ಪಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ಬಿಹಾರ ಪೊಲೀಸರು ಈಗಾಗಲೇ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಸೇರಿದ ಕೆಲ ವ್ಯಕ್ತಿಗಳು ಕೂಡಾ ಸೇರಿದ್ದಾರೆ.

ಪಟನಾ: ಬಿಹಾರದಲ್ಲಿ ನಡೆದಿದೆ ಎನ್ನಲಾದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಲ್ಲಿ, ರಾಜ್ಯ ಸಚಿವರೊಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆದರೆ ಸದ್ಯ ಆರೋಪಿ ಸಚಿವರ ಹೆಸರನ್ನು ಬಹಿರಂಗಪಡಿಸಿಲ್ಲ.

ಪ್ರಕರಣ ಸಂಬಂಧ ಬಂಧಿತನಾಗಿರುವ ಅನುರಾಗ್‌ ಯಾದವ್‌ ಎಂಬ ವಿದ್ಯಾರ್ಥಿ, ಈ ಪ್ರಕರಣದಲ್ಲಿ ತನಗೆ ಸಚಿವರ ಬೆಂಬಲ ಇತ್ತು ಎಂದು ಹೇಳಿದ್ದಾನೆ. ಅಲ್ಲದೆ ಪರೀಕ್ಷೆಯ ಹಿಂದಿನ ದಿನ ಆತ ಪಟನಾದಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಉಳಿದುಕೊಳ್ಳಲು ಸಚಿವರು ನೀಡಿರುವ ಶಿಫಾರಸು ಪತ್ರವನ್ನು ಸಾಕ್ಷ್ಯವಾಗಿ ತೋರಿಸಿದ್ದಾನೆ. ಜೊತೆಗೆ ಅತಿಥಿ ಗೃಹದಲ್ಲಿ ತನಗೆ ನೀಡಲಾಗಿದ್ದ ಪ್ರಶ್ನೆಪತ್ರಿಕೆ, ಮಾರನೇ ದಿನ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆಪತ್ರಿಕೆಯಂತೆಯೇ ಇತ್ತು ಎಂದು ಬಹಿರಂಗಪಡಿಸಿದ್ದಾನೆ.

ಪಶ್ನೆ ಪತ್ರಿಕೆ ಸೋರಿಕೆ ಹಗರಣ ಸಂಬಂಧ ಬಿಹಾರ ಪೊಲೀಸರು ಈಗಾಗಲೇ 10ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಕ್ಕೆ ಸೇರಿದ ಕೆಲ ವ್ಯಕ್ತಿಗಳು ಕೂಡಾ ಸೇರಿದ್ದಾರೆ.

ನೀಟ್‌ನಲ್ಲಿ ಎಳ್ಳಷ್ಟು ಲೋಪ ಆಗಿದ್ದರೂ ಕ್ರಮ: ಸುಪ್ರೀಂ ತಾಕೀತು

ಸುಳ್ಳು ದಾಖಲೆ ನೀಡಿದ್ದ ವಿದ್ಯಾರ್ಥಿನಿ ಅರ್ಜಿ ವಜಾ

ನೀಟ್‌ ಪರೀಕ್ಷೆ ವೇಳೆ ನಾನು ಉತ್ತರ ಬರೆದಿದ್ದ ಒಎಂಆರ್‌ ಶೀಟ್‌ ಹರಿದುಹೋದ ಕಾರಣ, ನನಗೆ ಕಡಿಮೆ ಅಂಕ ಬಂದಿದೆ. ಹೀಗಾಗಿ ನನಗೆ ಮರುಪರೀಕ್ಷೆ ಬರೆಯಲು ಅವಕಾಶ ಕೊಡಬೇಕು’ ಎದು ಕೋರಿ ಉತ್ತರ ಪ್ರದೇಶದ ಆಯುಷಿ ಪಟೇಲ್‌ ಎಂಬ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಜಾ ಮಾಡಿದೆ.

ಇತ್ತೀಚೆಗೆ ಆಯುಷಿ ಹರಿದುಹೋಗಿರುವ ಒಎಂಆರ್‌ ಶೀಟ್‌ನ ಫೋಟೋವೊಂದನ್ನು ಜಾಲತಾಣದಲ್ಲಿ ಹಾಕಿ, ‘ನನಗೆ ಅನ್ಯಾಯವಾಗಿದೆ. 715 ಅಂಕ ಬರಬೇಕಿದ್ದ ನನನಗೆ ಹರಿದುಹೋದ ಒಎಂಆರ್‌ ಶೀಟ್‌ನಿಂದಾಗಿ 325 ಅಂಕ ಬಂದಿದೆ’ ಎಂದು ದೂರಿದ್ದಳು. ಜೊತೆಗೆ ಹೈಕೋರ್ಟ್‌ ಮೊರೆ ಹೋಗಿದ್ದಳು.

ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲಿ ನೀಟ್‌ ರದ್ದು ಚಿಂತನೆ: ಡಿ.ಕೆ.ಶಿವಕುಮಾರ್‌ ಸುಳಿವು

ಅರ್ಜಿ ವಿಚಾರಣೆ ವೇಳೆ ನೀಟ್‌ ಪರೀಕ್ಷೆ ನಡೆಸುವ ಎನ್‌ಟಿಎ, ಆಯುಷಿಯ ಮೂಲಕ ಒಎಂಆರ್‌ ಪ್ರತಿ ತೋರಿಸಿದಾಗ ಅದು ಸುಸ್ಥಿತಿಯಲ್ಲಿರುವುದು ಕಂಡುಬಂದಿತ್ತು. ಆಯುಷಿ ಸಲ್ಲಿಸಿದ್ದ ಒಎಂಆರ್‌ ಶೀಟ್‌ ನಕಲಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆಕೆಯ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ. ಅಲ್ಲದೆ ಆಕೆಯ ವಿರುದ್ಧ ಅಗತ್ಯ ಕ್ರಮಕ್ಕೆ ಎನ್‌ಟಿಎಗೆ ಮುಕ್ತ ಅವಕಾಶ ನೀಡಿದೆ.