ಗೋದ್ರಾ ದುರಂತ ಮಾಡಿಸಿದ್ದು ಯಾರು? ಒಡಿಶಾ ರೈಲು ಅಪಘಾತದಲ್ಲಿ ಸಿಎಂ ಮಮತಾ ರಾಜಕೀಯ!
ಒಡಿಶಾ ರೈಲು ದುರಂತ ಬಳಿಕ ಸಾವು ನೋವುಗಳು ಒಂದೆಡೆಯಾದರೆ, ಮತ್ತೊಂದೆ ರಾಜಕೀಯವೂ ಜೋರಾಗಿದೆ. ರೈಲ್ವೇ ಸಚಿವ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸಿದೆ. ಇತ್ತ ಸಿಎಂ ಮಮತಾ ಬ್ಯಾನರ್ಜಿ ಈ ಅಪಘಾತದ ನಡುವೆ ಗೋದ್ರಾ ರೈಲು ದುರಂತ ಎಳೆದು ತಂದಿದ್ದಾರೆ.
ಕೋಲ್ಕತಾ(ಜೂ.04): ಒಡಿಶಾ ರೈಲು ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದರೆ, 900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದರ ನೋವು ಇಡೀ ಭಾರತೀಯರಿಗೆ ಆಗಿದೆ. ಆದರೆ ರಾಜಕೀಯ ಪಕ್ಷಗಳು ಮಾತ್ರ ಆಗಲೇ ರಾಜಕೀಯ ಶುರುಮಾಡಿದೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ನಾಯಕರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ದುರಂತದ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದೆ. ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. 2002ರಲ್ಲಿ ಗೋದ್ರಾ ರೈಲು ದುರಂತ ಮಾಡಿದ್ದು ಯಾರು? ಚಲಿಸುತ್ತಿರುವ ರೈಲು ಹೊತ್ತಿ ಉರಿದು ಪ್ರಯಾಣಿಕರು ಮೃತಪಟ್ಟಿದ್ದು ಹೇಗೆ ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ರೈಲ್ವೇ ಸಚಿವ ರಾಜೀನಾಮೆ ಬೆನ್ನಲ್ಲೇ ಬಿಜೆಪಿ ನಾಯಕರು ಈ ಹಿಂದೆ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್ ರೈಲ್ವೇ ಸಚಿವರಾಗಿದ್ದ ವೇಳೆ ನಡೆದಿರುವ ರೈಲು ದುರಂತ, ಸಾವು ನೋವುಗಳ ಅಂಕಿ ಅಂಶ ಮುಂದಿಟ್ಟಿದ್ದಾರೆ. ಈ ವೇಳೆ ಯಾಕೆ ರಾಜೀನಾಮೆ ನೀಡಿರಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿತ್ತು. ಇದರಿಂದ ಕೆರಳಿದ ಮಮತಾ ಬ್ಯಾನರ್ಜಿ ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಡಿಶಾ ರೈಲು ದುರಂತ; ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್!
ಸುಳ್ಳು ಸುದ್ದಿ, ಪ್ರಾಯೋಜಿತ ಸುದ್ದಿಯನ್ನು ಬಿಜೆಪಿ ಮಾಡುತ್ತಿದೆ. ಕಾರಣ ಸರ್ಕಾರ ಅವರ ಕೈಯಲ್ಲಿದೆ. ಅವರು ಇತಿಹಾಸವನ್ನು ಬದಲಿಬಹದು, ಅಂಕಿ ಅಂಶ ಬದಲಿಸಬಹುದು. ನೀವು ಜನರ ಮಧ್ಯೆ ನಿಲ್ಲುವ ಬದಲು ನಮ್ಮನ್ನೇ ಪ್ರಶ್ನಿಸುತ್ತಿದ್ದೀರಾ? ನೀತೀಶ್ ಕುಮಾರ್ ಅವರನ್ನೇ ಪ್ರಶ್ನಿಸುತ್ತಿದ್ದೀರಿ. ಲಾಲು ಪ್ರಸಾದ್ ಯಾದವ್ ಅವರನ್ನು ಪ್ರಶ್ನಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು. 2002ರಲ್ಲಿ ಗೋದ್ರಾ ರೈಲು ದುರಂತವನ್ನು ಮಾಡಿದ್ದು ಯಾರು? ಚಲಿಸುತ್ತಿರುವ ರೈಲು ಹೊತ್ತಿ ಉರಿದಿದ್ದು ಹೇಗೆ? ಎಷ್ಟು ಜನ ಮೃತಪಟ್ಟಿದ್ದಾರೆ. ಇದನ್ನು ನೀವು ಹೇಳಿದ್ದೀರಾ? ನಿಮ್ಮ ಅವಧಿಯಲ್ಲಿ ಹಲವು ಘಟನೆಗಳು ನಡೆದಿದೆ. ಒಡಿಶಾ ರೈಲು ದುರಂತದಲ್ಲಿನ ಅಂಕಿ ಅಂಶ ಸುಳ್ಳಾಗಿದೆ. ಅತೀ ದೊಡ್ಡ ದುರಂತ ಇದು. ಆದರೆ ಸರ್ಕಾರ ಸಾವಿನ ಸಂಖ್ಯೆ ಬಹಿರಂಗಪಡಿಸುತ್ತಿಲ್ಲ. ಸುಳ್ಳು ಸಂಖ್ಯೆ ಹೇಳುತ್ತಿದೆ. ಇದು ನಿರ್ಲಕ್ಷ್ಯದ ಕಾರಣ ದುರಂತ ಸಂಭವಿಸಿದೆ ಎಂದು ಮಮತಾ ಬ್ಯಾನರ್ಜಿಹೇಳಿದ್ದಾರೆ.
ಒಡಿಶಾ ರೈಲು ದುರಂತದ ಹೊಣೆ ಹೊತ್ತು ರೈಲ್ವೈ ಸಚಿವರು ರಾಜೀನಾಮೆ ಒತ್ತಾಯಿಸಿರುವ ಮಮತಾ ಬ್ಯಾನರ್ಜಿ, ನಿನ್ನೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನಾ ಸ್ಥಳದಲ್ಲಿ ಮೈಕ್ ಮೂಲಕ ರಕ್ಷಣಾ ಕಾರ್ಯ ಹಾಗೂ ದುರಸ್ತಿ ಕಾರ್ಯಕ್ಕೆ ನೆರೆದಿದ್ದ ಸಿಬ್ಬಂಧಿಗಳು ಹಾಗೂ ಜರನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ನಮಗೆ ಇರುವ ಮಾಹಿತಿ ಪ್ರಕಾರ 500ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಗಳು ಮುಗಿದಿಲ್ಲ. ಹೀಗಾಗಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದರು.ಇದೇ ವಳೆ ಮಧ್ಯಪ್ರವೇಶಿಸಿದ ಸಚಿವ ಅಶ್ವಿನಿ ವೈಷ್ಣವ್, ಎಲ್ಲಾ ರಕ್ಷಣಾ ಕಾರ್ಯಗಳು ಮುಗಿದಿದೆ. ಮೃತರ ಸಂಖ್ಯೆ 238 ಎಂದರು. ಇದು ನಿನ್ನೆಯ ಸಂಖ್ಯೆ ಎಂದಾಗ, ಒದು ಒಡಿಶಾ ಸರ್ಕಾರ ನೀಡಿದ ಸಂಖ್ಯೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದರು. ಬಳಿಕ ಮಾತು ಮುಂದುವರಿದ ಮಮತಾ ಬ್ಯಾನರ್ಜಿ, ರಕ್ಷಾ ಕವಚ ಇದ್ದರೆ ರೈಲು ಅಪಘಾತ ತಪ್ಪುತ್ತಿತ್ತು. ರಕ್ಷಾ ಕವಚ ಯಾಕೆ ಅಳವಡಿಸಿಲ್ಲ ಎಂದು ಪ್ರಶ್ನಿಸಿದ್ದರು. ಮಮತಾ ಬ್ಯಾನರ್ಜಿ ಈ ಹೇಳಿಕೆ ಬಳಿಕ ಹಲವು ತಜ್ಞರು ಈ ಕುರಿತು ಉತ್ತರ ನೀಡಿದ್ದರು.
ಒಡಿಶಾ ರೈಲು ದುರಂತದಲ್ಲಿ ಅನಾಥರಾದ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿ ಹೊಣೆ ಹೊತ್ತ ಅದಾನಿ!
ಒಡಿಶಾ ರೈಲು ದುರಂತನ್ನು ತಪ್ಪಿಸಲು ರಕ್ಷಾ ಕವಚ ತಂತ್ರಜ್ಞಾನಕ್ಕೆ ಸಾಧ್ಯವಾಗುವುದು ಕಷ್ಟ. ಕಾರಣ ಇದು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಕಾರಣ ಅಪಘಾತ ಸಂಭವಿಸಿದೆ. ಈ ಭೀಕರ ಹಾಗೂ ಕ್ಷಣಮಾತ್ರದಲ್ಲಿ ಸಂಭವಿಸಿದ ಅಪಘಾತವನ್ನು ತಂತ್ರಜ್ಞಾನ ಮೂಲದ ನಿಯಂತ್ರಿಸುವುದು ಕಷ್ಟ ಎಂದಿದ್ದರು. ಈ ವಿಡಿಯೋಗಳು ವೈರಲ್ ಆಗಿತ್ತು.ಇದರಿಂದ ಮತ್ತಷ್ಟು ಕೆರಳಿದ ಮಮತಾ ಬ್ಯಾನರ್ಜಿ ಇಂದು ಬಿಜೆಪಿ ವಿರುದ್ದ ಗೋದ್ರಾ ರೈಲು ದುರಂತ ಸೇರಿದಂತೆ ಇತರ ದುರಂತಗಳನ್ನು ಕೆದಕಿದ್ದಾರೆ.