ಸುದ್ದಿ ವಾಹನಿಗಳಲ್ಲಿ, ಡಿಜಿಟಲ್ ಸುದ್ದಿ ಮಾಧ್ಯಮಗಳಲ್ಲಿ ಪಾಕಿಸ್ತಾನಿ ಕಮೆಂಟೇಟರ್ಸ್, ಭಾರತ ವಿರೋಧಿ ಧೋರಣೆ ವಿಶ್ಲೇಷಕರನ್ನು ಆಹ್ವಾನಿಸದಂತೆ ಭಾರತದ NBDA ಪ್ರಕಟಣೆ ಹೊರಡಿಸಿದೆ.
ನವದೆಹಲಿ(ಮ.04) ಪೆಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರ ಹಂತ ಹಂತವಾಗಿ ತಿರುಗೇಟು ನೀಡುತ್ತಿದೆ. ಪಾಕಿಸ್ತಾನದ ಮೇಲೆ ಪ್ರತಿದಾಳಿಗೂ ಮೊದಲು ಭಾರತ ಆರ್ಥಿಕವಾಗಿ ಪಾಕಿಸ್ತಾನವನ್ನು ಹೈರಾಣಾಗುವಂತೆ ಮಾಡಲಾಗುತ್ತಿದೆ. ಇದರ ನಡುವೆ ಇದೀಗ ಭಾರತದ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಹಾಗೂ ಡಿಜಿಟಲ್ ಅಸೋಸಿಯೇಶನ್(NBDA) ಮಹತ್ವದ ಸೂಚನೆ ನೀಡಿದೆ. ಭಾರತದ ಸುದ್ದಿ ವಾಹನಿಗಳಲ್ಲಿ ಪಾಕಿಸ್ತಾನಿ ವಕ್ತಾರರು, ಕಮೆಂಟೇಟರ್ಸ್, ವಿಶ್ಲೇಷಕರನ್ನು ಆಹ್ವಾನಿಸಿದಂತೆ ಸೂಚಿಸಿದೆ. ಭಾರತ ಸುದ್ದಿ ವಾಹನಿಗಳಲ್ಲಿ ಪಾಕಿಸ್ತಾನದ ವಿಶ್ಲೇಷಕರು, ಕಮೆಂಟೇಟರ್ಸ್ ಭಾರತ ವಿರೋಧಿ ನಿಲುವು, ತಪ್ಪು ಮಾಹಿತಿಗಳ ನೀಡುತ್ತಿದ್ದಾರೆ. ಹೀಗಾಗಿ ಪಾಕಿಸ್ತಾನಿ ಕಮೆಂಟೇಟರ್ಸ್, ವಿಶ್ಲೇಷಕರನ್ನು ಆಹ್ವಾನಿಸದಂತೆ ಸೂಚಿಸಿದೆ.
ಸುದ್ದಿ ವಾಹನಿಗಳಲ್ಲಿ ಅಭಿಪ್ರಾಯ, ಲೈವ್ ಕಾರ್ಯಕ್ರಮ ಮೇಲೆ ನಿಗಾ
ಭಾರತದ ಕೆಲ ಸುದ್ದಿ ವಾಹನಿಗಳು ಪಾಕಿಸ್ತಾನಿ ವಕ್ತಾರರು, ಕಮೆಂಟೇಟರ್ಸ್, ವಿಶ್ಲೇಕರನ್ನು ಆಹ್ವಾನಿಸಲಾಗುತ್ತಿದೆ. ಭಾರತ ಹಾಗೂ ಪಾಕ್ ಕುರಿತು ಹಲವು ಕಾರ್ಯಕ್ರಗಳು, ಸುದ್ದಿಗೆ ಅನುಗುವಣವಾಗಿ ಪ್ರತಿಕ್ರಿಯೆ, ನೇರ ಪ್ರಸಾರದ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತಿದೆ. ಈ ವೇಳೆ ಈ ಪಾಕಿಸ್ತಾನಿ ಮೂಲದ ವ್ಯಕ್ತಿಗಳು ಭಾರತ ವಿರೋದಿ ಹೇಳಿಕೆ ನೀಡುತ್ತಿದ್ದಾರೆ. ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಇದು ಅಪಾಯಕಾರಿದೆ. ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಖಡಕ್ ವಾರ್ನಿಂಗ್ ನೀಡಿದೆ. ಹೀಗಾಗಿ ಯಾರೂ ಕೂಡ ಪಾಕಿಸ್ತಾನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ನಿಯಮ ಉಲ್ಲಂಘಿಸಬೇಡಿ ಎಂದು NBDA ಎಚ್ಚರಿಸಿದೆ.
ಪಾಕ್‌ಗೆ ಪಾಠ ಕಲಿಸುವ ಸಮಯ, CWC ಸಭೆಯಲ್ಲಿ ಪೆಹಲ್ಗಾಂ ದಾಳಿ ಕುರಿತು ಕಾಂಗ್ರೆಸ್ ನಿರ್ಣಯ
ಸುದ್ದಿ ವಾಹಿನಿಗಳ ಸಂಪಾದಕರಿಗೆ NBDA ಮಹತ್ವದ ಆದೇಶ ಹೊರಡಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕುರಿತು ಹದ್ದಿನ ಕಣ್ಣಿಟ್ಟಿದೆ. ಈಗಾಗಲೇ ಕೆಲ ಸುದ್ದಿವಾಹನಿಗಳು ಪಾಕಿಸ್ತಾನಿಗಳಿಂದ ಭಾರತದ ಸುದ್ದಿ ವಾಹನಿಗಳಲ್ಲಿ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ನೇರ ಸಂದರ್ಶನದಲ್ಲಿ ಅಭಿಪ್ರಾಯ ಕೇಳುತ್ತಿದ್ದಾರೆ. ಭಾರತ ವಿರುದ್ಧ ನಿಲುವುಗಳು, ವಿರೋಧಿ ನೀತಿಗಳನ್ನು ಹರಡಲಾಗುತ್ತಿದೆ ಎಂದು ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಸೂಚಿಸಿದೆ. ಈ ಕುರಿತು ಆದೇಶ ಪತ್ರದಲ್ಲಿ ಉಲ್ಲೇಖಿಸಿದೆ.
ಪೆಹಲ್ಗಾಂ ಉಗ್ರ ದಾಳಿಯಿಂದ ಕೇಂದ್ರ ಸಚಿವಾಲಯ ಈ ಕುರಿತು ಕಠಿಣ ಸೂಚನೆ ನೀಡಿದೆ. ಯಾವುದೇ ರೀತಿಯಲ್ಲೂ ನಿಯಮ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು NBDA ಸೂಚಿಸಿದೆ. ಹೀಗಾಗಿ ಇದರ ಮಹತ್ವದ ಹಾಗೂ ತಪ್ಪು ಮಾಹಿತಿ ಹರಡದಂತೆ ನೋಡಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
ಪಾಕಿಸ್ತಾನ ಮೇಲೆ ಬ್ಯಾನ್ ಸಂಕಷ್ಟ
ಪೆಹಲ್ಗಾಂ ಉಗ್ರ ದಾಳಿ ಬಳಿಕ ಕಂದ್ರ ಪ್ರಸಾರ ಹಾಗೂ ಮಾಹಿತಿ ಸಚಿವಾಲಯ ಹಲವು ಕ್ರಮಗಳನ್ನು ಕೈಗೊಂಡಿದೆ. ಭಾರತ ವಿರೋಧಿ ಮಾಹಿತಿಗಳನ್ನು ನೀಡುತ್ತಿದ್ದ 16ಕ್ಕೂ ಪಾಕಿಸ್ತಾನಿ ಯೂಟ್ಯೂಬ್ ಚಾನೆಲ್ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಇನ್ನು ಪಾಕಿಸ್ತಾನಿ ಬಹುತೇಕ ಸೆಲೆಬ್ರೆಟಿಗಳು, ಸಚಿವರು, ಸೆಲೆಬ್ರೆಟಿಗಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
Breaking ಪಾಕಿಸ್ತಾನದ ಎಲ್ಲಾ ಉತ್ಪನ್ನ ಬ್ಯಾನ್, ಆಮದು ಸಂಪೂರ್ಣ ಸ್ಥಗಿತಗೊಳಿಸಿದ ಭಾರತ


