ಮಮತಾ ಬ್ಯಾನರ್ಜಿ ಮುಸ್ಲಿಂ ಓಲೈಕೆ ಬಹಿರಂಗಪಡಿಸಿದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ!

ಮೀಸಲಾತಿ ವಿಚಾರದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಸ್ಲಿಂ ಮತ ಬ್ಯಾಂಕ್‌ಗಾಗಿ ಹಿಂದೂಗಳಿಗೆ ಹಾನಿ ಮಾಡಿರುವುದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (ಎನ್‌ಸಿಬಿಸಿ) ವರದಿಯಿಂದ ಬೆಳಕಿಗೆ ಬಂದಿದೆ. ಮುಸ್ಲಿಮರಿಗೆ ಮಾತ್ರವಲ್ಲದೆ ಬಾಂಗ್ಲಾದೇಶದ ನಿರಾಶ್ರಿತರಿಗೂ ಮಮತಾ ಬ್ಯಾನರ್ಜಿ ಮೀಸಲಾತಿ ನೀಡಿದ್ದಾರೆ.

National Commission of Backward Classes Flags Irregularities Over OBC Status In West Bengal san

ನವದೆಹಲಿ (ಜೂ.12): ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರದಲ್ಲಿ ಅಕ್ರಮ ಮಾಡಿದ ವಿಚಾರವಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಯಕ ಮತ್ತು ರಾಜಕೀಯ ಪಕ್ಷಕ್ಕೂ ಮತದಾರರು ಬಹಳ ಮುಖ್ಯ. ಜನರ ಮತವೇ ಅವರನ್ನು ಅಧಿಕಾರದ ಗದ್ದುಗೆಗೆ ಕೊಂಡೊಯ್ಯುತ್ತದೆ. ಇದೇ ಕಾರಣಕ್ಕೆ ನಾಯಕರು ತಮ್ಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿಷಯಕ್ಕೆ ಬಂದಾಗ ಮುಸ್ಲಿಮರನ್ನು ಓಲೈಕೆ ಮಾಡುವ ವಿಚಾರದಲ್ಲಿ ಹಲವಾರು ಹೆಜ್ಜೆ ಮುಂದೆ ಹೋಗಿದ್ದಾರೆ ಅನ್ನೋದನ್ನು ರಾಷ್ಟ್ರೀಯ ಆಯೋಗವೇ ಬಹಿರಂಗ ಮಾಡಿದೆ. ಮಮತಾ ಬ್ಯಾನರ್ಜಿಯವರು ತಮ್ಮ ಮುಸ್ಲಿಂ ಮತಬ್ಯಾಂಕ್ ಬಲಪಡಿಸಲು ಮೀಸಲಾತಿ ವಿಷಯದಲ್ಲಿ ಹಿಂದೂಗಳಿಗೆ ಸಮಸ್ಯೆ ಮಾಡಲು ಕೂಡ ಹಿಂಜರಿಯಲಿಲ್ಲ ಅನ್ನೋದು ಕೂಡ ಸ್ಪಷ್ಟವಾಗಿದೆ.  ಓಲೈಕೆ ಮಾಡುವ ನಿಟ್ಟಿನಲ್ಲಿ ನುಸುಳುಕೋರರಿಗೂ ಕೂಡ ಮೀಸಲಾತಿ ಪ್ರಯೋಜನಗಳನ್ನು ಸಹ ನೀಡಿದ್ದಾರೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (ಎನ್‌ಸಿಬಿಸಿ) ವರದಿಯಿಂದ ಈ ಮಾಹಿತಿ ಲಭಿಸಿದೆ.

ಹಿಂದುಳಿದ ವರ್ಗಗಳ ಜಾತಿಯಲ್ಲಿ ಮುಸ್ಲಿಂ ಜಾತಿಗಳ ಸಂಖ್ಯೆಯಲ್ಲಿ ಏರಿಕೆ: ಮಮತಾ ಬ್ಯಾನರ್ಜಿ ಅವರು ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ರಾಜ್ಯಪಟ್ಟಿಯಲ್ಲಿ ಹಿಂದುಗಳ ಜಾತಿಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದರೆ, ಮುಸ್ಲಿಂ ಜಾತಿಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಏರಿಕೆ ಮಾಡಿದ್ದಾರೆ ಅನ್ನೋದನ್ನ ವರದಿ ಬಹಿರಂಗಪಡಿಸಿದೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸಂಖ್ಯೆಯ ಹಿಂದುಗಳು ಮೀಸಲಾತಿಯ ಲಾಭದಿಂದ ವಂಚಿತರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಬಾಂಗ್ಲಾದೇಶದ ಭಾಟಿಯಾ ಮುಸ್ಲಿಮರನ್ನು ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿಗೆ ಸೇರಿಸಿರುವುದು ಮಾತ್ರವಲ್ಲದೆ ಅವರಿಗೂ ಕೂಡ ಸರ್ಕಾರ ಮೀಸಲಾತಿಯ ಲಾಭವನ್ನು ನೀಡಿದೆ ಎಂದು ಎನ್‌ಸಿಬಿಸಿ ತನ್ನ ವರದಿಯಲ್ಲಿ ತಿಳಿಸಿದೆ.

2011ರ ಬಳಿಕ ಹಿಂದುಳಿದ ವರ್ಗಗಳ ಮುಸ್ಲಿಂ ಜಾತಿಯಲ್ಲಿ ಏರಿಕೆ: 2011 ರ ಮೊದಲು, ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗಗಳ ರಾಜ್ಯ ಪಟ್ಟಿಯಲ್ಲಿ ಇದ್ದ ಒಟ್ಟು ಜಾತಿಗಳ ಸಂಖ್ಯೆ 108. ಇವುಗಳಲ್ಲಿ 53 ಮುಸ್ಲಿಂ ಜಾತಿಗಳು ಮತ್ತು 55 ಹಿಂದೂ ಜಾತಿಗಳು. 2011ರ ನಂತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆಯಾದ ಜಾತಿಗಳ ಸಂಖ್ಯೆ 71ಕ್ಕೆ ಇಳಿದಿದೆ. ಇದರಲ್ಲಿ 65 ಮುಸ್ಲಿ ಜಾತಿಗಳಾಗಿದ್ದರೆ, ಹಿಂದುಗಳ 6 ಜಾತಿ ಮಾತ್ರವೇ ಇದರಲ್ಲಿದೆ. ಇದು 65 ಮುಸ್ಲಿಂ ಜಾತಿಗಳು ಮತ್ತು 6 ಹಿಂದೂ ಜಾತಿಗಳನ್ನು ಹೊಂದಿದೆ

 

ಒಡಿಶಾ ರೈಲು ದುರಂತ, ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರಿ ಕೆಲಸದ ಭರವಸೆ ನೀಡಿದ ಮಮತಾ ಬ್ಯಾನರ್ಜಿ!

ಒಬಿಸಿ ಜನಸಂಖ್ಯೆಯ ಶೇ. 65.9ರಷ್ಟು ಜನರು ಮುಸ್ಲಿಮರು: ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆಯಲ್ಲಿ 70.5 ಪ್ರತಿಶತ ಹಿಂದೂಗಳು ಮತ್ತು 27 ಪ್ರತಿಶತ ಮುಸ್ಲಿಮರಿದ್ದಾರೆ. ಮತ್ತೊಂದೆಡೆ, OBC ಜನಸಂಖ್ಯೆಯ ಬಗ್ಗೆ ಹೇಳುವುದಾದರೆ, ಹಿಂದೂಗಳು 34 ಪ್ರತಿಶತ ಮತ್ತು ಮುಸ್ಲಿಮರು 65.9 ಪ್ರತಿಶತ ಇದ್ದಾರೆ. ಒಬಿಸಿ ಜನಸಂಖ್ಯೆಯನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ (ವರ್ಗ A ಮತ್ತು ವರ್ಗ B). ಎ ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ಮತ್ತು ಬಿ ವರ್ಗದವರಿಗೆ ಶೇ 7ರಷ್ಟು ಮೀಸಲಾತಿ ದೊರೆಯುತ್ತದೆ. ಎ ವರ್ಗದಲ್ಲಿ ಮುಸ್ಲಿಮರು ಶೇ.90.1 ಮತ್ತು ಹಿಂದೂಗಳು ಶೇ.8.6ರಷ್ಟಿದ್ದಾರೆ. ಆದರೆ, ಬಿ ವರ್ಗದಲ್ಲಿ ಹಿಂದೂಗಳು 54 ಪ್ರತಿಶತ ಮತ್ತು ಮುಸ್ಲಿಮರು 45.9 ಪ್ರತಿಶತ ಇದ್ದಾರೆ.

ಗೋದ್ರಾ ದುರಂತ ಮಾಡಿಸಿದ್ದು ಯಾರು? ಒಡಿಶಾ ರೈಲು ಅಪಘಾತದಲ್ಲಿ ಸಿಎಂ ಮಮತಾ ರಾಜಕೀಯ!

Latest Videos
Follow Us:
Download App:
  • android
  • ios