Asianet Suvarna News Asianet Suvarna News

ಕಾಶ್ಮೀರಕ್ಕೆ ನುಸುಳಲು 150 ಉಗ್ರರು ಸಜ್ಜು: ಸೇನೆ ಅಧಿಕಾರಿ

ಜಮ್ಮು ಹಾಗೂ ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ 150 ಉಗ್ರರು ಲಾಂಚ್‌ಪ್ಯಾಡ್‌ಗಳಲ್ಲಿ ಸಜ್ಜಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿ ಶನಿವಾರ ಹೇಳಿದ್ದಾರೆ.

nearly 150 terrorists are waiting at loc says senior army officer gvd
Author
Bangalore, First Published Jun 26, 2022, 3:30 AM IST

ಶ್ರೀನಗರ (ಜೂ.26): ಜಮ್ಮು ಹಾಗೂ ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ 150 ಉಗ್ರರು ಲಾಂಚ್‌ಪ್ಯಾಡ್‌ಗಳಲ್ಲಿ ಸಜ್ಜಾಗಿದ್ದಾರೆ ಎಂದು ಹಿರಿಯ ಸೇನಾಧಿಕಾರಿ ಶನಿವಾರ ಹೇಳಿದ್ದಾರೆ. ಈ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಗಡಿಯುದ್ದಕ್ಕೂ ನೇಮಕವಾಗಿರುವ ಭದ್ರತಾ ಪಡೆಗಳು ಯಶಸ್ವಿಯಾಗಿ ವಿಫಲಗೊಳಿಸಿವೆ ಎಂದಿದ್ದಾರೆ. ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮನ್‌ಶೇರಾ, ಕೋಟ್ಲಿ ಹಾಗೂ ಮುಜಪ್ಫರಾಬಾದ್‌ನಲ್ಲಿ 11 ತರಬೇತಿ ಶಿಬಿರಗಳಲ್ಲಿ 500 ರಿಂದ 700 ಉಗ್ರರು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. 

ಅವರಲ್ಲಿ 150 ಉಗ್ರರು ಕಾಶ್ಮೀರದಲ್ಲಿ ನುಸುಳಲು ಲಾಂಚ್‌ಪ್ಯಾಡ್‌ಗಳಲ್ಲಿ ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಉಗ್ರರು ದಕ್ಷಿಣ ಕಾಶ್ಮೀರದ ಪೀರ್‌ಪಂಜಾಲ್‌ ಮಾರ್ಗವನ್ನು ಹಾಗೂ ನೇಪಾಳದ ಹಾದಿ ಬಳಸಿ ಕಾಶ್ಮೀರಕ್ಕೆ ನುಗ್ಗಲು ಪ್ರಯತ್ನಿಸುತ್ತಿದ್ದಾರೆ, ಕಳೆದ 40-42 ದಿನಗಳಲ್ಲಿ 50ಕ್ಕೂ ಹೆಚ್ಚು ಉಗ್ರರ ಹತ್ಯೆ ಮಾಡಲಾಗಿದೆ. ಆದರೆ ಈವರೆಗೂ ಸೇನೆ ಉಗ್ರರ ಒಳನುಸುಳುವಿಕೆ ಪ್ರಯತ್ನ ವಿಫಲಗೊಳಿಸಿದ್ದು, ಒಳನುಸುಳುವಿಕೆಯ ಇನ್ನಿತರ ಮಾರ್ಗಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಸೇನಾಧಿಕಾರಿ ತಿಳಿಸಿದ್ದಾರೆ.

ಸತ್ತ ಎಂದು ಘೋಷಿಸಿದ್ದ ಮುಂಬೈ ದಾಳಿ ಉಗ್ರನಿಗೆ 15 ವರ್ಷ ಜೈಲು ಶಿಕ್ಷೆ ನೀಡಿದ ಪಾಕ್!

ಭಾರತದಲ್ಲಿ ಶೀಘ್ರ ದಾಳಿ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಪ್ರವಾದಿ ಮೊಹಮ್ಮದ್‌ರನ್ನು ಅವಮಾನಿಸಿದ ವಿಷಯದಲ್ಲಿ ಅಲ್‌ಖೈದಾ ಉಗ್ರರ ನಂತರ ಇದೀಗ ಐಸಿಸ್‌ ಖೊರಾಸನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಉಗ್ರರು ಕೂಡ ಹಿಂದುಗಳ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಸಂಘಟನೆ, ಭಾರತದ ಮೇಲೆ ಶೀಘ್ರದಲ್ಲೇ ಭಯೋತ್ಪಾದಕ ದಾಳಿ ನಡೆಸುವುದಾಗಿ ನೇರ ಎಚ್ಚರಿಕೆ ನೀಡಿದೆ.

ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸ್ಫೋಟ: ಇಬ್ಬರ ಬಲಿ

ಖೊರಾಸನ್‌ ಡೈರಿ ಎಂಬ ನ್ಯೂಸ್‌ ವೆಬ್‌ಸೈಟಿನಲ್ಲಿ ಈ ಕುರಿತ ವಿಡಿಯೋ ಪ್ರಸಾರವಾಗಿದೆ. ಅದರಲ್ಲಿ ‘ಭಾರತದಾದ್ಯಂತ ಇರುವ ಮುಸ್ಲಿಮರು ನಮ್ಮ ಜೊತೆ ಕೈಜೋಡಿಸಬೇಕು. ಇಸ್ಲಾಮಿಕ್‌ ಸ್ಟೇಟ್‌ ಹಿಂದ್‌ ಪ್ರಾವಿನ್ಸ್‌ (ಐಎಸ್‌ಎಚ್‌ಪಿ) ತನ್ನ ಮೌನ ಮುರಿದು ಎದ್ದು ಕುಳಿತುಕೊಳ್ಳಬೇಕು’ ಎಂದು ಐಎಸ್‌ಕೆಪಿಯಿಂದ 55 ಪುಟಗಳ ಕರಪತ್ರ ಬಿಡುಗಡೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೆ, ವಿಡಿಯೋದಲ್ಲಿ ತಾಲಿಬಾನ್‌ ಹಾಗೂ ಅಷ್ಘಾನಿಸ್ತಾನದ ಸಚಿವರು ಭಾರತದ ಜೊತೆ ಸಂಬಂಧ ಸ್ಥಾಪಿಸಿಕೊಳ್ಳಲು ಮುಂದಾಗಿರುವುದನ್ನು ಖಂಡಿಸಲಾಗಿದೆ. ಕೊನೆಯಲ್ಲಿ ಭಾರತದ ಮೇಲೆ ಶೀಘ್ರದಲ್ಲೇ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.

Follow Us:
Download App:
  • android
  • ios