ನವದೆಹಲಿ, (ಏ.17) : ಸಂಕಷ್ಟಕ್ಕೊಂದು ಸಹಾಯ ಹುಡುಕಿ..! ಮಾನವೀಯತೆಯ ಒಂದು ಹೆಜ್ಜೆಯಿಡಿ..! ಇಂಥದೊಂದು ಸಾಹಸಕ್ಕೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯೂತ್ ಘಟಕ ಮುಂದಾಗಿದೆ. ಕೊರೊನಾ ಸೋಂಕಿನ 2ನೇ ಅಲೆಗೆ ಇಡೀ ದೇಶವೇ ತತ್ತರಿಸುತ್ತಿದೆ. ಆರೋಗ್ಯದ ಸವಲತ್ತುಗಳಾದ ಆಸ್ಪತ್ರೆ, ಇಂಜೆಕ್ಷನ್, ಪ್ಲಾಸ್ಮಾ ಅಂಥ ಪರದಾಡುವಂತ ಸ್ಥಿತಿ ನಿರ್ಮಾಣವಾಗಿರುವುದು ಸುಳ್ಳಲ್ಲ.

ನಿತ್ಯ ಎರಡೂಕಾಲು ಲಕ್ಷ ಕೊರೊನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕಿಂತ ಆತಂಕದ ವಿಷಯ ಅಂದ್ರೆ ಒಂದೂಕಾಲು ಸಾವಿರ ಮಂದಿ ಸಾವಿನ ಕದ ತಟ್ಟಿದ್ದಾರೆ. ಇದರಲ್ಲಿ ಹಲವರಿಗೆ ಆಸ್ಪತ್ರೆಗೆ ಆಡ್ಮಿಷನ್ ಸಿಕ್ಕಿಲ್ಲ, ಪ್ಲಾಸ್ಮಾ ಸಿಕ್ಕಿಲ್ಲ, ಆಸ್ಪತ್ರೆಗೆ ಹೋಗಲು ಆಂಬ್ಯೂಲೆನ್ಸ್ ಸಿಕ್ಕಿಲ್ಲ ಎನ್ನುವವರು ಹಲವರು. ಇದಕ್ಕಾಗಿ ಯೂತ್ ಕಾಂಗ್ರೆಸ್ ಘಟಕ ಸೋಷಿಯಲ್ ಮಿಡಿಯಾ ಮೂಲಕ ಒಂದು ಕಂಟ್ರೋಲ್ ರೂಂ ಸ್ಥಾಪಿಸಿಕೊಂಡಿದೆ.

ಕೊರೋನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ! 

ಕಂಟ್ರೋಲ್ ರೂಮ್ :
ಟ್ವೀಟರ್‌ನಲ್ಲಿ ಎಸ್‌ಓಎಸ್‌ಐವೈಸಿ ಅಂಥ ಬಳಸಿ ನೇರವಾಗಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಘಟಕವನ್ನು ರೀಚ್ ಆಗಬಹುದು. ರೆಮಿಡಿಸಿಯರಂ ಎಂಜೆಕ್ಷನ್ ತೊಂದರೆ ಅನುಭವಿಸುತ್ತಿರುವವರು, ಬೆಡ್ ಸಿಕ್ಕಿಲ್ಲ, ಆಸ್ಪತ್ರೆಗಳಲ್ಲಿ ಆಡ್ಮಿಷನ್ ಸಿಗ್ತಾ ಇಲ್ಲ ಅನ್ನೋರು ಸಂಪರ್ಕ ಮಾಡಬಹುದು. ಕಾಂಗ್ರೆಸ್ ಯುವ ಘಟಕ ತಮ್ಮ ಕಾರ್ಯಕರ್ತರು, ಕಾಂಗ್ರೆಸ್ ಫಾಲೋಯರ್ಸ್, ಕಾಂಗ್ರೆಸ್ ಬೆಂಬಲಿಗರ ಮೂಲಕ ನೊಂದ ರೋಗಿಯನ್ನು ಸಂಪರ್ಕಿಸುವ ಕೆಲಸ ಮಾಡಲಾಗುತ್ತಿದೆ. ಈ ಮೂಲಕ ಅಗತ್ಯವಾದ ಸೇವೆಯನ್ನು ತಲುಪಿಸುವ ಕೆಲಸ ಮಾಡುತ್ತದೆ. 

ದೆಹಲಿಯ ಯೂತ್ ಕಾಂಗ್ರೆಸ್ ಹೆಡ್‌ಕ್ವಾರ‍್ಸ್ ನಲ್ಲಿ ವಿಶೇಷ ಕಂಟ್ರೋಲ್ ರೂಮ್ ಸ್ಥಾಪಿಸಿದ್ದು, ಇಲ್ಲಿ ನೂರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಟ್ವೀಟರ್ ಮೂಲಕ ಸಂಪರ್ಕಿಸುವುದು, ಪೀಲ್ಡ್ನಲ್ಲಿರುವ ಕಾರ್ಯಕರ್ತರು ರೋಗಿಗಳಿಗೆ ಸೇವೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

15 ಸಾವಿರ ಮಂದಿಗೆ ಸ್ಪಂದನೆ
ಈ ಕುರಿತು ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಬಿ.ವಿ.ಶ್ರೀನಿವಾಸ್, ಇದು ಯೂತ್ ಕಾಂಗ್ರೆಸ್ ಪರಂಪರೆ. ಎಲ್ಲಾ ಕಷ್ಟದ ಸಂದರ್ಭಗಳಲ್ಲೂ ನೊಂದವರ ಜೊತೆ ನಿಲ್ಲುವುದು ನಮ್ಮ ಆದ್ಯತೆ. ಮೊದಲನೇ ಅಲೆಯ ಸಂದರ್ಭದಲ್ಲಿ ಊರುಗಳಿಗೆ ಗುಳೆ ಹೊರಟ ಕಾರ್ಮಿಕರ ಸೇವೆಗೆ ಕಂಕಣಕಟ್ಟಿ ನಿಲ್ಲಲಾಯಿತು. ೨ನೇ ಅಲೆಯ ಶುರುವಾದ ಕೂಡಲೇ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಅಖಾಡಕ್ಕೆ ಇಳಿದು ಕೊರೊನಾ ರೋಗಿಗಳಿಗೆ ಸ್ಪಂದಿಸುವಂತೆ ಸೂಚಿಸಿದರು.

ಅದರಂತೆ ಟ್ವೀಟರ್ ಖಾತೆ ತೆರೆದು ಈ ಮೂಲಕ ರೋಗಿಗಳಿಗೆ ಸ್ಪಂದಿಸುವ ಕೆಲಸ ಶುರು ಮಾಡಲಾಯಿತು. ಈತನಕ ಸುಮಾರು ೪೫ ಸಾವಿರ ಮಂದಿಯಿಂದ ರಿಕ್ವೆಸ್ಟ್ ಗಳು ಬಂದಿವೆ. ಇದರಲ್ಲಿ ಹೆಚ್ಚು ಕಡಿಮೆ 45 ಸಾವಿರ ಮಂದಿಗೆ ಮೆಡಿಸನ್, ಆಸ್ಪತೆಗಳಲ್ಲಿ ಬೆಡ್, ಆಂಬ್ಯೂಲೆನ್ಸ್ ಅಂಥ ಸ್ಪಂದಿಸಿ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಗಿದೆ. ಇದರ ಜೊತೆಗೆ ಪ್ಲಾಸ್ಮಾದ ಅವಶ್ಯಕತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೆಂಗಳೂರಿAದ ರಾಹುಲ್ ಎಂಬ ಯುವಕ ದೆಹಲಿಗೆ ಬಂದು ಪ್ಲಾಸ್ಮಾ ದಾನ ಮಾಡಿದ ಉದಾಹರಣೆ ಇದೆ. ಈ ವಿಚಾರವಾಗಿ ಸುಮಾರು 10 ಸಾವಿರ ಮಂದಿಯನ್ನು ನಾವು ಸಂಪರ್ಕಿಸಿದೆವು, ಇದರಲ್ಲಿ ಕೊರೊನಾ ಗುಣಮುಖರಾದ ಆರು ಸಾವಿರ ಮಂದಿ ನೇರವಾಗಿ ನಮ್ಮ ಮನವಿಯನ್ನು ತಿರಸ್ಕರಿಸಿದರು. ಹೆಚ್ಚು ಕಡಿಮೆ ೩೦೦೦ ಸಾವಿರ ಮಂದಿ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಅಗತ್ಯವಿದ್ದ ಕಡೆ ಅವರ ಸೇವೆಯನ್ನು ಬಳಸಿಕೊಳ್ಳುತ್ತಿದ್ದೇವೆ ಎಂದರು.

ರಾಹುಲ್ ಗಾಂಧಿಯವರ ಸೂಚನೆಯಂತೆ, ರಾಜಕೀಯ ಬದಿಗಿಟ್ಟು ಮಾನವೀಯತೆ ಮತ್ತು ಸೇವೆ ಎರಡೇ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಅಖಾಡಕ್ಕೆ ಇಳಿಯಲಾಗಿದೆ ಎಂದರು.