ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ವೇಳೆ ಅವಘಡ, ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ!
ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ಸಂಸದೆ ಸುಪ್ರಿಯಾ ಸುಳೆ ಸೇರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆ ಪುಣೆಯಲ್ಲಿ ಆಯೋಜಿಸಿದ ಕರಾಟೆ ಸ್ಪರ್ಧಾ ಕಾರ್ಯಕ್ರಮದಲ್ಲಿ ನಡೆದಿದೆ.
ಪುಣೆ(ಜ.15): ಕರಾಟೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟನೆಗೆ ತೆರಳಿದ ಸಂಸದೆ ಸುಪ್ರಿಯಾ ಸುಳೆ ಸೀರೆಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಪುಣೆಯಲ್ಲಿ ಆಯೋಜಿಸಿದ ಕರಾಟೆ ಕಾರ್ಯಕ್ರಮದ ಉದ್ಘಾಟನೆಗೆ ಬಾರಮತಿ ಸಂಸದೆ ಸುಪ್ರಿಯಾ ತೆರಳಿದ್ದರು. ದೀಪ ಬೆಳಗಿಸಿದ ಬಳಿಕ ಅಲ್ಲೇ ಇದ್ದ ಛತ್ರಪತಿ ಶಿವಾಜಿ ಮಹರಾಜಾರ ಸಣ್ಣ ಪ್ರತಿಮೆ ಮಾಲಾರ್ಪಣೆ ಮಾಡಿದ್ದಾರೆ. ಈ ವೇಳೆ ದೀಪದ ಬೆಳಕು ಸುಪ್ರಿಯಾ ಸುಳೆ ಸೀರೆಗೆ ತಾಗಿದೆ. ಇಧರಿಂದ ಒಂದೇ ಸಮನೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಎಚ್ಚೆತ್ತುಕೊಂಡು ಸುಪ್ರಿಯಾ ಸುಳೆ ಹಿಂದೆ ಸರಿದಿದ್ದಾರೆ. ಈ ವೇಳೆ ನೆರೆದಿದ್ದವರು ಬೆಂಕಿ ಆರಿಸಿದ್ದಾರೆ. ಇದಿರಿಂದ ಅತೀ ದೊಡ್ಡ ಅಪಾಯದಿಂದ ಸುಪ್ರಿಯಾ ಸುಳೆ ಪಾರಾಗಿದ್ದಾರೆ.
ಪುಣೆಯ ಹಿಂಜವಾಡಿಯಲ್ಲಿ ಕರಾಟೆ ಸ್ಪರ್ಧೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಉದ್ಘಾಟಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಸಂಸದೆ ಸುಪ್ರಿಯಾ ಸುಳೆ ತೆರಳಿದ್ದಾರೆ. ಕಾರ್ಯಕ್ರಮದ ಆರಂಭದಲ್ಲೇ ಈ ಕಹಿ ಘಟನೆ ನಡೆದಿದೆ. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಕುರಿತು ಟ್ವೀಟ್ ಮಾಡಿರುವು ಸುಪ್ರಿಯಾ ಸುಳೆ, ಬೆಂಕಿ ಹೊತ್ತಿಕೊಂಡ ಘಟನೆಗೆ ಯಾರು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅಪಾಯ ಸಂಭವಿಸಿಲ್ಲ. ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ.
ಸಂಸತ್ತಿನಲ್ಲಿ ಗಡಿ ಗದ್ದಲ, ಕರ್ನಾಟಕ-ಮಹಾರಾಷ್ಟ್ರ ಸಂಸದರ ವಾಗ್ವಾದ!
ಶಿವಾಜಿ ಪ್ರತಿಮೆಗೆ ಬಗ್ಗಿ ಮಾಲಾರ್ಪಣೆ ಮಾಡಿದ ಸುಪ್ರಿಯಾ ಸುಳೆ, ಕ್ಯಾಮೆರಾಗೆ ಫೋಸ್ ನೀಡಿದ್ದಾರೆ. ಮಾಲಾರ್ಪಣೆ, ಕ್ಯಾಮೆರಾ ಮುಂದೆ ಕೆಳಗೆ ದೀಪ ಉರಿಯುತ್ತಿರುವುದನ್ನೇ ಸಂಸದೆ ಮರೆತಿದ್ದಾರೆ. ಇದರಿಂದ ದೀಪದಿಂದ ಸ್ಯಾರಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ಕೆಲ ಕಾಲ ಆತಂಕ ತಂದಿತ್ತು. ಸುಧಾರಿಸಿಕೊಂಡ ಸುಪ್ರಿಯಾ ಸುಳೆ, ಕಾರ್ಯಕ್ರಮ ಉದ್ಘಾಟಿಸಿ ಮುಂಬೈಗೆ ಮರಳಿದ್ದಾರೆ.
ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿಯಾಗಿರುವ ಸಂಸದೆ ಸುಪ್ರಿಯಾ ಸುಳೆ ಇತ್ತೀಚೆಗೆ ಬೆಳಗಾವಿ ಗಡಿ ಖ್ಯಾತೆಯ ವಿಚಾರದಲ್ಲಿ ಕನ್ನಡಿಗ ಆಕ್ರೋಶಕ್ಕೆ ಕಾರಣವಾಗಿದ್ದರು. ಲೋಕಸಭೆಯಲ್ಲಿ ಗಡಿ ಖ್ಯಾತೆ ಪ್ರಸ್ತಾಪಿಸಿ, ಕರ್ನಾಟದಕದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದರು. ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಹೊಸ ಸಮಸ್ಯೆಯೊಂದು ಉದ್ಭವವಾಗಿದೆ. ಬೆಳಗಾವಿ ಗಡಿ ವಿಚಾರವಾಗಿ ನೆರೆಯ ಕರ್ನಾಟಕದ ಮುಖ್ಯಮಂತ್ರಿ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಸಿಎಂ ಮಾತಿನಿಂದದ ಹಲವರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಸಿಎಂ ಹೇಳಿಕೆಗಳಿಂದ ಪ್ರಚೋದನೆ ಪಡೆದು ಕರ್ನಾಟಕಕ್ಕೆ ಹೋಗುತ್ತಿದ್ದ ಜನರ ಮೇಲೆ ದಾಳಿ ನಡೆಸಲಾಗಿದೆ ಎಂದು ಸುಪ್ರಿಯಾ ಸುಳೆ ಲೋಕಸಭೆಯಲ್ಲಿ ದೂರಿದ್ದರು.
ಉದ್ಧವ್ ಠಾಕ್ರೆ ಸೋದರತ್ತೆ ಸುಪ್ರಿಯಾ ಸುಳೆ ಅತ್ತೆ: ಫ್ಯಾಮಿಲಿ ಒಂದಾಗಲ್ವೆ ಮತ್ತೆ?
ಕರ್ನಾಟಕದ ಮುಖ್ಯಮಂತ್ರಿಗಳು ಮಹಾರಾಷ್ಟ್ರವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಎರಡೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಗಡಿಯಲ್ಲಿ ಮಹಾರಾಷ್ಟ್ರದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಸುಪ್ರಿಯಾ ಸುಳೆ ಸಿಎಂ ಕುರ್ಚಿ ಮೇಲೆ ಕುಳಿತ ಚಿತ್ರ ವೈರಲ್
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತ ಫೋಟೋವನ್ನು ಎನ್‌ಸಿಪಿ ಬಿಡುಗಡೆ ಮಾಡಿದ ಬೆನ್ನಲ್ಲೇ, ಎನ್‌ಸಿಪಿ ನಾಯಕ ಶರದ್ ಪವಾರ್ ಅವರ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತ ಫೋಟೋವನ್ನು ಶಿಂಧೆ ಬಣ ಬಿಡುಗಡೆ ಮಾಡಿದೆ. ‘ನೋಡಿ ಮುಖ್ಯಮಂತ್ರಿ ಕುರ್ಚಿಯ ಮೇಲೆ ಯಾರು ಕುಳಿತಿದ್ದಾರೆ’ ಎಂದು ಶಿಂಧೆ ಬಣದ ವಕ್ತಾರೆ ಶೀತಲ್ ಮ್ಹಾತ್ರೆ ಟ್ವೀಟ್ ಮಾಡಿದ್ದಾರೆ. ‘ಆದರೆ ಇದು ಸುಳ್ಳು. ಇದೊಂದು ತಿರುಚಿದ ಫೋಟೋ. ಈ ಬಗ್ಗೆ ಪೊಲೀಸ್‌ಗೆ ದೂರು ನೀಡಿದ್ದೇವೆ’ ಎಂದು ಎನ್‌ಸಿಪಿ ಹೇಳಿದೆ.