Asianet Suvarna News

750ರ ಪೈಕಿ 351 ಕೊರೋನಾ ಸಾವು ಒಂದೇ ಆಸ್ಪತ್ರೆಯಲ್ಲಿ!

ದೇಶದ ಈ ಆಸ್ಪತ್ರೆಯಲ್ಲಿ  ಕೊರೋನಾ ಪೀಡತರ ಮರಣ ಮೃದಂಗ| ಸ್ಮಶಾನವಾಗಿ ಮಾರ್ಪಟ್ಟ ಆಸ್ಪತ್ರೆ| 750ರ ಪೈಕಿ 351 ಕೊರೋನಾ ಸಾವು ಒಂದೇ ಆಸ್ಪತ್ರೆಯಲ್ಲಿ!

Nearly 50 percent Of All Coronavirus Deaths In Gujarat From 1 Ahmedabad Hospital
Author
Bangalore, First Published May 22, 2020, 1:16 PM IST
  • Facebook
  • Twitter
  • Whatsapp

ಅಹಮದಾಬಾದ್‌(ಮೇ.22): ಕೊರೋನಾ ವೈರಸ್‌ನಿಂದ ಗುಜರಾತ್‌ನಲ್ಲಿ ಉಂಟಾಗಿರುವ ಒಟ್ಟು ಸಾವಿನ ಸಂಖ್ಯೆಯಲ್ಲಿ ಸುಮಾರು ಶೇ.50ರಷ್ಟುಸಾವುಗಳು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲೇ ಉಂಟಾಗಿದೆ. ಆ ಮೂಲಕ ಈ ಆಸ್ಪತ್ರೆ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿದೆ.

ಈವರೆಗೆ ಗುಜರಾತ್‌ನಲ್ಲಿ ಕೊರೋನಾಗೆ 749 ಮಂದಿ ಬಲಿಯಾಗಿದ್ದು, ಇದರಲ್ಲಿ 351 ಸಾವು ಈ ಆಸ್ಪತ್ರೆಯಲ್ಲೇ ಉಂಟಾಗಿದೆ. ಈವರೆಗೆ ಈ ಆಸ್ಪತ್ರೆಯಿಂದ 338 ಕೋವಿಡ್‌ ಬಾಧಿತರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದರಿಂದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶ ಮಾಡಬೇಕು ಎಂದು ಅಹಮದಾಬಾದ್‌ ಶಾಸಕ ಗ್ಯಾಸುದ್ದೀನ್‌ ಶೇಖ್‌ ಒತ್ತಾಯಿಸಿದ್ದಾರೆ.

ಭಾರತದಲ್ಲಿ ಸಾವಿನ ಸಂಖ್ಯೆ:

ಇನ್ನು ಭಾರತದಲ್ಲಿ ಲಾಕ್‌ಡೌನ್ ಸಡಿಲಿಕೆ ಬಳಿಕ ಕೊರೋನಾ ಪೀಡಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಾರಂಭಿಸಿದೆ. ಇಂದು ಶುಕ್ರವಾರ  6,088 ಹೊಸ ಪ್ರಕರಣಗಳು ವರದಿಯಾಘಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,10,000 ದಾಟುವ ಹಂತದಲ್ಲಿದೆ. ಇನ್ನು ಸಾವನ್ನಪ್ಪಿದವರ ಸಂಖ್ಯೆ 3,583 ಆಗಿದೆ.

    

Follow Us:
Download App:
  • android
  • ios