Asianet Suvarna News Asianet Suvarna News

ಪಕ್ಷದಲ್ಲಿ ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ ಮಾತು!

* ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲು

* ಸೋಲಿನ ಬೆನ್ನಲ್ಲೇ ಕಾಂಗ್ರೆಸ್‌ ಸಭೆ

* ಪಕ್ಷದಲ್ಲಿ ಬದಲಾವಣೆ ಅಗತ್ಯ ಎಂದ ಸೋನಿಯಾ ಗಾಂಧಿ

Need To Put House In Order Sonia Gandhi To Congress On Poll Results pod
Author
Bangalore, First Published May 10, 2021, 1:08 PM IST

ನವದೆಹಲಿ(ಮೇ.10): ಇತ್ತೀಗಷ್ಟೇ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಬಳಿಕ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದಲ್ಲಿ ಬದಲಾವಣೆಗಳಾಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಕಾರ್ಯಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ 'ನಾವು ಈಗಾಗಲೇ ಪಡೆದಿರುವ ಹೊಡೆತಗಳಿಂದ ಎಚ್ಚೆತ್ತುಕೊಳ್ಳಬೇಕು. ನಾವು ಬಹಳ ನಿರಾಸೆಗೊಂಡಿದ್ದೇವೆ ಎಂದರೆ ಕಡಿಮೆಯಾಗುತ್ತದೆ. ನಮಗೆ ಸಿಕ್ಕ ಹೊಡೆತಗಳನ್ನು ಸೂಕ್ಷ್ಮವಾಗಿ ಗಮನಹರಿಸಿ ವಿಮರ್ಶೆ ನಡೆಸಲು ಪುಟ್ಟ ಗುಂಪುಗಳನ್ನು ರಚಿಸಬೇಕಿದೆ. ಈ ಸಮಿತಿಗಳಿಂದ ಶೀಘ್ರವಾಗಿ ವರದಿ ಪಡೆಯಲಿದ್ದೇನೆ' ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕಳಪೆ ಪ್ರದರ್ಶನದ ಸಮೀಕ್ಷೆ ನಡೆಸಲು ಸಮಿತಿಯೊಂದನ್ನು ರಚಿಸುವ ಮಾತುಗಳನ್ನಾಡಿದ್ದರು. ಅಲ್ಲದೇ ಕೇರಳ, ಅಸ್ಸಾಂನಲ್ಲಾದ ಸೋಲು ಮತ್ತು ಪಶ್ಚಿಮ ಬಂಗಾಳದಲ್ಲಿ ಒಂದೂ ಸ್ಥಾನದಲ್ಲಿ ಗೆಲುವು ಸಿಗದಿರುವುದನ್ನು ನಿರಾಶಾದಾಯಕವೆಂದಿದ್ದರು.

ಲಸಿಕೆಗೂ ಮಣಿಯಲ್ಲ ಭಾರತದ ಬಿ.1.617 ತಳಿಯ ವೈರಸ್‌?

ಇದೇ ವೇಳೆ ಕೊರೋನಾ ಪರಿಸ್ಥಿತಿ ಬಗ್ಗೆಯೂ ಮಾತನಾಡಿದ ಸೋನಿಯಾ ಗಾಂಧಿ ಕೊರೋನಾ ನಿಯಂತ್ರಸಿವ ವಿಚಾರವಾಗಿ ಮೋದಿ ಸರ್ಕಾರ ವಿಫಲಗೊಂಡಿದೆ. ಸದ್ಯ ಈ ಬಗ್ಗೆ ಚರ್ಚೆ ನಡೆಸಲು ಸರ್ವಪಕ್ಷ ಸಭೆ ಕರೆಯಬೇಕು. ಕೊರೋನಾ ಅನಿರೀಕ್ಷಿತ ಆರೋಗ್ಯ ಬಿಕ್ಕಟ್ಟು ಎಂದಿರುವ ಸೋನಿಯಾ ಗಾಂಧಿ ಅದನ್ನು ಎದುರಿಸಲು ಸಾಧ್ಯವಿರುವ ಎಲ್ಲಾ ಸಹಕಾರಕ್ಕಾಗಿ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.

Follow Us:
Download App:
  • android
  • ios