ನವಣೆ, ಸಾಮೆ, ಸಜ್ಜು; ಕರ್ನಾಟಕ ಸಿರಿ ಧಾನ್ಯ ಹೆಸರು ಸಾಲಾಗಿ ಹೇಳಿದ ಪ್ರಧಾನಿ ಮೋದಿ!
ತುಮಕೂರಿನ ಗುಬ್ಬಿ ತಾಲೂಕಿನಲ್ಲಿನ ಹೆಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳ ಕುರಿತು ಹೇಳಿದ್ದಾರೆ. ಸಾಲು ಸಾಲಾಗಿ ಕರ್ನಾಟಕದ ಸಿರಿಧಾನ್ಯಗಳ ಹೆಸರು ಹೇಳಿದ ಮೋದಿ, ರಾಗಿ ಮುದ್ದಿ, ರಾಗಿ ರೋಟಿ ಮರೆಯಲು ಸಾಧ್ಯವೇ ಎಂದಿದ್ದಾರೆ. ಮೋದಿ ಸಿರಿಧಾನ್ಯ ಹಾಗೂ ರಾಗಿ ಕುರಿತು ಮಾತನಾಡಿದ ವಿವರ ಇಲ್ಲಿದೆ.
ಗುಬ್ಬಿ(ಫೆ.06): ಶ್ರೀ ಅನ್ನ ರಾಗಿ, ಶ್ರೀ ಅನ್ನ ನವಣೆ, ಶ್ರೀ ಅನ್ನ ಸಾಮೆ, ಶ್ರೀ ಅನ್ನ ಹರ್ಕಾ, ಶ್ರೀ ಅನ್ನ ಕೋರ್ಲೆ, ಶ್ರೀ ಅನ್ನ ಉದುಲು, ಶ್ರೀ ಅನ್ನ ಬರಗೂ, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನ ಪಿಡಿಜೋಳ. ಹೀಗೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸಿರಿ ಧಾನ್ಯಗಳ ಹೆಸರನ್ನು ಸಾಲು ಸಾಲಾಗಿ ಹೇಳಿ ಮೋಡಿ ಮಾಡಿದ್ದಾರೆ. ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್‌ನಲ್ಲಿ ಕರ್ನಾಟಕದ ಸಿರಿಧಾನ್ಯಗಳಿಗೆ ನೀಡಿರುವ ಅನುದಾನ ಹಾಗೂ ಸಿರಿಧಾನ್ಯವನ್ನು ಇದೀಗ ಸರ್ವಶ್ರೇಷ್ಠ ಶ್ರೀ ಅನ್ನ ಎಂದು ಹೆಸರಿಸಲಾಗಿದೆ ಎಂದರು.
ಕರ್ನಾಟಕದ ಜನರು ಸಿರಿಧಾನ್ಯಗಳ ಮಹತ್ವವನ್ನು ಅರಿತಿದ್ದಾರೆ. ಶ್ರೇಷ್ಠ ಧಾನ್ಯಗಳನ್ನು ಕರ್ನಾಟಕದಲ್ಲಿ ಹಿಂದಿನಿಂದಲೂ ಸಿರಿಧಾನ್ಯ ಎಂದು ಕರೆಯುತ್ತಾರೆ. ಕರ್ನಾಟಕ ಜನರ ಈ ಭಾವನೆಯನ್ನೂ ದೇಶ ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತಿದೆ. ಇದೀಗ ಸಿರಿಧಾನ್ಯವನ್ನು ಶ್ರೀ ಅನ್ನ ಎಂಬ ಉನ್ನತ ಪಟ್ಟ ನೀಡಲಾಗಿದೆ. ಶ್ರೀ ಅನ್ನ ಎಂದರೆ ಧಾನ್ಯದಲ್ಲಿ ಸರ್ವಶ್ರೇಷ್ಠ ಎಂದರ್ಥ. ಕರ್ನಾಟಕದಲ್ಲಿ ಶ್ರೀ ಅನ್ನ ರಾಗಿ, ಶ್ರೀ ಅನ್ನ ನವಣೆ, ಶ್ರೀ ಅನ್ನ ಸಾಮೆ, ಶ್ರೀ ಅನ್ನ ಹರ್ಕಾ, ಶ್ರೀ ಅನ್ನ ಕೋರ್ಲೆ, ಶ್ರೀ ಅನ್ನ ಉದುಲು, ಶ್ರೀ ಅನ್ನ ಬರಗೂ, ಶ್ರೀ ಅನ್ನ ಸಜ್ಜೆ, ಶ್ರೀ ಅನ್ನ ಪಿಡಿಜೋಳ ಎಂದು ಹಲವು ಹೆಸರಿನಿಂದ ಕರೆಯಲ್ಪಡುತ್ತದೆ ಎಂದು ಮೋದಿ ಸಾಲು ಸಾಲಾಗಿ ಕರ್ನಾಟಕದ ಸಿರಿಧಾನ್ಯಗಳನ್ನು ಹೆಸರು ಹೇಳಿದರು. ಈ ವೇಳೆ ನೆರೆದಿದ್ದ ಜನರ ಹರ್ಷೋದ್ಘಾರ ಜೋರಾಯಿತು.
HAL ಹೆಸರಿನಲ್ಲಿ ಕುಟುಕಿದವರಿಗೆ ಗುಬ್ಬಿ ಹೆಲಿಕಾಪ್ಟರ್ ಘಟಕ ಉತ್ತರ, ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!
ಸಿರಿಧಾನ್ಯದ ಹೆಸರು ಹೇಳಿದ ಬೆನ್ನಲ್ಲೇ ಪ್ರಧಾನಿ ಮೋದಿ, ಕರ್ನಾಟಕದ ರಾಗಿ ಮುದ್ದಿ ಹಾಗೂ ರಾಗಿ ರೊಟ್ಟಿಯ ಸ್ವಾದವನ್ನು ಯಾರು ಮರೆಯಲು ಸಾಧ್ಯ? ಈ ಬಾರಿಯ ಬಜೆಟ್‌ನಲ್ಲಿ ಶ್ರೀ ಅನ್ನದ ಉತ್ಪಾದನೆಗೆ ಗರಿಷ್ಠ ಬಲ ನೀಡಲಾಗಿದೆ. ಇದರ ಲಾಭ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಿಗಲಿದೆ. ಸಣ್ಣ ಸಣ್ಣ ರೈತರಿಗೂ ಇದರಿಂದ ಅತೀ ಹೆಚ್ಚಿನ ಲಾಭವಾಗಲಿದೆ ಎಂದು ಮೋದಿ ಹೇಳಿದರು.
ಮೋದಿ ರಾಗಿ ಮುದ್ದಿ ಹಾಗೂ ರಾಗಿ ರೊಟ್ಟಿ ಸ್ವಾದ ಕುರಿತು ಹೇಳುತ್ತಿದ್ದಂತೆ ಸಮಾವೇಶದಲ್ಲಿ ಹರ್ಷೋದ್ಘಾರ ಹೆಚ್ಚಾಯಿತು. ಮೋದಿ ಮೋದಿ ಎಂದು ಜಯಘೋಷಣೆಗಳನ್ನು ಕೂಗಿದರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದ್ದರು. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ನಗರದ ಆತ್ಮೀಯ ನಾಗರೀಕ ಬಂಧು ಭಗಿನಿಯರೇ ನಿಮಗೆಲ್ಲ ನನ್ನ ನಮಸ್ಕಾರಗಳು ಎಂದು ಮೋದಿ ಹೇಳಿದರು. ಇನ್ನು ಬಜೆಟ್ ಕುರಿತ ಮಾತನಾಡುವ ವೇಳೆ ಎಲ್ಲಾ ವರ್ಗಕ್ಕೆ ಈ ಬಾರಿಯ ಬಜೆಟ್ ನೆರವಾಗಲಿದೆ. ಇದೇ ವೇಳೆ ಆಧಾರ ಮತ್ತು ಆದಾಯ ಎಂಬ ಎರಡು ಕನ್ನಡ ಪದಗಳನ್ನು ಉಲ್ಲೇಖಿಸಿ ಬಜೆಟ್ ವಿವರಿಸಿದ್ದರು.
ಗುಬ್ಬಿ HAL ಘಟಕ ಪ್ರಧಾನಿ ಮೋದಿ ಅಡಗಲ್ಲು ಹಾಕಿ ಮೋದಿ ಉದ್ಘಾಟನೆ, ಇದು ಪರಿವರ್ತನೆ ಎಂದ ಸಿಎಂ ಬೊಮ್ಮಯಿ!
ತುಮಕೂರಿನಲ್ಲಿ ಪ್ರಧಾನಿ ಮೋದಿ ಹೆಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಉದ್ಘಾಟನೆ ಜೊತೆಗೆ ತುಮಕೂರು ಇಂಡಸ್ಟ್ರೀಯ ಟೌನ್‌ಶಿಪ್ ಯೋಜನೆಗೆ ಶಿಲನ್ಯಾಸ ಮಾಡಲಾಗಿದೆ. ಇದರ ಜೊತೆಗೆ ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್ ಜೀವನ್ ಅಭಿಯಾನದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಾಗಿದೆ. ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ 115 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಗುಬ್ಬಿ ಹೆಚ್‌ಎಎಲ್ ಘಟಕ ಮೋದಿ ಶಿಲನ್ಯಾಸ, ಮೋದಿ ಉದ್ಘಾಟನೆ
2016ರಲ್ಲಿ ಪ್ರಧಾನಿ ನರೇಂದ್ರ ಮೋಧಿಯವರು ಭೂಮಿಪೂಜೆ ಸಲ್ಲಿಸಿದ್ದರು. ಇದೀಗ ಮೋದಿ ಈ ಘಟಕವನ್ನು ಉದ್ಘಾಟನೆ ಮಾಡಿದ್ದಾರೆ. ಹೆಚ್ ಎಎಲ್ ತುಮಕೂರು ಉತ್ಫಾದನಾ ಘಟಕದಲ್ಲಿ 3ರಿಂದ 15 ಟನ್ ಸಾಮಥ್ರ್ಯದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್ ಉತ್ಪಾದಿಸುವ ಗುರಿ ಹೊಂದಿದೆ. ಈ ವಲಯದಲ್ಲಿ 6000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. 2,750 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಇಷ್ಟೇ ಅಲ್ಲ, ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.