Asianet Suvarna News Asianet Suvarna News

ಡ್ಯಾನ್ಸ್ ಮಾಡುತ್ತಲೇ ಕುಸಿದ ಬಿದ್ದ ಮಗನ ಸಾವು, ಶಾಕ್‌ನಿಂದ ತಂದೆ ಸ್ಥಳದಲ್ಲೇ ನಿಧನ

ಕಳೆದೆರಡು ವರ್ಷ ಕೊರೋನಾ ಕಾರಣ ಹಲವು ನಿರ್ಬಂಧಗಳು ಹಬ್ಬದ ಆಚರಣೆಗೆ ತೊಡಕಾಗಿತ್ತು. ಹೀಗಾಗಿ ದೇಶದೆಲ್ಲಡೆ ನವರಾತ್ರಿ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ನವರಾತ್ರಿಯ ಸಂಭ್ರಮ ಮನೀಶ್ ಕುಟುಂಬಕ್ಕೆ ಬರಸಿಡಿಲು ಬಡಿದಿದೆ. ಗರ್ಬಾ ನೃತ್ಯ ಮಾಡುತ್ತಲೇ ಮಗ ಕುಸಿದು ಬಿದ್ದಿದ್ದಾನೆ. ಪುತ್ರನ ತಕ್ಷಣವೇ ಆಸ್ಪತ್ರೆ ದಾಖಲಿಸಿದ ತಂದೆಯು ನಿಧನರಾಗಿದ್ದರೆ.
 

Navratri Festival Man died after collapse while Garba dance hearing about son death father died on spot due to shock in Mumbai ckm
Author
First Published Oct 3, 2022, 3:42 PM IST

ವಿರಾರ್(ಅ.03):  ನವರಾತ್ರಿ ಹಬ್ಬದ ಆಚರಣೆಯಲ್ಲಿ ಗರ್ಬಾ ನೃತ್ಯಕ್ಕೆ ವಿಶೇಷ ಮಹತ್ವವಿದೆ. ಗರ್ಬಾ ಗುಜರಾತ್ ಸಂಸ್ಕೃತಿಯಾದರೂ ದೇಶದ ಹಲವು ರಾಜ್ಯಗಳಲ್ಲಿ ಗರ್ಬಾ ನೃತ್ಯದ ಮೂಲಕ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಹೀಗೆ ಮುಂಬೈನ ಪಲ್ಗಾರ್ ಜಿಲ್ಲೆಯ ವಿರಾರ್‌ನಲ್ಲಿ ರಾತ್ರಿ ಆಯೋಜಿಸಿದ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡ 35 ಹರೆಯದ ಮನೀಶ್ ನರಾಪ್ಜಿ ಸೋನಗ್ರ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾನೆ. ತಕ್ಷಣೆ ಕಾರ್ಯಪ್ರವೃತ್ತರಾದ ಮನೀಶ್ ತಂದೆ, ಮಗನನ್ನು ಆಸ್ಪತ್ರೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಕೆಲ ಹೊತ್ತಿನ ಬಳಿ ನಿಮ್ಮ ಮಗ ಬದುಕುಳಿಯಿಲ್ಲ ಎಂದು ತಂದೆಗೆ ಹೇಳಿದ್ದಾರೆ. ಈ ಸುದ್ದಿ ಕೇಳಿದ ತಂದೆ ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮನೀಶ್ ಕುಟುಂಬಕ್ಕೆ ಸಂಭ್ರಮ ತರಬೇಕಿದ್ದ ನವರಾತ್ರಿ ಈ ಬಾರಿ ಬರಸಿಡಿಲಿನಂತೆ ಎರಗಿದೆ.

ಮುಂಬೈನ ವಿರಾರ್ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನವರಾತ್ರಿ ಹಬ್ಬದ(navratri Festival) ಪ್ರಯುಕ್ತ ಗರ್ಬಾ ನೃತ್ಯ(garba dance) ಆಯೋಜಿಸಲಾಗಿತ್ತು. ಶನಿವಾರ ಹಾಗೂ ಭಾನುವಾರ ರಾತ್ರಿ ಗರ್ಬಾ ನೃತ್ಯ ಆಯೋಜಿಸಲಾಗಿತ್ತು. ಭಾನುವಾರ ರಾತ್ರಿ ಮನೀಶ್ ತನ್ನು ಕುಟುಂಬದ ಜೊತೆ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಆರಂಭದಲ್ಲಿ ನೃತ್ಯ ಮಾಡಿ ಕೆಲ ಹೊತ್ತು ವಿಶ್ರಾಂತಿ ಪಡೆದ ಮನೀಶ್, ಸುಧಾರಿಸಿಕೊಂಡು ಮತ್ತೆ ಗರ್ಬಾ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇತ್ತ ಮನೀಶ್ ಕುಟುಂಬ ಕೂಡ ನೃತ್ಯದಲ್ಲಿ ಪಾಲ್ಗೊಂಡು ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದೆ.

ನವರಾತ್ರಿಯಲ್ಲಿ ಗರ್ಬಾ ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಯುವಕ ಸಾವು: ವಿಡಿಯೋ ವೈರಲ್

ಮನೀಶ್ ನೃತ್ಯ ಮಾಡುತ್ತಲೇ ಅಸ್ವಸ್ಥರಾಗಿದ್ದಾರೆ. ಆದರೆ ನೃತ್ಯದ ನಡುವೆ ಯಾರೂ ಮನೀಶ್ ಗಮನಿಸಲಿಲ್ಲ. ಕೆಲ ಹೊತ್ತಲ್ಲೇ ತೀವ್ರ ಅಸ್ವಸ್ಥಗೊಂಡ ಮನೀಶ್ ನೃತ್ಯ ಮಾಡುತ್ತದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಮನೀಶ್ ಎಬ್ಬಿಸಲು ಕೆಲವರು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮನೀಶ್ ತಂದೆಗೆ ಪರಿಸ್ಥಿತಿಯ ಗಂಭೀರತೆ ಅರಿವಾಗಿದೆ. ಹೀಗಾಗಿ ತಡಮಮಾಡದೇ ಪುತ್ರನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ.

ತುರ್ತು ಚಿಕಿತ್ಸಾ ಘಟಕ್ಕೆ ದಾಖಲಿಸಿದ ತಂದೆ ಚಿಂತಾಕ್ರಾಂತರಾಗಿದ್ದರು. ಇತ್ತ ಮನೀಶ್ ತಪಾಸಣೆ ನಡೆಸಿದ ವೈದ್ಯರು ಆಸ್ಪತ್ರೆ ದಾಖಲಿಸುವ ಮುನ್ನವೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಈ ಮಾಹಿತಿಯನ್ನು ಮನೀಶ್ ತಂದೆಗೆ ಆಸ್ಪತ್ರೆ ಸಿಬ್ಬಂಧಿಗಳು ನೀಡಿದ್ದಾರೆ. ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಮನೀಶ್ ತಂದೆಗೆ ಆಘಾತವಾಗಿದೆ. ಮಗನ ಸಾವಿನ ಸುದ್ದಿ ಕೇಳಿದ ತಂದೆ ಶಾಕ್‌ನಿಂದ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ತುರ್ತು ಚಿಕಿತ್ಸಾ ಘಟಕದ ಮುಂದೆ ಕುಸಿದ ಬಿದ್ದ ತಂದೆಯ ನೆರವಿಗೆ ವೈದ್ಯರು ಧಾವಿಸಿದ್ದಾರೆ. ಆದರೆ ಅಷ್ಟರಲ್ಲೇ ಮನೀಶ್ ತಂದೆಯ ಪ್ರಾಣ ಪಕ್ಷಿಯೂ ಹಾರಿಹೋಗಿದೆ. ಮಗನ ಬದುಕಿಸಲು ಮಿಂಚಿನಂತೆ ಕಾರ್ಯಪ್ರವೃತ್ತಿಸಿದ ತಂದೆಯೂ ನಿಧನರಾಗಿದ್ದಾರೆ. ಇಬ್ಬರ ಸಾವಿನ ಸುದ್ದಿ ಕೇಳಿದ ಮನೀಶ್ ಕುಟುಂಬ ಆಘಾತದಿಂದ ಇನ್ನೂ ಹೊರಬಂದಿಲ್ಲ. ವಿರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕಸ್ಮಿಕ ಸಾವು ಎಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. 

ಗುಜರಾತ್‌ನಲ್ಲಿ 21 ವರ್ಷದ ಯುವಕ ಸಾವು
ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದ 21 ವರ್ಷದ ಯುವಕ ಇದೇ ರೀತಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಯುವಕನ ಸ್ನೇಹಿತರು ವಿಡೀಯೋ ಮಾಡುತ್ತಿದ್ದಂತೆ ಯುವಕ ಕುಸಿದು ಬಿದ್ದಿದ್ದಾನೆ. ತಕ್ಷಣೇ ಆಸ್ಪತ್ರೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Follow Us:
Download App:
  • android
  • ios