Asianet Suvarna News Asianet Suvarna News

ಕೇಂದ್ರ ಸರ್ಕಾರದಲ್ಲಿ ಸುಮಾರು 10 ಲಕ್ಷ ಹುದ್ದೆ ಖಾಲಿ: ರೈಲ್ವೇಲಿ 3 ಲಕ್ಷ ಬಾಕಿ

ರೈಲ್ವೆ ಹೊರತುಪಡಿಸಿ, ರಕ್ಷಣಾ (ಸಿವಿಲ್) ಇಲಾಖೆಯಲ್ಲಿ 2.64 ಲಕ್ಷ ಹುದ್ದೆಗಳು, ಗೃಹ ಇಲಾಖೆಯಲ್ಲಿ 1.43 ಲಕ್ಷ, ಹುದ್ದೆಗಳಲ್ಲಿ 90,050, ಕಂದಾಯದ ಇಲಾಖೆಯಲ್ಲಿ 80,243, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 25,934 ಹಾಗೂ ಅಣುಶಕ್ತಿ ಇಲಾಖೆಯಲ್ಲಿ 9,460 ಹುದ್ದೆಗಳು ಖಾಲಿ ಇವೆ ಎಂದೂ ಜಿತೇಂದ್ರ ಸಿಂಗ್ ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಮಾಹಿತಿ ಆಧರಿಸಿ ಹೇಳಿದರು. 

nearly 10 lakh posts vacant in central govt maximum of 2 93 lakh in railways check vacancies in other departments ash
Author
First Published Mar 30, 2023, 12:49 PM IST

ನವದೆಹಲಿ (ಮಾರ್ಚ್ 30, 2023): ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಸುಮಾರು 10 ಲಕ್ಷ ಹುದ್ದೆಗಳು ಬಾಕಿ ಇವೆ. ಹಾಗೆ, ಮಾರ್ಚ್ 1, 2021 ರಂತೆ ರೈಲ್ವೆ ಇಲಾಖೆ ಗರಿಷ್ಠ 2.93 ಲಕ್ಷ ಹುದ್ದೆಗಳನ್ನು ಹೊಂದಿದೆ ಎಂದು ಸಂಸತ್ತಿಗೆ ಬುಧವಾರ ಮಾಹಿತಿ ನೀಡಲಾಗಿದೆ. ಸಂಸತ್‌ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
"ಭರ್ತಿಯಾಗದ ಹುದ್ದೆಗಳನ್ನು ಸಕಾಲಿಕವಾಗಿ ಭರ್ತಿ ಮಾಡಲು ಸರ್ಕಾರವು ಈಗಾಗಲೇ ಎಲ್ಲಾ ಸಚಿವಾಲಯಗಳು/ಇಲಾಖೆಗಳಿಗೆ ಸೂಚನೆಗಳನ್ನು ನೀಡಿದೆ. ಭಾರತ ಸರ್ಕಾರವು ಆಯೋಜಿಸುತ್ತಿರುವ ರೋಜ್ಗಾರ್‌ ಮೇಳಗಳು ಮತ್ತಷ್ಟು ಉದ್ಯೋಗ ಸೃಷ್ಟಿಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ" ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಹಾಗೆ, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾಗಿ ಖಾಲಿ ಹುದ್ದೆಗಳ ಸಂಭವಿಸುವಿಕೆ ಮತ್ತು ಭರ್ತಿ ನಿರಂತರ ಪ್ರಕ್ರಿಯೆಯಾಗಿದೆ ಎಂದೂ ಅವರು ಹೇಳಿದರು.

ರೈಲ್ವೆ ಹೊರತುಪಡಿಸಿ, ರಕ್ಷಣಾ (ಸಿವಿಲ್) ಇಲಾಖೆಯಲ್ಲಿ 2.64 ಲಕ್ಷ ಹುದ್ದೆಗಳು, ಗೃಹ ಇಲಾಖೆಯಲ್ಲಿ 1.43 ಲಕ್ಷ, ಹುದ್ದೆಗಳಲ್ಲಿ 90,050, ಕಂದಾಯದ ಇಲಾಖೆಯಲ್ಲಿ 80,243, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ 25,934 ಹಾಗೂ ಅಣುಶಕ್ತಿ ಇಲಾಖೆಯಲ್ಲಿ 9,460 ಹುದ್ದೆಗಳು ಖಾಲಿ ಇವೆ ಎಂದೂ ಜಿತೇಂದ್ರ ಸಿಂಗ್ ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಮಾಹಿತಿ ಆಧರಿಸಿ ಹೇಳಿದರು. 

ಇದನ್ನು ಓದಿ: ಅಯ್ಯೋ ಪಾಪಿ: ಗಂಡನ ಉದ್ಯೋಗ ಪಡೆಯಲು ಪತಿಯನ್ನೇ ಕೊಲೆ ಮಾಡಿ ಫ್ಯಾನ್‌ಗೆ ನೇತು ಹಾಕಿದ ಮಹಿಳೆ..!

ಇನ್ನೊಂದೆಡೆ, ಉದ್ಯೋಗಗಳ ಕುರಿತು ಪ್ರತ್ಯೇಕ ಲಿಖಿತ ಉತ್ತರ ನೀಡಿದ ಸಚಿವರು ಸರ್ಕಾರದ ವರದಿ ಕಾರ್ಡ್ ಅನ್ನು ಪ್ರಸ್ತುತಪಡಿಸಿದರು. ದೇಶದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೈಗೊಂಡ ಕ್ರಮಗಳನ್ನು ಒತ್ತಿ ಹೇಳಿದ್ದಾರೆ. ಉದ್ಯೋಗ ಸೃಷ್ಟಿ, ಜೊತೆಗೆ ಉದ್ಯೋಗಾವಕಾಶವನ್ನು ಸುಧಾರಿಸುವುದು ಸರ್ಕಾರದ ಆದ್ಯತೆಯಾಗಿದೆ, ಅದರ ಪ್ರಕಾರ ಭಾರತ ಸರ್ಕಾರವು ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ಹೇಳಿದರು.

ವ್ಯಾಪಾರಕ್ಕೆ ಉತ್ತೇಜನ ನೀಡಲು ಮತ್ತು ಕೋವಿಡ್ 19 ಪ್ರತಿಕೂಲ ಪರಿಣಾಮವನ್ನು ತಗ್ಗಿಸಲು ಸರ್ಕಾರವು ಆತ್ಮನಿರ್ಭರ್ ಭಾರತ್ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದೂ ಅವರು ಹೇಳಿದರು. ಈ ಪ್ಯಾಕೇಜ್ ಅಡಿಯಲ್ಲಿ 27 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು. "ಈ ಪ್ಯಾಕೇಜ್ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ವಿವಿಧ ದೀರ್ಘಾವಧಿಯ ಯೋಜನೆಗಳು / ಕಾರ್ಯಕ್ರಮಗಳು / ನೀತಿಗಳನ್ನು ಒಳಗೊಂಡಿದೆ." ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಬ್ಯಾಂಕ್‌ ಪತನದಿಂದ 1 ಲಕ್ಷ ಉದ್ಯೋಗ ನಷ್ಟ..? ಭಾರತದ ಸ್ಟಾರ್ಟಪ್‌ಗಳ ನೆರವಿಗೆ ಸಜ್ಜಾದ ಕೆಂದ್ರ ಸರ್ಕಾರ

ಜನವರಿ 25, 2023 ರಂತೆ 60.26 ಲಕ್ಷ ಫಲಾನುಭವಿಗಳಿಗೆ ಸವಲತ್ತುಗಳನ್ನು ಒದಗಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು. ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಗಳನ್ನು ಸರ್ಕಾರವು 1.97 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 2021-22 ರಿಂದ ಪ್ರಾರಂಭವಾಗುವ 5 ವರ್ಷಗಳ ಅವಧಿಗೆ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದೂ ಜಿತೇಂದ್ರ ಸಿಂಗ್ ಹೇಳಿದ್ದಾರೆ. 

ಇದನ್ನೂ ಓದಿ: ಉದ್ಯೋಗಕ್ಕಾಗಿ ಭೂಮಿ ಹಗರಣ: ಲಾಲೂ 600 ಕೋಟಿ ರೂ. ಅಕ್ರಮ ಪತ್ತೆ..!

Follow Us:
Download App:
  • android
  • ios