ಮುಂಬೈ[ಡಿ.13]: 65 ವರ್ಷದ ಅಂಕಲ್ ಒಬ್ಬರು ನಕಲಿ ಡೇಟಿಂಗ್ ಆ್ಯಪ್ ಅಹವಾಸಕ್ಕೆ ಬಿದ್ದು, 73 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ನವೀ ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ನಕಲಿ ಕಾಲ್ ಸೆಂಟರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಮಹಿಳೆ ಹಾಗೂ ಮಂಗಳಮುಖಿಯೂ ಭಾಗಿಯಾಗಿದ್ದರು. ಈ ಮೂವರು ಮೋಸ ಮಾಡಿ 73.5 ಲಕ್ಷ ರೂಪಾಯಿ ಕಸಿದುಕೊಂಡಿದ್ದಾರೆ.

ಏನಿದು ಪ್ರಕರಣ?

ಸೀನಿಯರ್ ಇನ್ಸ್ ಪೆಕ್ಟರ್ ಪರ್ದೀಪ್ ಪ್ರಕರಣ ಸಂಬಂಧ ಮಾಹಿತಿ ನೀಡುತ್ತಾ 2018ರಲ್ಲಿ ಸ್ನೇಹ ಹೆಸರಿನ ಯುವತಿ ಈ 65 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಆಕೆ ಆ ವ್ಯಕ್ತಿಗೆ ಡೇಟಿಂಗ್ ಆ್ಯಪ್ ಸೇವೆ ಕುರಿತು ಮಾಹಿತಿ ನೀಡಿದ್ದಾಳೆ. ಅಲ್ಲದೇ ಬಣ್ಣ ಬಣ್ಣದ ಮಾತುಗಳಿಂದಲೇ ಸದಸ್ಯತ್ವ ಹಾಗೂ ನೋಂದಣಿಗೆಂದು ಬಹುದೊಡ್ಡ ಮೊತ್ತವನ್ನೇ ಪಡೆದುಕೊಂಡಿದ್ದಾರೆ. ಡೇಟಿಂಗ್ ಮಾಡಲು ಯುವತಿ ಆ್ಯಪ್ ನಲ್ಲಿ ತಿಳಿಸಿದ ಸ್ಥಳಕ್ಕೆ ಬರುತ್ತಾಳೆ ಎಂದೂ ನಂಬಿಸಿದ್ದಾರೆ. ಆದರೆ ವ್ಯಕ್ತಿ ಮಾತ್ರ ಅನಾಮಿಕ ಕರೆಯನ್ನು ನಂಬಿ ಕೆಟ್ಟಿದ್ದಾರೆ.

ನನ್ನ ಸದಸ್ಯತ್ವ ಕ್ಯಾನ್ಸಲ್ ಮಾಡಿ

ಆದರೆ ತಾನು ಮೋಸ ಹೋದ ವಿಚಾರ ತಿಳಿದ ವ್ಯಕ್ತಿ ತನ್ನ ಸದಸ್ಯತ್ವ ತೆಗೆದು ಹಾಕುವಂತೆ ಯುವತಿ ಬಳಿ ಕೇಳಿಕೊಂಡಿದ್ದಾನೆ. ಈ ಅವಕಾಶವನ್ನೇ ಬಳಸಿಕೊಂಡ ಯುವತಿ ಸದಸ್ಯತ್ವ ಕ್ಯಾನ್ಸಲ್ ಮಾಡಲು ಮತ್ತೆ ಹಣದ ಬೇಡಿಕೆ ಇಟ್ಟಿದ್ದಾಳೆ. ಅಲ್ಲದೇ ಹೆಣ್ಮಕ್ಕಳನ್ನು ಕಳುಹಿಸಿಕೊಡುವಂತೆ ಡಿಮ್ಯಾಂಡ್ ಮಾಡುತ್ತಾರೆ ಎಂದು ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಸಿದ ಯುವತಿ, ನಕಲಿ ಲೀಗಲ್ ನೋಟಿಸ್ ಕೂಡಾ ಕಳುಹಿಸಿದ್ದಾಳೆ. 

ಭಯಬಿದ್ದ ಅಂಕಲ್

ಯುವತಿಯ ಮಾತುಗಳನ್ನು ಕೇಳಿ ಭಯಬಿದ್ದ ಅಂಕಲ್, ಅವರ ಬೇಡಿಕೆಯಂತೆ ವಿವಿಧ ಬ್ಯಾಂಕ್ ಅಕೌಂಟ್ ಗಳಿಗೆ ಒಟ್ಟು 73.5 ಲಕ್ಷ ಮೊತ್ತ ಡೆಪಾಸಿಟ್ ಮಾಡಿದ್ದಾರೆ. ಆದರೆ ಯುವತಿಯ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಅನುಮಾನಗೊಂಡ ವ್ಯಕ್ತಿ ಖಾರ್ಗರ್ ಪೊಲೀಸ್ ಠಾಣಡಗೆ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು ಸ್ನೇಹಾ, ಅರ್ನಬ್ ದಾಸ್ ಹಾಗೂ ಪ್ರಬೀರ್ ಸಾಹಾರನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಈ ಸಂಬಂಧ ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.