ಫ್ರಂಟ್ ವಿಂಡ್‌ಶೀಲ್ಡ್‌ಗೆ ಫಾಸ್ಟ್ಯಾಗ್ ಅಳವಡಿಸದಿದ್ದರೆ ಟೋಲ್ ಶುಲ್ಕ ದುಪ್ಪಟ್ಟು ವಸೂಲಿ
ವಾಹನದ ಮುಂದಿನ ಗಾಜಿನ ಮೇಲೆ (ಫ್ರಂಟ್ ವಿಂಡ್‌ಶೀಲ್ಡ್) ಫಾಸ್ಟ್ಯಾಗ್ ಅಳವಡಿಸದೇ ಬೇರೆ ಕಡೆ ಅಳವಡಿಸಿದ್ದರೆ, ಅಂಥವರಿಂದ 2 ಪಟ್ಟು ಅಧಿಕ ಟೋಲ್ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ.
ನವದೆಹಲಿ: ವಾಹನದ ಮುಂದಿನ ಗಾಜಿನ ಮೇಲೆ (ಫ್ರಂಟ್ ವಿಂಡ್‌ಶೀಲ್ಡ್) ಫಾಸ್ಟ್ಯಾಗ್ ಅಳವಡಿಸದೇ ಬೇರೆ ಕಡೆ ಅಳವಡಿಸಿದ್ದರೆ, ಅಂಥವರಿಂದ 2 ಪಟ್ಟು ಅಧಿಕ ಟೋಲ್ ಸಂಗ್ರಹಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಬೇರೆ ಗಾಜುಗಳ ಮೇಲೆ ಫಾಸ್ಟಾಗ್ ಅಂಟಿಸಿದ್ದರೆ ಅದರ ಸ್ಕ್ಯಾನಿಂಗ್ ತಡವಾಗುವ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತದೆ. ಇದನ್ನು ತಡೆಯಲು ಶುಲ್ಕ ಸಂಗ್ರಹಿಸುವ ಸಂಸ್ಥೆಗಳಿಗೆ ದ್ವಿಗುಣ ಟೋಲ್ ಶುಲ್ಕ ಸಂಗ್ರಹಿಸುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಥಾಮಸ್ ಎಂಬಾತನಿಂದ ತಿರುಪತಿ ಲಡ್ಡು ತಯಾರಿಕೆ ವರದಿ ಸುಳ್ಳು: ಟಿಟಿಡಿ
ತಿರುಮಲ: 'ತಿರುಮಲದಲ್ಲಿ ಥಾಮಸ್ ಎಂಬ ಅನ್ಯ ಧರ್ಮದ ವ್ಯಕ್ತಿ ಲಡ್ಡು ಪ್ರಸಾದ ತಯಾರಿಸುವ ಹೊಣೆ ಹೊತ್ತಿದ್ದಾನೆ ಹಾಗೂ ಅವುಗಳು ಈಗ ತಾಜಾ ಸ್ಥಿತಿಯಲ್ಲಿ ಸಿಗುತ್ತಿಲ್ಲ' ಎಂಬ ಯೂಟ್ಯೂಬ್ ಚಾನೆಲ್ ಒಂದರ ವರದಿಯನ್ನು ತಿರುಮಲ ತಿರುಪತಿ ದೇವಸ್ಥಾನ ಸಮಿತಿ (ಟಿಟಿಡಿ) ತಳ್ಳಿ ಹಾಕಿದೆ ಹಾಗೂ ಈ ಸುಳ್ಳು ವರದಿ ವಿರುದ್ಧ ಕಾನೂನು ಕ್ರಮದ ಘೋಷಣೆ ಮಾಡಿದೆ. ಗುರುವಾರ ಸ್ಪಷ್ಟನೆ ನೀಡಿರುವ ಟಿಡಿಟಿ, 'ಲಡ್ಡುವನ್ನು ಹಲವಾರು ಶತಮಾನಗಳಿಂದ ಶ್ರೀ ವೈಷ್ಣವ ಬ್ರಾಹ್ಮಣರು ತಯಾರಿಸುತ್ತಿದ್ದಾರೆ. ಪ್ರಸ್ತುತ 980 ಶ್ರೀವೈಷ್ಣವರು ವಿವಿಧ ಪದಾರ್ಥ ತಂದು ತಾಜಾ ಲಡ್ಡು ತಯಾರಿಸುತ್ತಾರೆ ಎಂದಿದೆ.
ಸ್ಯಾಟ್‌ಲೈಟ್ ಆಧಾರಿತ ಟೋಲ್ ಸಂಗ್ರಹ ಹೇಗೆ ಕೆಲಸ ಮಾಡುತ್ತೆ? ಇದರ ಲಾಭಗಳೇನು?
ತೆಲಂಗಾಣ ರೈತರ : 2 ಲಕ್ಷ ರೂವರೆಗಿನ ಸಾಲ ಮನ್ನಾ
ಹೈದರಾಬಾದ್: 70 ಲಕ್ಷ ಕೃಷಿಕರ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡುವ ಕಾರ್ಯಕ್ರಮಕ್ಕೆ ತೆಲಂಗಾಣ ಸರ್ಕಾರ ಗುರುವಾರ ಚಾಲನೆ ನೀಡಿದೆ. ಇದರ ಅನ್ವಯ ಗುರುವಾರ ಸಂಜೆ 4ರ ಹೊತ್ತಿಗೆ ರೈತರ ಖಾತೆಗಳಿಗೆ 1 ಲಕ್ಷ ರು. ಜಮೆಯಾಗಿದೆ. ಜೂನ್ ತಿಂಗಳ ಕೊನೆಯಲ್ಲಿ 1.5 ಲಕ್ಷ ರು.ವರೆಗಿನ ಕೃಷಿ ಸಾಲ ಮನ್ನಾ ಆಗಲಿದ್ದು, ಆ.15ರ ಒಳಗಾಗಿ 2 ಲಕ್ಷ ರು.ವರೆಗಿನ ಸಾಲ ಮನ್ನಾ ಮಾಡಲಾ ಗುವುದು ಎಂದು ಸಿಎಂ ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ನೆಲ ಬಾಂಬ್ ಸ್ಫೋಟ: ಇಬ್ಬರು ಯೋಧರು ಹುತಾತ್ಮ
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ನಕ್ಸಲರು ಹುದುಗಿಸಿಟ್ಟಿದ್ದ ನೆಲಬಾಂಬ್ ಸ್ಪೋಟದಿಂದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ.
ಒಂದು ವಾಹನ ಒಂದು ಫಾಸ್ಟ್ಯಾಗ್ ಜಾರಿ: ಹಲವು ವಾಹನಕ್ಕೆ ಒಂದೇ ಫಾಸ್ಟ್ಯಾಗ್ ಇನ್ನು ಅಸಾಧ್ಯ
ಅಮೆರಿಕ ಅಧ್ಯಕ್ಷ ಬೈಡನ್‌ಗೆ ಕೋವಿಡ್-19 ಸೋಂಕು
ಮಿಲ್ವಾಕೀ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಅಬ್ಬರದ ಪ್ರಚಾರ ನಡೆಯುತ್ತಿರುವ ಹೊತ್ತಲ್ಲಿಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಬೈಡನ್‌ಗೆ ಕೊರೊನಾದ ಸಣ್ಣ ಪ್ರಮಾಣದ ಲಕ್ಷಣಗಳು ಇದ್ದು, ಆರೋಗ್ಯವಾಗಿದ್ದಾರೆಂದು ಶ್ವೇತ ಭವನ ತಿಳಿಸಿದೆ. ಲಾಸ್ ವೇಗಸ್‌ನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ, ಅಸ್ವಸ್ಥರಾದ ಕಾರಣ ಪರೀಕ್ಷೆ ಮಾಡಿಸಿದ ವೇಳೆ ಕೋವಿಡ್ ಧೃಢವಾಗಿದೆ. ಬಳಿಕ ಅವರು ಡೆಲಾವೇರ್‌ಗೆ ಹಿಂದಿರುಗಲಿದ್ದು, ಅಲ್ಲಿಯೇ ಐಸೋಲೆಟ್ ಆಗಲಿದ್ದಾರೆ. ಬೈಡನ್ ಲಸಿಕೆ ಮತ್ತು ಬೂಸ್ಟರ್ ಡೋಸ್ ಪಡೆದಿದ್ದರು. ಆದರೂ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೈಡೆನ್ ಸ್ಪರ್ಧೆಗೆ ಒಬಾಮ, ಪಲೋಸಿ ವಿರೋಧ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಅಭ್ಯರ್ಥಿಯಾಗಿ ಹಾಲಿ ಅಧ್ಯಕ್ಷ ಜೋ ಬೈಡೆನ್ ಮತ್ತೆ ಸ್ಪರ್ಧೆಗೆ ಇಳಿಯುವುದಕ್ಕೆ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಸ್ಪೀಕರ್ ನ್ಯಾನ್ಸಿ ಪಲೋಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಬೈಡೆನ್ ಸ್ಪರ್ಧೆಗೆ ಇಳಿದರೆ ಟ್ರಂಪ್‌ರನ್ನು ಮಣಿಸುವುದು ಕಷ್ಟ ಎಂದಿದ್ದಾರೆ. ಆ.7ರೊಳಗೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯ ಅಂತಿಮ ಆಯ್ಕೆ ನಡೆಯಲಿದೆ.