ಪಣಜಿ(ನ.16): ಭಾರತೀಯ ನೌಕಾಪಡೆಯ ಮಿಗ್ ತರಬೇತಿ ವಿಮಾನ ಗೋವಾದ ಗ್ರಾಮವೊಂದರಲ್ಲಿಅಪಘಾತಕ್ಕೀಡಾಗಿದೆ.

ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಪ್ಯಾರಾಚೂಟ್‌ನಿಂದ ಸುರಕ್ಷಿತವಾಗಿ ಹಾರಿದ ಪರಿಣಾಮ, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಗೋವಾ ವಿಭಾಗದ ಭಾರತೀಯ ನೌಕಾಪಡೆ ಅಧಿಕಾರಿ ರೇರ್ ಅಡ್ಮಿರಲ್ ಫಿಲಿಪೊಸ್ ಜಾರ್ಜ್ ಪೈನುಮೂಟಿಲ್, ಅಪಘಾತದ ಮುನ್ಸೂಚನೆ ಅರಿತ ಪೈಲೆಟ್‌ಗಳು ಪ್ಯಾರಾಚೂಟ್ ಸಹಾಯದಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.