ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ (ಏಪ್ರಿಲ್ 22) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 28 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ದುರಂತದ ನಡುವೆ ಸ್ಥಳೀಯ ನಿವಾಸಿ ನಜಕತ್ ಅಲಿಯ ಶೌರ್ಯದ ಕತೆ ಎಲ್ಲರ ಮನ ಗೆದ್ದಿದೆ. ಛತ್ತೀಸ್‌ಗಢದ ಚಿರ್ಮಿರಿಯ ನಾಲ್ಕು ಕುಟುಂಬಗಳನ್ನು ಒಳಗೊಂಡ ಗುಂಪನ್ನು ಕಾಶ್ಮೀರ ಪ್ರವಾಸಕ್ಕೆ ಕರೆದೊಯ್ದಿದ್ದ ನಜಕತ್ ಅಲಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಈ ಗುಂಪಿನ ಜೀವಗಳನ್ನು ರಕ್ಷಿಸಿದ್ದಾರೆ.

ಶ್ರೀನಗರ, (ಏ.24): ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ಮಂಗಳವಾರ (ಏಪ್ರಿಲ್ 22) ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 28 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈ ದುರಂತದ ನಡುವೆ ಸ್ಥಳೀಯ ನಿವಾಸಿ ನಜಕತ್ ಅಲಿಯ ಶೌರ್ಯದ ಕತೆ ಎಲ್ಲರ ಮನ ಗೆದ್ದಿದೆ. ಛತ್ತೀಸ್‌ಗಢದ ಚಿರ್ಮಿರಿಯ ನಾಲ್ಕು ಕುಟುಂಬಗಳನ್ನು ಒಳಗೊಂಡ ಗುಂಪನ್ನು ಕಾಶ್ಮೀರ ಪ್ರವಾಸಕ್ಕೆ ಕರೆದೊಯ್ದಿದ್ದ ನಜಕತ್ ಅಲಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಈ ಗುಂಪಿನ ಜೀವಗಳನ್ನು ರಕ್ಷಿಸಿದ್ದಾರೆ.

ದಾಳಿಯ ಸಮಯದಲ್ಲಿ, ಛತ್ತೀಸ್‌ಗಢದ ಬಿಜೆಪಿ ಯುವ ಮೋರ್ಚಾ ಸದಸ್ಯ ಅರವಿಂದ್ ಅಗರ್ವಾಲ್, ಚಿರ್ಮಿರಿ ಮುನ್ಸಿಪಲ್ ಕಾರ್ಪೊರೇಶನ್‌ನ ಬಿಜೆಪಿ ಕೌನ್ಸಿಲರ್ ಪೂರ್ವಾ ಸ್ಥಾಪಕ್ ಮತ್ತು ಅವರ ಪತಿ ಕುಲದೀಪ್ ಸ್ಥಾಪಕ್ ಸೇರಿದಂತೆ ಗುಂಪಿನ ಎಲ್ಲರನ್ನೂ ನಜಕತ್ ಅಲಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆಯ ನಂತರ, ತಮ್ಮ ಮನೆಗೆ ಮರಳಿದ ಅರವಿಂದ್ ಅಗರ್ವಾಲ್, ನಜಕತ್ ಅಲಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಬರೆದಿದ್ದಾರೆ, 'ನೀವು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಜೀವಗಳನ್ನು ಉಳಿಸಿದ್ದೀರಿ. ನಜಕ್ ಭಾಯ್ ಅವರ ಉಪಕಾರಕ್ಕೆ ನಾವು ಎಂದಿಗೂ ತೀರಿಸಲು ಸಾಧ್ಯವಿಲ್ಲ' ಎಂದಿದ್ದಾರೆ. 

View post on Instagram

ಅರವಿಂದ್ ಮತ್ತೊಂದು ಪೋಸ್ಟ್‌ನಲ್ಲಿ, 'ನಮ್ಮದೇ ಆದ ಕಾಶ್ಮೀರ ನಮ್ಮೆಲ್ಲರಿಗೂ ಸೇರಿದ್ದು, ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ' ಎಂದು ತಮ್ಮ ಕಾಶ್ಮೀರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನಜಕತ್ ಅಲಿಯ ಈ ವೀರಕಾರ್ಯವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದೆ. ಈ ದಾಳಿಯನ್ನು 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ಎಂಬ ಭಯೋತ್ಪಾದಕ ಸಂಘಟನೆ ಹೊಣೆಗಾರಿಕೆ ಹೊತ್ತಿದ್ದು, ಇದು ಲಷ್ಕರ್-ಎ-ತೈಬಾದ ಒಂದು ಶಾಖೆಯಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಒಂದು ವಾರದಲ್ಲಿ ಭಾರತ ದೊಡ್ಡ ದಾಳಿ ನಡೆಸಬಹುದು; ಪಾಕ್‌ಗೆ ಮಾಜಿ ಹೈಕಮಿಷನರ್ ಅಬ್ದುಲ್ ಬಸಿತ್ ಎಚ್ಚರಿಕೆ!

ನಜಕತ್ ಅಲಿಯ ಈ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಕಾರ್ಯವು ಒಗ್ಗಟ್ಟಿನ ಸಂದೇಶವನ್ನು ಸಾರಿದೆ. 'ನಜಕತ್ ಭಾಯ್‌ರಂತಹ ಮಾನವೀಯತೆಯುಳ್ಳವರು ಅನೇಕರು ಕಾಶ್ಮೀರದಲ್ಲಿದ್ದಾರೆ. ಕಾಶ್ಮೀರ ಎಂದಿಗೂ ಭಯೋತ್ಪಾದನೆಗೆ ತಲೆಬಾಗದು' ಎಂದು ಅರವಿಂದ್ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.