Asianet Suvarna News Asianet Suvarna News

ಚಂದ್ರಯಾನ-3 ಯಶಸ್ವಿಯಾದ ಆ.23 ಇನ್ನುಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನ: ಪ್ರಧಾನಿ ನರೇಂದ್ರ ಮೋದಿ ಘೋಷಣೆ

ದೇಶದಲ್ಲಿ ಚಂದ್ರಯಾನ-3 ಯಶಸ್ವಿಯಾದ ದಿನ(ಆ.23)ವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದರು.

National Space Day on August 23 Prime Minister Narendra Modi announced sat
Author
First Published Aug 26, 2023, 8:34 AM IST

ಬೆಂಗಳೂರು (ಆ.23): ದೇಶದಲ್ಲಿ ಚಂದ್ರಯಾನ-3 ಯಶಸ್ವಿಯಾದ ದಿನ(ಆ.23)ವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವಾಗಿ ಆಚರಣೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದರು.

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಚಂದ್ರಯಾನ ಯಶಸ್ವಿಗೊಳಿಸಿದ ವಿಜ್ಞಾನಿಗಳೊಂದಿಗೆ ಮಾತನಾಡಿದ ಅವರು, ದೇಶದ ಎಲ್ಲ ಜನರೂ ಹೆಮ್ಮೆ ಪಡುವಂತಹ ಘಟನೆಯಾದ ಚಂದ್ರಯಾನ-3 ಯಶಸ್ವಿಯಾದ ದಿನವನ್ನು ಬಾಹ್ಯಾಕಾಶ ದಿನವೆಂದು ಘೋಷಣೆ ಮಾಡಲಾಗುತ್ತಿದೆ. ಪ್ರಧಾನಿಯಾದ ನಂತರ ನಾನು ಬಾಹ್ಯಾಕಾಶ ವಿಜ್ಞಾನಿಗಳೊಂದಿಗೆ ವರ್ಕ್‌ಶಾಪ್‌ ಮಾಡಿದ್ದೇನೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಅಂತರಿಕ್ಷದ ಸಂಶೋಧನೆಗಳು ನೆರವಿಗೆ ಬರುತ್ತವೆ ಎನ್ನುವುದನ್ನು ನಾನು ಮನಗಂಡಿದ್ದೆನು. ನಾವು ಶೌಚಾಲಯ ಹಾಗೂ ಮನೆ ಕಟ್ಟುವ ಕಾರ್ಯಕ್ಕೆ ಬಾಹ್ಯಾಕಾಶದ ತಂತ್ರಜ್ಞಾನದ ಕೊಡುಗೆಯೂ ಅಗತ್ಯವಾಗಿದೆ. ಇನ್ನು ದೇಶದ ಅಮೃತ ಮಹೋತ್ಸವದ ವೇಳೆ ಘೋಷಣೆ ಮಾಡಲಾದ ಎಲ್ಲ ಅಮೃತ ನಗರಗಳಲ್ಲಿ ಹಾಗೂ ಅಮೃತ ಜಿಲ್ಲೆಗಳಲ್ಲಿನ ಕೆರೆಗಳನ್ನೂ ಕೂಡ ಅಮೃತ ಸರೋವರಗಳನ್ನಾಗಿ ಮಾಡಲಾಗುವುದು. ಇನ್ನು ಎಲ್ಲ ಕೆರೆಗಳನ್ನು ಕೂಡ ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ಎಣಿಕೆ ಮಾಡಲಾಗುವುದು ಎಂದರು.

PM Modi Isro Visit: ವಿಕ್ರಮ್‌ ಲ್ಯಾಂಡರ್‌ ಇಳಿದ ಸ್ಥಳ, ಇನ್ನು ಶಿವಶಕ್ತಿ ಸ್ಥಳ!

ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಲ್ಯಾಂಡಿಂಗ್‌ ಆದ ಸ್ಥಳವನ್ನು ಪ್ರಧಾನಿ ನರೇಂದ್ರ ಮೋದಿ ಶಿವಶಕ್ತಿ ಸ್ಥಳ ಎಂದು ನಾಮಕರಣ ಮಾಡಿದ್ದಾರೆ. ಇಸ್ರೋ ವಿಜ್ಞಾನಿಗಳ ಎದುರು ಮಾಡಿದ ಭಾಷಣದಲ್ಲಿ ಇನ್ನು ಮುಂದೆ ಆ ಸ್ಥಳವನ್ನು ಶಿವಶಕ್ತಿ ಸ್ಥಳ ಎಂದು ತಿಳಿಸಿದ್ದಾರೆ. ಇನ್ನು ಚಂದ್ರಯಾನ-2 ಬಿದ್ದ ಸ್ಥಳವನ್ನು 'ತಿರಂಗಾ' ಎನ್ನುವ ಹೆಸರಿನಿಂದ ಕರೆಯಲಾಗುವುದು ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದರು. 21ನೇ ಶತಮಾನದಲ್ಲಿ ಇದೇ ಭಾರತ, ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಸಮಾಧಾನ ತರಲಿದೆ. ಲ್ಯಾಂಡಿಗ್‌ ಖಚಿತವಾದ ಬಳಿಕ, ಇಸ್ರೋ ಕೇಂದ್ರ ಹಾಗೂ ಇಡೀ ದೇಶ ಸಂಭ್ರಮ ಪಟ್ಟಿತಲ್ಲ ಅದನ್ನು ಯಾರು ಮರೆಯುತ್ತಾರೆ. ಆ ಕ್ಷಣ ಇಂದು ಇತಿಹಾಸದಲ್ಲಿ ಅಮರವಾಗಲಿದೆ. ಈ ಕ್ಷಣ ಇಡೀ ಶತಮಾನದ ಪ್ರೇರಣಾದಾಯಿ ಕ್ಷಣಗಳಲ್ಲಿ ಒಂದಾಗಿರಲಿದೆ. ಇಲ್ಲಿಂದ ಸಂದೇಶವನ್ನು ಚಂದ್ರನಿಗೆ ಕಳಿಸುತ್ತಿದ್ದೀರಿ. ಅಲ್ಲಿಂದ ಸಂದೇಶ ಬರುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ನಿಮ್ಮಿಂದ. ನಮ್ಮ ದೇಶದ ವಿಜ್ಞಾನಿಗಳಿಂದ ಇದು ಸಾಧ್ಯವಾಗಿದೆ. ನಾನು ನಿಮಗೆ ಎಷ್ಟು ಶ್ಲಾಘನೆ ಮಾಡಿದರೂ ಅದು ಬಹಳ ಕಡಿಮೆ ಎಂದರು.

PM Modi Isro Visit: ಇಸ್ರೋ ಕಚೇರಿ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಜಾಲಹಳ್ಳಿ ಕ್ರಾಸ್‌ನಿಂದ ರೋಡ್‌ ಶೋ!

  • ಇಸ್ರೋ ಕಚೇರಿಯಲ್ಲಿ ಪ್ರಧಾನಿ ಮೋದಿ ಪ್ರಮುಖ 3 ಘೋಷಣೆಗಳು: 
  • ಚಂದ್ರಯಾನ 3 ತಲುಪಿದ ಜಾಗ-  'ಶಿವಶಕ್ತಿ ಪಾಯಿಂಟ್' (Shivashakthi point)
  • ಚಂದ್ರಯಾನ 3 ಯಶಸ್ವಿಯಾದ ದಿನ ಆ.23- ರಾಷ್ಟ್ರೀಯ ಬಾಹ್ಯಾಕಾಶ ದಿನ (National space day)
  • ಚಂದ್ರಯಾನ-2 ರೋವರ್‌ ಬಿದ್ದ ಜಾಗ- ತಿರಂಗಾ ಪಾಯಿಂಟ್‌ (Thiranga Point) 
Follow Us:
Download App:
  • android
  • ios