ಸ್ಯಾಟ್‌ಲೈಟ್ ಆಧಾರಿತ ಟೋಲ್ ಸಂಗ್ರಹ ಹೇಗೆ ಕೆಲಸ ಮಾಡುತ್ತೆ? ಇದರ ಲಾಭಗಳೇನು?

ಜಿಪಿಎಸ್ ಅಳವಡಿಕೆ ನಂತರ ಟೋಲ್‌ನಲ್ಲಿರುವ ಕ್ಯಾಮೆರಾಗಳು ವಾಹನ ಚಲನೆಯ ಮೇಲೆ ಕಣ್ಣೀರಿಸುತ್ತವೆ. ಹೆದ್ದಾರಿಯಲ್ಲಿ ವಾಹನ ಎಷ್ಟು ದೂರ ಚಲಿಸಿದ ಆಧಾರದ ಮೇಲೆ ನೇರವಾಗಿ ಲಿಂಕ್ ಮಾಡಲಾಗಿರುವ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. 

What is GPS based Toll Collection How Will It Work Explained mrq

ನವದೆಹಲಿ: ಹೆದ್ದಾರಿ ಟೋಲ್‌ ಗೇಟ್‌ನಲ್ಲಿ ಹಣ ಸಂಗ್ರಹಿಸುವ ಫಾಸ್ಟ್ ಟ್ಯಾಗ್ (Fastag) ವಿಧಾನವನ್ನು ಮತ್ತಷ್ಟು ಅಧುನೀಕರಣಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಫಾಸ್ಟ್‌ಟ್ಯಾಗ್‌ನಿಂದ ಜಿಪಿಎಸ್‌ ಆಧಾರದಲ್ಲಿ ಟೋಲ್ ಕಲೆಕ್ಷನ್ ಮಾಡಲು (GPS Based Toll-Tax Collection) ಸರ್ಕಾರ (Government Of India) ರೂಪುರೇಷ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಶೀಘ್ರದಲ್ಲಿಯೇ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ ಟ್ಯಾಗ್ ಪದ್ಧತಿ ತೆರವುಗೊಳಿಸಿ ಸ್ಟಾಟ್‌ಲೈಟ್ ಆಧಾರದಲ್ಲಿ ಹಣ ಸಂಗ್ರಹಣೆ ವಿಧಾನ ಬರಲಿದೆ. 

ಈ ಸಂಬಂಧ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಪಿಎಸ್ ಪದ್ಧತಿ ಅಳವಡಿಕೆ ಕುರಿತು ಇಚ್ಛೆ ಹೊಂದಿರುವ ವಿಶ್ವದಲ್ಲಿರುವ ಕಂಪನಿಗಳಿಗೆ ಆಹ್ವಾನ ನೀಡಿದೆ. ಕಂಪನಿಗಳ ಜೊತೆಯಲ್ಲಿ ಸ್ಟಾಟ್‌ಲೈಟ್ ಮೂಲಕ ಎಲೆಕ್ಟ್ರಾನಿಕ್ ಮೂಲಕ ಟೋಲ್ ಹಣ ಸಂಗ್ರಹಣೆ ಮಾಡೋದು ಹೇಗೆ? ಈ ಯೋಜನೆ ಕಾರ್ಯರೂಪಕ್ಕೆ ತರೋದರ ಕುರಿತು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚರ್ಚೆ ನಡೆಸಲಿದೆ. 

ಜಿಪಿಎಸ್‌ ಆಧಾರಿತ ಟೋಲ್ ಹೇಗೆ ಕೆಲಸ ಮಾಡುತ್ತದೆ? 

ಸದ್ಯ ವಾಹನಗಳ ಮುಂಭಾಗದಲ್ಲಿ ಫಾಸ್ಟ್‌ಟ್ಯಾಗ್ ಸ್ಟಿಕರ್ ಅಂಟಿಸಲಾಗಿರುತ್ತದೆ. ಟೋಲ್‌ ಗೇಟ್‌ನಲ್ಲಿ ಸ್ಟಿಕರ್ ಸ್ಯಾನ್ ಆಗಿ ಫಾಸ್ಟ್‌ಟ್ಯಾಗ್ ಖಾತೆಯಿಂದ ನೇರವಾಗಿ ಹಣ ಕಡಿತಗೊಳ್ಳುತ್ತದೆ. ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ವಾಹನದ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ. ಜಿಪಿಎಸ್ ಅಳವಡಿಕೆ ನಂತರ ಟೋಲ್‌ನಲ್ಲಿರುವ ಕ್ಯಾಮೆರಾಗಳು ವಾಹನ ಚಲನೆಯ ಮೇಲೆ ಕಣ್ಣೀರಿಸುತ್ತವೆ. ಹೆದ್ದಾರಿಯಲ್ಲಿ ವಾಹನ ಎಷ್ಟು ದೂರ ಚಲಿಸಿದ ಆಧಾರದ ಮೇಲೆ ನೇರವಾಗಿ ಲಿಂಕ್ ಮಾಡಲಾಗಿರುವ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. 

3 ಶತಕೋಟಿ ಡಾಲರ್ ಸಂಗ್ರಹಕ್ಕೆ ಮುಂದಾದ ಎಸ್‌ಬಿಐ; ಹಣ ಕ್ರೋಢೀಕರಣ ಹಿಂದಿನ ರಹಸ್ಯ ಏನು?

ಜಿಪಿಎಸ್‌ ಆಧಾರಿತ ಟೋಲ್ ಕಲೆಕ್ಷನ್ ಲಾಭಗಳು ಏನು? 

ಜಿಪಿಎಸ್ ಆಧಾರಿತ ಟೋಲ್ ಕಲೆಕ್ಷನ್‌ನಿಂದ ಮೊದಲನೇಯದಾಗಿ ಪ್ರಯಾಣದ ಸಮಯ ಉಳಿತಾಯಗುತ್ತದೆ. ಟೋಲ್‌ಗೇಟ್‌ನಲ್ಲಿ ನಿಲ್ಲುವ ಸಮಯ 714 ಸೆಕೆಂಡ್‌ನಿಂದ 47 ಸೆಕೆಂಡ್‌ಗೆ ಇಳಿಕೆಯಾಗಲಿದೆ. ವಾಹನಗಳ ಚಲನೆ ಮೇಲೆ ನಿಗಾ ಇರೋ ಕಾರಣ ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಸಹಾಯವಾಗುತ್ತದೆ. ಇನ್ನು ಟೋಲ್‌ ಗೇಟ್ ನಿರ್ವಹಣೆ ವೆಚ್ಚವೂ ಕಡಿಮೆಯಾಗುತ್ತದೆ. ಹೆದ್ದಾರಿ ಬಳಕೆದಾರರು ತಾವು ಪ್ರಯಾಣಿಸಿದ ಮಾರ್ಗಕ್ಕೆ ಮಾತ್ರ ಹಣ ಪಾವತಿಸುವಂತಾಗುತ್ತದೆ. 

ಜಿಪಿಎಸ್ ಅಳವಡಿಕೆಗೆ ಪ್ರಾಧಿಕಾರದ ಮುಂದಿರೋ ಸವಾಲುಗಳೇನು?

ಭಾರತ ಸರ್ಕಾರ 2014ರಲ್ಲಿ ಫಾಸ್ಟ್‌ಟ್ಯಾಗ್ ಪದ್ಧತಿಯನ್ನು ಪರಿಚಯಿಸಿತ್ತು. 2019 ಡಿಸೆಂಬರ್‌ನಲ್ಲಿ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿತ್ತು. ಇಂದಿಗೂ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತವೆ. ದೇಶದ  ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ನೆಟ್‌ವರ್ಕ್ ಸಮಸ್ಯೆ ಕಂಡು ಬರುತ್ತದೆ. ಹಾಗಾಗಿ ವಾಹನಗಳ ಚಲನೆಯ ಮೇಲೆ ಕಣ್ಣೀರಿಸೋದು ಕಷ್ಟ ಆಗಬಹುದು. ಹೊಸ ಪದ್ಧತಿಗೆ ಆರಂಭದಲ್ಲಿ ವಿರೋಧ ಉಂಟಾಗುವ ಸಾಧ್ಯತೆ ಇರುತ್ತದೆ. 

ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಟಫ್ ಫೈಟ್ ನೀಡಿದ್ರು ರಾಜೀವ್ ಚಂದ್ರಶೇಖರ್; ಶಶಿ ತರೂರು ಗೆಲುವಿನ ಅಂತರ ಎಷ್ಟು?

ಈಗಾಗಲೇ ಯುರೋಪ್‌ ದೇಶಗಳು ಜಿಪಿಎಸ್ ಆಧಾರಿತ ಟೋಲ್‌ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಜರ್ಮನಿ, ರಷ್ಯಾ ಮತ್ತು ಸ್ಲೋಂವಕಿಯಾದಲ್ಲಿ ಈ ಪದ್ಧತಿ ಯಶಸ್ವಿಯಾಗಿದೆ. ಈ ದೇಶಗಳ ಸಾವಿರಾರು ಕಿಲೋ ಮೀಟರ್ ರಸ್ತೆ ಸ್ಯಾಟ್‌ಲೈಟ್‌  ಸುಪರ್ದಿಯಲ್ಲಿದೆ.

Latest Videos
Follow Us:
Download App:
  • android
  • ios