ಚತ್ತೀಸಘಡ(ಎ.04): ನಕ್ಸಲರ ದಾಳಿಗೆ ಹುತಾತ್ಮರಾದ 22 ಯೋಧರ ಜೀವನ ಕತೆಗಳು ಕಣ್ಣೀರು ತರಿಸುವಂತಿದೆ. ತನ್ನ ಕನಸಾಗಿದ್ದ ಮನೆ ನಿರ್ಮಾಣ ಪೂರ್ತಿಗೊಳಿಸಿದರೂ ಮನೆಗೆ ಕಾಲಿಡಲೂ ಸಾಧ್ಯವಾಗಿಲ್ಲ,  ಮಕ್ಕಳ ಮುಖ ನೋಡಿಲ್ಲ, ಕಾರ್ಯಕ್ರಮಕ್ಕೆ ಬರುತ್ತೇನೆ ಎಂದ ಯೋಧ ಬಂದಿಲ್ಲ. ಹೀಗೆ ಹುತಾತ್ಮ ಯೋಧರ ಒಂದೊಂದು ಕತೆ ಕರಳುಹಿಂಡುವಂತಿದೆ.

22 ಯೋಧರು ಹುತಾತ್ಮ, 30 ಮಂದಿ ನಾಪತ್ತೆ; ಚತ್ತೀಸ್‌ಘಡದಲ್ಲಿ ಅತೀ ಭೀಕರ ನಕ್ಸಲ್ ದಾಳಿ!

ಚತ್ತೀಸ್‌ಘಡ ಮೂಲಕ ಸೋಧಿ ನಾರಾಯಣ್ ಡಿಸ್ಟಿಕ್ ರಿಸರ್ವ್ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ. ಈ ನಕ್ಸಲರ ದಾಳಿಯಲ್ಲಿ ಸೋಧಿ ನಾರಾಯಣ್ ಹುತಾತ್ಮನಾಗಿದ್ದಾನೆ. ಸಹೋದರನ ಮರಣ ವಾರ್ತೆಗೆ ಬಿಕ್ಕಿ ಬಿಕ್ಕಿ ಅತ್ತ ಭೀಮಾ ಸೋಧಿ, ಮಾವೋವಾದಿಗಳ ಮಟ್ಟ ಹಾಕುವುದಾಗಿ ಶಪಥ ಮಾಡಿದ್ದಾರೆ.

ನಕ್ಸಲ್ ದಾಳಿ ಬೆನ್ನಲ್ಲೇ ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್ ಶಾ!

ಸಹೋದರನ ನಷ್ಟ ನಮಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಕುಟುಂಬಕ್ಕೆ ಸೋಧಿ ಅಗಲಿಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಾವು ಐವರು ಸಹೋದರರು. ಸೋಧಿ ನಾರಾಯಣ್  ಯೋಧನಾಗಿದ್ದರೆ, ಇತರ ನಾಲ್ವರು ಪೊಲೀಸ್ ಇಲಾಖೆಯಲ್ಲಿದ್ದೇವೆ. ಮಾವೋವಾದಿಗಳ ಬೆದರಿಕೆಗೆ ನಾವು ಹೆದರುವುದಿಲ್ಲ. ಮಾವೋವಾದಿಗಳ ಮಟ್ಟ ಹಾಕುತ್ತೇವೆ ಎಂದು ಭೀಮಾ ಸೋಧಿ ಹೇಳಿದ್ದಾರೆ.

ನಕ್ಸಲರ ದಾಳಿಗಳಿಂದ ಕಳೆದ ಕೆಲ ವರ್ಷಗಳಲ್ಲಿ ಹಲವು ಬುಡಕಟ್ಟು ಜನಾಂಗದ ಯುವಕರು ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಈ ನಕ್ಸಲರ ಬೇರು ಸಹಿತಿ ಕಿತ್ತು ಹಾಕುತ್ತೇವೆ ಎಂದು ಭೀಮಾ ಸೋಧಿ ಹೇಳಿದ್ದಾರೆ. ಇತ್ತ ಹುತಾತ್ಮ ಯೋಧನ ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅಗಲಿರುವ ಸೋಧಿ ನಾರಾಯಣ್ ಕುಟಂಬ ಆಕ್ರಂದನ ಮುಗಿಲು ಮುಟ್ಟಿದೆ.