ರಾಷ್ಟ್ರನಾಯಕ ಪಟ್ಟ: ಮೋದಿಗೆ ಶೇ. 66 ಅಂಕ, ರಾಹುಲ್ ಗಾಂಧಿಗೆ ಎಷ್ಟು?

ಕೊರೋನಾ ವೈರಸ್ ಲಾಕ್ ಡೌನ್ ನಡುವೆ ಹೊರಬಿದ್ದ ಸಮೀಕ್ಷಾ ವರದಿ/ ನರೇಂದ್ರ ಮೋದಿ ಮತ್ತು ರಾಹುಲ್ ನಡುವೆ ಅಜಗಜಾಂತರ ವ್ಯತ್ಯಾಸ/ ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿಯೂ ರಾಹುಲ್ ಪರ ಅಲೆ ಇಲ್ಲ

Nearly 66 Percent Indians give thumbs up to PM Modi Rahul Gandhis approval is 0.58 per cent

ನವದೆಹಲಿ (ಜೂ.02)  ಕೊರೋನಾ ವೈರಸ್ ದೇಶದೆಲ್ಲಡೆ ಕಾಟ ಕೊಡುತ್ತಿರುವಾಗಲೇ ಸಮೀಕ್ಷಾ ವರದಿಯೊಂದು ಹೊರಬಂದಿದೆ. ಐಎನ್ ಎಸ್ ಸಿ ವೋಟರ್ ಸಮೀಕ್ಷಾ ವರದಿಯೊಂದನ್ನು ನೀಡಿದೆ. ಶೇ. 65.69  ಜನ ನರೇಂದ್ರ ಮೋದಿ ಅವರನ್ನು ಮೆಚ್ಚಿಕೊಂಡಿದ್ದಾರೆ. 

ದೇಶದ ಶೇ.66 ಮಂದಿ ಮೋದಿಯನ್ನು ರಾಷ್ಟ್ರ ನಾಯಕನೆಂದು ಒಪ್ಪಿಕೊಂಡರೆ, ನಂಬಿದರೆ ನಂಬಿ, ಬಿಟ್ಟರೆ ಬಿಡಿ ಅವರ ಪ್ರತಿಸ್ಪರ್ಧಿ ಎಂದು ಬಿಂಬಿತವಾಗುತ್ತಿರುವ ಕಾಂಗ್ರೆಸ್‌ನ ರಾಹುಲ್ ಗಾಂಧಿಯನ್ನೇು ಕೇವಲ ಶೇ. 0.58 ಜನರು ಮಾತ್ರ ರಾಷ್ಟ್ರ ನಾಯಕನ ಪಟ್ಟ ಕೊಡಲು ಸಿದ್ಧರಿದ್ದಾರೆ. ಭಾರತದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿಕೊಂಡಿವೆ

ಕಳೆದ ಮೇ ತಿಂಗಳಿನಲ್ಲಿ ಸಿ-ವೋಟರ್ ನಡೆಸಿದ 'ಸ್ಟೇಟ್ ಆಫ್ ದಿ ನೇಷನ್-2020' ಸ್ವಾತಂತ್ರ್ಯ ಸಮೀಕ್ಷೆಯಲ್ಲಿ ಶೇ.65ರಷ್ಟು ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತವು ಉತ್ತಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಸಿದ್ದಾರೆ.

ಟೆಲಿಮೆಡಿಸಿನ್ ಮತ್ತಷ್ಟು ಜನಪ್ರಿಯವಾಗಲಿ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಎರಡನೇ ಅವಧಿ ಆಡಳಿತ ವಾರ್ಷಿಕೋತ್ಸವನ್ನು ಆಚರಿಸಿತು. ಇದರ ನಡುವೆ ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಶೇ.65.69ರಷ್ಟು ಜನರು ಉತ್ತಮವಾಗಿದೆ ಎಂದು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪೈಕಿ ಒಡಿಶಾ ರಾಜ್ಯದಲ್ಲಿ ಮೋದಿ ಆಡಳಿತವನ್ನು ಶೇ.95.6ರಷ್ಟು ಜನರು ಮೆಚ್ಚಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶೇ.93.95 ಹಾಗೂ ಛತ್ತೀಸ್ ಗಢದಲ್ಲಿ ಶೇ.92.73ರಷ್ಟು ಜನರು ಪ್ರಧಾನಿ ಆಡಳಿತಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಒಂದು ಕಡೆ ಪ್ರಧಾನಿ ಮೋದಿಗೆ ಶೇ 66 ರಷ್ಟು ಒಪ್ಪಿಗೆ ಸಿಕ್ಕಿದ್ದರೆ ಇನ್ನೊಂದು ಕಡೆ ಕಾಂಗ್ರೆಸ್ ನಿಂದ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾದ ರಾಹುಲ್ ಗಾಂಧಿ ಅವರನ್ನು  0.58  ಜನ ಮಾತ್ರ ರಾಷ್ಟ್ರನಾಯಕ ಎಂದು ಒಪ್ಪಿಕೊಂಡಿದ್ದಾರೆ.

ರಾಹುಲ್ ಗಾಂಧಿಗೆ ಈ ವಿಚಾರದಲ್ಲಿ ತಿಳಿವಳಿಕೆ ತುಂಬಾ ಕಮ್ಮಿ

ಶೇ ರಾಜ್ಯಗಳ ಶೇ. 18.63  ಜನ ರಾಹುಲ್ ತೃಪ್ತಿದಾಯಕ ಎಂದಿದ್ದಾರೆ. ಶೇ. 25. 06 ಜನ ಅಲ್ಪ ತೃಪ್ತಿ ಎಂದಿದ್ದಾರೆ. ಶೇ. 43.11 ಜನ ದೊಡ್ಡ ಮಟ್ಟದಲ್ಲಿ ತೃಪ್ತಿ ತಂದಿಲ್ಲ ಎಂದಿದ್ದಾರೆ. 

ರಾಹುಲ್ ಗೆ ದಕ್ಷಿಣ ರಾಜ್ಯಗಳು ಶೇ. 36 . 12 ಒಪ್ಪಿಗೆ ಮಾತ್ರ ನೀಡಿವೆ. ಕೇರಳದಲ್ಲಿ ಮಾತ್ರ ಶೇ. 26.11  ಒಪ್ಪಿಗೆ ಸಿಕ್ಕಿದೆ.  ನೆಟ್ ಅಪ್ರೂವಲ್ ಅತಿ ಕಡಿಮೆ ಎಂದರೆ ಮೋದಿ ಅವರದ್ದು ಶೇ.32. 15  ಇದೆ!

ಕೇರಳದ ನಂತರ ಅತಿ ಹೆಚ್ಚು ರಾಹುಲ್ ಗಾಂಧಿ ಅವರನ್ನು ಒಪ್ಪಿಕೊಂಡ ರಾಜ್ಯ ಎಂದರೆ ಹಿಮಾಚಲ ಪ್ರದೇಶ. ಕಾಂಗ್ರೆಸ್ ಆಡಳಿತದಲ್ಲಿ ಇರುವ ರಾಜಸ್ಥಾನದಲ್ಲಿಯೂ ಜನ ರಾಹುಲ್ ಪರ ನಿಂತಿಲ್ಲ.

ಪ್ರಧಾನಮಂತ್ರಿ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ ಪ್ರಧಾನಿಮಂತ್ರಿ ನರೇಂದ್ರ ಮೋದಿ ಆಡಳಿತಕ್ಕೆ ದಕ್ಷಿಣ ಭಾರತದಲ್ಲಿ ಜನರು ಅಷ್ಟಾಗಿ ಮೆಚ್ಚಿಕೊಂಡಿಲ್ಲ. ಬಿಜೆಪಿಯ ವರ್ಚಸ್ಸು ದಕ್ಷಿಣ ಭಾರತದಲ್ಲಿ ಅಷ್ಟಕಷ್ಟೇ ಎನ್ನುವುದು ಸಿ-ವೋಟರ್ ಸಮೀಕ್ಷೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಬಿಜೆಪಿ ಸರ್ಕಾರದ ಆಡಳಿತವು ತೃಪ್ತಿದಾಯಕವಾಗಿಲ್ಲ ಎಂದ ರಾಜ್ಯಗಳಲ್ಲಿ ದಕ್ಷಿಣದ ರಾಜ್ಯಗಳೇ ಹೆಚ್ಚಾಗಿವೆ. ಈ ಪೈಕಿ ತಮಿಳುನಾಡು ಅಗ್ರಸ್ಥಾನದಲ್ಲಿದೆ.

2009 ರಿಂದಲೂ ಸಿ ವೋಟರ್ ಈ ಬಗೆಯ ಸರ್ವೆ ಮಾಡಿಕೊಂಡು ಬಂದಿದೆ. 18  ವರ್ಷ ಮೇಲ್ಪಟ್ಟವರನ್ನು ಆಯ್ಕೆ ಮಾಡಿಕೊಂಡು ವಿವಿಧ ಹಂತದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಕಲೆಹಾಕುತ್ತದೆ. 


 

Latest Videos
Follow Us:
Download App:
  • android
  • ios