Asianet Suvarna News Asianet Suvarna News

ನವಜೋತ್‌ ಸಿಂಗ್‌ ಸಿಧು ಹೊಸ ಕ್ಯಾತೆ!

* ಎಜಿ ಬದಲಾವಣೆವರೆಗೂ ಅಧಿಕಾರ ವಹಿಸಿಕೊಳ್ಳಲ್ಲ

* ನವಜೋತ್‌ ಸಿಂಗ್‌ ಸಿಧು ಹೊಸ ಕ್ಯಾತೆ!

* ಹೈಕಮಾಂಡ್‌, ಚನ್ನಿಗೆ ಸಿಧು ಹೊಸ ಷರತ್ತು

* ಎಜಿ ಉತ್ತಮ ಕೆಲಸಗಾರ: ಸಿಎಂ ಚನ್ನಿ ತಿರುಗೇಟು

* ಸಿಧು ಸುಳ್ಳು ಸುದ್ದಿಯ ಸೃಷ್ಟಿಕರ್ತ: ಎಜಿ ಡಿಯೋಲ್‌

Navjot Sidhu Takes Back Resignation, But Serves New Ultimatum To Congress pod
Author
Bangalore, First Published Nov 7, 2021, 7:15 AM IST

ಚಂಡೀಗಢ(ನ.07): ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ (Amarinder Singh) ಜತೆ ಜಗಳ ಆಡಿದ್ದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು, ಈಗ ಹೊಸ ಕ್ಯಾತೆ ತೆಗೆದಿದ್ದಾರೆ.

ಪಂಜಾಬ್‌ನ ಕಾಂಗ್ರೆಸ್‌ ಮುಖ್ಯಸ್ಥ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನೇನೋ ಸಿಧು (Navjot Singh Sidhu) ಶುಕ್ರವಾರ ಹಿಂಪಡೆದಿದ್ದಾರೆ. ಆದರೆ ಪಂಜಾಬ್‌ನ (Punjab) ಅಡ್ವೋಕೇಟ್‌ ಜನರಲ್‌ ಅವರನ್ನು ಬದಲಾಯಿಸಿದ ದಿನ ಹಾಗೂ ಡಿಜಿಪಿಯನ್ನು ಆಯ್ಕೆ ಮಾಡಲು ವಿಶೇಷ ಸಮಿತಿ ರಚನೆ ಮಾಡಿದ ದಿನ ತಾವು ಅಧಿಕಾರ ವಹಿಸಿಕೊಳ್ಳುವುದಾಗಿ ಹೊಸ ಷರತ್ತು ವಿಧಿಸಿದ್ದಾರೆ. ಇದು ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಹಾಗೂ ಹೊಸ ಮುಖ್ಯಮಂತ್ರಿ ಚರಣ್‌ ಜಿತ್‌ ಸಿಂಗ್‌ ಚನ್ನಿ (Charanjit Singh Channi) ಅವರಿಗೆ ಹೊಸ ತಲೆನೋವು ಸೃಷ್ಟಿಸಿದೆ.

‘2015ರಲ್ಲಿ ಸಿಖ್ಖರ ಧರ್ಮ ಗ್ರಂಥಕ್ಕೆ ಅವಮಾನ ಹಾಗೂ ಮಾದಕವಸ್ತು ಪ್ರಕರಣವನ್ನು ಪ್ರತಿನಿಧಿಸಿದ್ದಕ್ಕೆ ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಎ.ಪಿ.ಎಸ್‌. ಡಿಯೋಲ್‌ ಅವರನ್ನು ತಮ್ಮ ಸ್ಥಾನದಿಂದ ತೆಗೆಯಬೇಕು. ಚರಣ್‌ಜಿತ್‌ ಸಿಂಗ್‌ ಚೆನ್ನಿ ನೇತೃತ್ವದ ಸರ್ಕಾರಕ್ಕೆ ಈ ಪ್ರಕರಣಗಲ್ಲಿ ನ್ಯಾಯ ನೀಡಲು ಸಾಧ್ಯವಿಲ್ಲ. ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನೀಡಿದ್ದ ವರದಿಯನ್ನು 50 ದಿನಗಳಾದರೂ ಬಹಿರಂಗ ಪಡಿಸಿಲ್ಲ. ನಿಮಗೆ ಸಾಧ್ಯವಿಲ್ಲದಿದ್ದರೆ ನಾನು ಮತ್ತು ಕಾಂಗ್ರೆಸ್‌ ಪಕ್ಷ ಈ ಕೆಲಸ ಮಾಡುತ್ತೇವೆ’ ಎಂದು ಸಿಧು ಹೇಳಿದ್ದಾರೆ.

ಆದರೆ ಇದಕ್ಕೆ ಶನಿವಾರ ತಿರುಗೇಟು ನೀಡಿದ ಚನ್ನಿ, ‘ಸಿಖ್‌ ಧರ್ಮಗ್ರಂಥಕ್ಕೆ ಅವಮಾನ ಪ್ರಕರಣದಲ್ಲಿ ಡೇರಾ ಸಚ್ಚಾ ಧರ್ಮಗುರು ರಾಮ್‌ರಹೀಮ್‌ ವಿಚಾರಣೆಯಲ್ಲಿ ನಮ್ಮ ಕಾನೂನು ತಂಡ ಸಾಕಷ್ಟುಸಲಹೆ-ಸೂಚನೆ ನೀಡಿದೆ. ಮೇಲಾಗಿ ಡ್ರಗ್ಸ್‌ ಪ್ರಕರಣದಲ್ಲೂ ಸಾಕಷ್ಟುಉತ್ತಮ ಕಾನೂನು ನೆರವು ನೀಡಿದೆ’ ಎಂದಿದ್ದಾರೆ.

ಸಿಧು ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಡ್ವೋಕೇಟ್‌ ಜನರಲ್‌ ಡಿಯೋಲ್‌, ‘ಸಿಧು ರಾಜಕೀಯವಾಗಿ ಗುರುತಿಸಿಕೊಳ್ಳಲು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಪಂಜಾಬ್‌ನ ಸರ್ಕಾರವನ್ನು ಹಾಗೂ ಅಡ್ವೋಕೇಟ್‌ ಜನರಲ್‌ ಕಚೇರಿಯ ದಿಕ್ಕು ತಪ್ಪಿಸುತ್ತಿದ್ದಾರೆ; ಎಂದು ಆರೋಪಿಸಿದ್ದಾರೆ.

ಮತ್ತೆ ಕಾಂಗ್ರೆಸ್‌ ರಣನೀತಿ ರೂಪಿಸ್ತಾರಾ ಪಿಕೆ?

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Poll strategist Prashant Kishor) 2017 ರ ವಿಧಾನಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ (Amarinder Singh) ಅವರ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪಂಜಾಬ್‌ನಲ್ಲಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಇದಾಧ ಬಳಿಕ ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Punjab Chief Minister Charanjit Singh Channi) ಅವರು ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರದ ರಣತಂತ್ರ ಸಿದ್ಧಪಡಿಸಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದರು. ಹೀಗಿರುವಾಗ ರಾಜ್ಯದಲ್ಲಿ ಪ್ರಶಾಂತ್ ಕಿಶೋರ್ ಅವರ ಸಹಾಯ ಕಾಂಗ್ರೆಸ್ ತೆಗೆದುಕೊಳ್ಳುತ್ತದೆಯೇ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪ್ರಶ್ನಿಸಿದಾಗ ಅವರು ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ.

ಹೌದು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಅವರ ಬೆಂಬಲವನ್ನು ತೆಗೆದುಕೊಳ್ಳುತ್ತದೆಯೇ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ, ಹೀಗೆಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ಶುಕ್ರವಾರ ತಿಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷವು ಪ್ರಶಾಂತ್ ಕಿಶೋರ್ ಅವರ ಸೇವೆಯನ್ನು ತೆಗೆದುಕೊಳ್ಳುತ್ತದೆ ಎಂದು ಸಿಎಂ ಚರಂಜಿತ್ ಸಿಂಗ್ ಚನ್ನಿ ಈ ಹಿಂದೆ ಸೂಚಿಸಿದ್ದ ಬೆನ್ನಲ್ಲೇ ಸಮಯದಲ್ಲಿ ಸಿಧು ಇಂತಹುದ್ದೊಂದು ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರ ವಿಡಿಯೋ ಕೂಡಾ ವೈರಲ್ ಆಗಿದ್ದು, ಸಿದ್ದು, 'ಪಕ್ಷ ನಿರ್ಧರಿಸುತ್ತದೆ... ಮುಖ್ಯಮಂತ್ರಿ ಅವರನ್ನು ನೇಮಿಸಲು ಬಯಸಿದರೆ, ಈ ಬಗ್ಗೆ ಅಂತಿಮ ನಿರ್ಧಾರ ಪಕ್ಷದ ಹೈಕಮಾಂಡ್ (ಅವರು) ತೆಗೆದುಕೊಳ್ಳುತ್ತದೆ' ಎಂದು ಹೇಳಿದ್ದಾರೆ. ಈ ವೇಳೆ ಪಕ್ಷಕ್ಕೆ ಅಲ್ಟಿಮೇಟಮ್ ಕೂಡ ನೀಡಿದ್ದಾರೆ.

Follow Us:
Download App:
  • android
  • ios