ದೇಶದ ಸರಕು ಸಾಗಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರಕ್‌ ಚಾಲಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2025ರಿಂದ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ ಕಡ್ಡಾಯಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ.  

ನವದೆಹಲಿ: ದೇಶದ ಸರಕು ಸಾಗಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಟ್ರಕ್‌ ಚಾಲಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2025ರಿಂದ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ ಕಡ್ಡಾಯಗೊಳಿಸಲು ಸರ್ಕಾರ ನಿರ್ಧಾರ ಮಾಡಿದೆ. ಇತ್ತೀ​ಚೆಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ದಿಲ್ಲಿ​ಯಿಂದ (Delhi) ಚಂಡೀ​ಗ​ಢಕ್ಕೆ (Chandigarh) ಟ್ರಕ್‌ ಯಾತ್ರೆ ನಡೆ​ಸಿ​ದ್ದರು. ಅಮೆ​ರಿಕ ಭೇಟಿ ವೇಳೆಯೂ ಟ್ರಕ್‌​ನಲ್ಲಿ ಸಂಚರಿ​ಸಿ​ದ್ದರು. ಅಮೆ​ರಿ​ಕ​ದಲ್ಲಿ ಟ್ರಕ್‌ ಚಾಲ​ಕ​ರಿ​ಗೆ ಎಸಿ ಕ್ಯಾಬಿನ್‌ ಇದೆ. ಆದರೆ ಭಾರ​ತ​ದಲ್ಲಿ ಟ್ರಕ್‌ ಚಾಲ​ಕರು ಬವಣೆ ಪಡು​ತ್ತಾರೆ ಎಂದಿ​ದ್ದರು. ಅದ​ರ ಬೆನ್ನಲ್ಲೇ ಕೇಂದ್ರ ಈ ಕ್ರಮ ಕೈಗೊಂಡಿ​ದೆ.

ಅತಿ ಹೆಚ್ಚು ಸಮಯವನ್ನು ರಸ್ತೆಯ ಮೇಲೆ ಕಳೆಯುವ ಟ್ರಕ್‌ ಚಾಲಕರು (Truck drivers) ಅತಿಯಾದ ಬಿಸಿ ಮತ್ತು ತಂಪಾದ ವಾತಾವರಣಗಳಿಗೆ ಸಿಲುಕಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಎಸಿ ಕ್ಯಾಬಿನ್‌ಗಳನ್ನು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಎಸಿ ಕ್ಯಾಬಿನ್‌ಗಳು (AC cabin) ಉತ್ತಮ ಚಾಲನಾ ಅನುಭವವನ್ನು ನೀಡುವುದಷ್ಟೇ ಅಲ್ಲದೇ ಚಾಲಕರ ಆರೋಗ್ಯ ಸುಧಾರಿಸುವುದಕ್ಕೂ ಸಹಾಯ ಮಾಡಲಿದೆ. ಅಲ್ಲದೇ ಇದು ಹೆದ್ದಾರಿಗಳಲ್ಲಿ ಆಗುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಸಹಾಯಮಾಡಲಿದೆ ಎಂದು ಹೆದ್ದಾರಿ ಸಚಿವಾಲಯದ (Ministry of Highways) ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಲ್ಲೂ ರಾಹುಲ್‌ ಟ್ರಕ್‌ ರೈಡ್‌: ಭಾರತೀಯ ಮೂಲದ ಚಾಲಕನ ಲಾರಿಯಲ್ಲಿ ಸಿಧು ಮೂಸೇವಾಲಾ ಹಾಡು ಕೇಳಿ ಎಂಜಾಯ್‌!

ಟ್ರಕ್‌ಗಳಲ್ಲಿ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ನಿರ್ಮಾಣ ಮಾಡುವುದರ ಕುರಿತಾಗಿ ಸಚಿವಾಲಯ ಈಗಾಗಲೇ ಟ್ರಕ್‌ ಉತ್ಪಾದಕ ಕಂಪನಿಗಳ ಜೊತೆ ಮಾತುಕತೆ ನಡೆಸುತ್ತಿದ್ದು, 2025ರಿಂದ ಇದನ್ನು ಕಡ್ಡಾಯಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ