ಮುಂಬೈ(ನ.22): ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ಧರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಣ್ಣು ಮುಕ್ಕಿಸಿದ್ದಾರೆ ಎಂದು ಪಕ್ಷದ ವಕ್ತಾರ ನವಾಬ್ ಮಲಿಕ್ ವ್ಯಂಗ್ಯವಾಡಿದ್ದಾರೆ.

ಚುನಾವಣಾ ಚಾಣಕ್ಯ ಎಂದು ಜಂಭ ಕೊಚ್ಚಿಕೊಳ್ಳುತ್ತಿದ್ದ ಅಮಿತ್ ಶಾ ಆಟ ಮಹಾರಾಷ್ಟ್ರದಲ್ಲಿ ನಡೆದಿಲ್ಲ ಎಂದು ನವಾಬ್ ಮಲಿಕ್ ಕಿಚಾಯಿಸಿದ್ದಾರೆ.

ವಾರಾಂತ್ಯಕ್ಕೆ ರಚನೆಯಾಗಲಿದೆ ಹೊಸ ಸರ್ಕಾರ: ತ್ರಿಮೂರ್ತಿಗಳ ಕನಸು ಸಾಕಾರ?

ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಮೈತ್ರಿಗೆ ಶರದ್ ಪವಾರ್ ಮುನ್ನುಡಿ ಬರೆದಿದ್ದು, ಅಮಿತ್ ಶಾ ಅವರ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ ಎಂದು ಮಲಿಕ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನವಾಬ್ ಮಲಿಕ್, ಅಮಿತ್ ಶಾ ಅವರಿಗೆ ಶರದ್ ಪವಾರ್ ಪೆಟ್ಟು ನೀಡಿದ್ದು, ದೆಹಲಿಯ ಸಿಂಹಾಸನದ ಮುಂದೆ ಮಹಾರಾಷ್ಟ್ರ ತಲೆ ತಗ್ಗಿಸಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉದ್ಧವ್‌ಗೆ 5 ವರ್ಷ ಸಿಎಂ ಪಟ್ಟ: ರಾಜಿ ಸೂತ್ರ ರೆಡಿ?

ಬಿಜೆಪಿ ಜೊತೆ ಸಖ್ಯ ಕಡಿದುಕೊಂಡಿರುವ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಜೊತೆ ಸೇರಿ ಸರ್ಕಾರ ರಚಿಸುತ್ತಿರುವುದು ಬಿಜೆಪಿಗೆ ಭಾರೀ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ.