ರಾವಣನ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಧಮತರಿ ಮುನ್ಸಿಪಲ್ ಕಾರ್ಪೊರೇಷನ್ ಆದೇಶ ಹೊರಡಿಸಿದೆ. ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದರೂ 10 ತಲೆಗಳು ಸುಡಲಿಲ್ಲ ಎಂಬ ವರದಿ ಹಿನ್ನೆಲೆ ಅಮಾನತುಗೊಳಿಸಲಾಗಿದೆ.
ಛತ್ತೀಸ್‌ಗಢದ (Chattisgarh) ಧಮತರಿ (Dhamtari) ಎಂಬಲ್ಲಿ ದಸರಾ (Dasara) ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ರಾವಣ (Ravan) ದಹನ ಕಾರ್ಯಕ್ರಮದಲ್ಲಿ ರಾವಣನ 10 ತಲೆಗಳು ಸುಡದೆ ಹಾಗೇ ಉಳಿದಿವೆ. ಈ ಹಿನ್ನೆಲೆ ರಾವಣ ದಹನ ಉಸ್ತುವಾರಿ ಹೊತ್ತಿದ್ದ ಗುಮಾಸ್ತ (Clerk) ಸೇರಿದಂತೆ 4 ಅಧಿಕಾರಿಗಳಿಗೆ (Officials) ಶೋಕಾಸ್ ನೋಟಿಸ್ ನೀಡಲಾಗಿದೆ. ಇಲ್ಲಿನ ಸ್ಥಳಿಯ ಆಡಳಿತದಿಂದ ರಾವಣ ದಹನ ಆಯೋಜಿಸಲಾಗಿತ್ತು. ಆದರೆ ರಾವಣ ಪ್ರತಿಕೃತಿ (Ravan Effigy) ತಯಾರಿಕೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಕಾರಣ ನೀಡಿ 3ನೇ ದರ್ಜೆ ನೌಕರ ಯಾದವ್ ಅವರನ್ನು ಅಮಾನತುಗೊಳಿಸಲಾಗಿದೆ.
ಛತ್ತೀಸ್‌ಗಢದಲ್ಲಿ ನಡೆದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟುಹೋಗದ ಹಿನ್ನೆಲೆಯಲ್ಲಿ ಧಮತರಿ ನಾಗರಿಕ ಸಂಸ್ಥೆಯ ನೌಕರನನ್ನು ಅಮಾನತುಗೊಳಿಸಲಾಗಿದೆ ಮತ್ತು ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಕ್ಟೋಬರ್ 5 ರಂದು ಧಮತರಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಕೃತಿ ದಹನ ಕಾರ್ಯಕ್ರಮದ ಚಿತ್ರಗಳು ರಾಕ್ಷಸ ರಾಜನ ತಲೆಗಳು ಹಾಗೆ ಉಳಿದಿವೆ ಮತ್ತು ಮುಂಡವು ಬೂದಿಯಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ರಾವಣ ದಹನದ ವೇಳೆ ಅವಘಡ, ಜನರ ಮೇಲೆ ಬಿತ್ತು ಹೊತ್ತಿ ಉರಿಯುತ್ತಿದ್ದ ಪ್ರತಿಕೃತಿ!
ಉತ್ತರ ಭಾರತದಲ್ಲಿ ದಸರಾ ಅಥವಾ ವಿಜಯದಶಮಿಯು (Vijayadashami) ವಾರ್ಷಿಕ ದುರ್ಗಾಪೂಜಾ (Durga Puja) ಉತ್ಸವದ ಅಂತ್ಯವನ್ನು ಸೂಚಿಸುತ್ತದೆ. ಇದರಲ್ಲಿ ದುಷ್ಟರ ವಿರುದ್ಧ ಒಳ್ಳೆಯತನದ ವಿಜಯವನ್ನು ಸಂಕೇತಿಸಲು ರಾವಣನ ಪ್ರತಿಕೃತಿಗಳನ್ನು ದೇಶದಾದ್ಯಂತ ಸುಡಲಾಗುತ್ತದೆ. ಧಮತರಿಯಲ್ಲಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿತ್ತು. ದಸರಾ ಆಚರಣೆಯ ನಂತರ, ರಾವಣನ ಮೂರ್ತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಅಮಾನತುಗೊಳಿಸಿ ಧಮತರಿ ಮುನ್ಸಿಪಲ್ ಕಾರ್ಪೊರೇಷನ್ (Dhamtari Municipal Corporation) (ಡಿಎಂಸಿ) ಆದೇಶ ಹೊರಡಿಸಿದೆ.
2022 ರ ದಸರಾ ಆಚರಣೆಗಾಗಿ ರಾವಣನ ಪ್ರತಿಮೆ ಮಾಡುವಲ್ಲಿ ಸಹಾಯಕ ಗ್ರೇಡ್-3 ನೌಕರ ಯಾದವ್ ಅವರು ಗಂಭೀರ ನಿರ್ಲಕ್ಷ್ಯ ಮಾಡಿದ್ದು, ಇದರಿಂದ ಡಿಎಂಸಿಯ ಪ್ರತಿಷ್ಠೆ ಹಾಳಾಗಿದೆ ಎಂದು ಆದೇಶವು ಹೇಳುತ್ತದೆ. ಯಾದವ್ ಅವರನ್ನು ಅಮಾನತುಗೊಳಿಸಿದ ನಂತರ, ಮತ್ತೊಬ್ಬ ಉದ್ಯೋಗಿ ಸಮರ್ಥ್ ರಾಂಸಿಂಗ್ ಅವರಿಗೆ ಯಾದವ್ ಅವರ ಜವಾಬ್ದಾರಿಯನ್ನು ವಹಿಸಲಾಯಿತು ಎಂದು ಡಿಎಂಸಿಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಪದಮ್ವಾರ್ ಹೇಳಿದ್ದಾರೆ.
ಅಲ್ಲದೆ, ಸಹಾಯಕ ಎಂಜಿನಿಯರ್ ವಿಜಯ್ ಮೆಹ್ರಾ ಮತ್ತು ಉಪ ಎಂಜಿನಿಯರ್‌ಗಳಾದ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಮತ್ತು ಕಮತಾ ನಾಗೇಂದ್ರ ಎಂಬ ನಾಲ್ವರು ಅಧಿಕಾರಿಗಳಿಗೆ ಡಿಎಂಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದು, ಈ ಸಂಬಂಧ ಅವರ ಉತ್ತರ ಕೇಳಿದೆ ಎಂದು ಅವರು ಹೇಳಿದರು. ಇನ್ನೊಂದೆಡೆ, ಡಿಎಂಸಿ ಕಮಿಷನರ್ ವಿನಯ್ ಕುಮಾರ್ ಪೊಯಂ ರಜೆಯಲ್ಲಿರುವ ಕಾರಣ ಪದಮ್ವಾರ್ ಅವರು ಪ್ರಸ್ತುತ ನಾಗರಿಕ ಮಂಡಳಿಯ ಮುಖ್ಯಸ್ಥರಾಗಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: Dasara 2022: ರಾವಣನಿಗಿದ್ದ ಈ ಒಳ್ಳೆಯ ಗುಣಗಳ ಪರಿಚಯ ನಿಮಗಿದೆಯೇ?
ಇನ್ನು, ಈ ಸಂಬಂದ ಮಾತನಾಡಿದ ಧಮ್ತಾರಿ ಮೇಯರ್ ವಿಜಯ್ ದೇವಾಂಗನ್, ಮೂರ್ತಿ ತಯಾರಿಸುವ ಜವಾಬ್ದಾರಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈಗ ಕಾಮಗಾರಿಯ ಪಾವತಿಯನ್ನು ತಡೆಹಿಡಿಯಲಾಗುವುದು ಎಂದು ಹೇಳಿದರು.
