
ಜ.26ರ ಗಣರಾಜ್ಯೋತ್ಸವ ಪರೇಡ್‌ ವೀಕ್ಷಿಸಲು ಬರುವವರಿಗೆ ಎರಡೂ ಡೋಸ್‌ ಲಸಿಕೆ ಪಡೆದಿರುವುದನ್ನು ಕಡ್ಡಾಯ. ಜೊತೆಗೆ 15 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಸ್ಥಳಕ್ಕೆ ಪ್ರವೇಶ ಇರುವುದಿಲ್ಲ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಜೊತೆಗೆ ಆಗಮಿಸುವವರು ಕೋವಿಡ್‌ ಮಾರ್ಗಸೂಚಿಗಳಾದ ಮಾಸ್ಕ್‌ ಧರಿಸುವುದು, ಸಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಅಲ್ಲದೆ ತಪ್ಪದೇ ಲಸಿಕಾ ಪ್ರಮಾಣಪತ್ರವನ್ನು ಜೊತೆಗೆ ತರಬೇಕು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರಾಜಪಥದಲ್ಲಿ ಬದಲಾದ ಸೇನಾ ಸಮವಸ್ತ್ರ ಅನಾವರಣ
ಭಾರತೀಯ ಸೇನೆಯ ಸಮವಸ್ತ್ರಗಳು ಹೇಗೆ ಬದಲಾದವು ಹಾಗೂ ಆಧುನಿಕತೆಗೆ ಕಾಲ ತೆರೆದುಕೊಳ್ಳುತ್ತಿದ್ದಂತೆಯೇ ಶಸ್ತಾ್ರಸ್ತ್ರಗಳು ಹೇಗೆ ಬದಲಾದವು ಎಂಬ ಪ್ರದರ್ಶನವು ಈ ಸಲದ ಗಣರಾಜ್ಯೋತ್ಸವ ಕವಾಯತಿನಲ್ಲಿ ನಡೆಯಲಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಪ್ರದರ್ಶನ ನಡೆಯಲಿದೆ. ರಾಜಪಥದಲ್ಲಿ ಸಾಗುವ ಸೇನಾಪಡೆ ಯೋಧರ ತುಕಡಿಗಳು ಸೇನೆಯ ಬದಲಾದ ಸಮವಸ್ತ್ರಗಳನ್ನು ಧರಿಸಲಿವೆ. ಇದರಲ್ಲಿ ಒಂದು ತುಕಡಿಯು ಇತ್ತೀಚೆಗೆ ಸೇನೆಗೆ ರೂಪಿಸಲಾಗಿರುವ ಹೊಸ ಸಮವಸ್ತ್ರ ಪ್ರರ್ಶಿಸಲಿದೆ. ಇನ್ನು ಇದೇ ಯೋಧರು ಕಾಲಕ್ಕೆ ತಕ್ಕಂತೆ ಬದಲಾದ ಎಲ್ಲ ಶಸ್ತಾ್ರಸ್ತ್ರಗಳನ್ನು ಹಿಡಿದುಕೊಂಡ ಪಥಸಂಚಲನದಲ್ಲಿ ಸಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios