ರಾಷ್ಟ್ರಧ್ವಜಕ್ಕೆ ಅವಮಾನ: ಮಮತಾ ಬ್ಯಾನರ್ಜಿ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

ಸಮನ್ಸ್‌ ಜಾರಿಯಲ್ಲಿ ಲೋಪವಾಗಿದೆ ಎಂದು ಹೇಳಿ, ಹೊಸದಾಗಿ ವಿಚಾರಣೆ ನಡೆಸುವಂತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಸೂಚಿಸಿತ್ತು. ಹೀಗಾಗಿ ತಮ್ಮ ಮೇಲಿನ ಪ್ರಕರಣವನ್ನೇ ವಜಾಗೊಳಿಸುವಂತೆ ಕೋರಿ ಮಮತಾ ಹೈಕೋರ್ಟ್‌ (High Court) ಮೆಟ್ಟಿಲೇರಿದ್ದರು. ಆದರೆ ಕೇಸು ವಜಾಕ್ಕೆ ಹೈಕೋರ್ಟ್‌ ನಿರಾಕರಿಸಿದೆ.

national anthem disrespect case court orders police to probe allegations against mamata banerjee ash

ಮುಂಬೈ (ಮಾರ್ಚ್‌ 30, 2023): 2022ರಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ರಾಷ್ಟ್ರಗೀತೆಗೆ ಅಪಮಾನ ಮಾಡಿರುವ ಆರೋಪದಡಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಯಾವುದೇ ರಿಲೀಫ್‌ ನೀಡಲು ಬಾಂಬೆ ಹೈಕೋರ್ಟ್‌ ನಿರಾಕರಿಸಿದೆ. ಕಾರ್ಯಕ್ರಮವೊಂದರ ವೇಳೆ ಮಮತಾ ಕುಳಿತೇ ರಾಷ್ಟ್ರಗೀತೆ ಹಾಡಿದ್ದರು, ಬಳಿಕ ಎದ್ದು ನಿಂತರಾದರೂ, ಒಂದೆರಡು ಸಾಲು ಹೇಳಿ ಅರ್ಧದಲ್ಲೇ ಅದನ್ನೂ ನಿಲ್ಲಿಸಿ ಕಾರ್ಯಕ್ರಮದಿಂದ ತೆರಳಿದ್ದರು. 

ಈ ಹಿನ್ನೆಲೆಯಲ್ಲಿ ಅವರ ಕ್ರಮ ಕೋರಿ ದೂರು ದಾಖಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಮ್ಯಾಜಿಸ್ಪ್ರೇಟ್‌ ಕೋರ್ಟ್‌ (Magistrate Court) ಮಮತಾ ಬ್ಯಾನರ್ಜಿಗೆ (Mamata Banerjee) ಸಮನ್ಸ್‌ (Summons) ಜಾರಿ ಮಾಡಿತ್ತು. ಇದನ್ನು ಮಮತಾ ಬ್ಯಾನರ್ಜಿ ಸೆಶನ್ಸ್‌ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಸೆಶನ್ಸ್‌ ಕೋರ್ಟ್‌ (Sessions Court), ಸಮನ್ಸ್‌ ಜಾರಿಯಲ್ಲಿ ಲೋಪವಾಗಿದೆ ಎಂದು ಹೇಳಿ, ಹೊಸದಾಗಿ ವಿಚಾರಣೆ ನಡೆಸುವಂತೆ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಸೂಚಿಸಿತ್ತು. ಹೀಗಾಗಿ ತಮ್ಮ ಮೇಲಿನ ಪ್ರಕರಣವನ್ನೇ ವಜಾಗೊಳಿಸುವಂತೆ ಕೋರಿ ಮಮತಾ ಹೈಕೋರ್ಟ್‌ (High Court) ಮೆಟ್ಟಿಲೇರಿದ್ದರು. ಆದರೆ ಕೇಸು ವಜಾಕ್ಕೆ ಹೈಕೋರ್ಟ್‌ ನಿರಾಕರಿಸಿದೆ.

ಇದನ್ನು ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಬಂಗಾಳ ವಿರುದ್ಧ ಕೇಂದ್ರ ತಾರತಮ್ಯ: 2 ದಿನದ ಧರಣಿ ಆರಂಭಿಸಿದ ದೀದಿ
ನವದೆಹಲಿ: ಪಶ್ಚಿಮ ಬಂಗಾಳ ರಾಜ್ಯದ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ, ಯೋಜನೆಗಳ ಅನುಷ್ಠಾನಕ್ಕೆ ಇಲಾಖೆಗಳಿಗೆ ನೀಡಬೇಕಾದ ಹಣ ಮಂಜೂರು ಮಾಡುತ್ತಿಲ್ಲ ಎಂದು ಆರೋಪಿಸಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಬುಧವಾರದಿಂದ 2 ದಿನಗಳ ಧರಣಿ ಹೋರಾಟ ಪ್ರಾರಂಭಿಸಿದ್ದಾರೆ. ನಗರದ ರೆಡ್‌ ರೋಡ್‌ನಲ್ಲಿರುವ ಅಂಬೇಡ್ಕರ್‌ ಪ್ರತಿಮೆ ಎದುರು ಧರಣಿ ಕೈಗೊಳ್ಳಲಾಗಿದ್ದು ಗುರುವಾರ ಸಂಜೆ ತನಕ ಮುಂದುವರಿಯಲಿದೆ. ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ ಎಂಜಿಎನ್‌ಆರ್‌ಇಜಿಎ (MGNREGA) ಹಾಗೂ ವಸತಿ ಮತ್ತು ರಸ್ತೆ ಯೋಜನೆಗಳಿಗೆ ಇಲಾಖೆಗಳಿಗೆ ಕೇಂದ್ರವು ಹಣ ಮಂಜೂರು ಮಾಡುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿದ್ದಾರೆ. ಧರಣಿಯಲ್ಲಿ ಮಮತಾ ಬ್ಯಾನರ್ಜಿ ಪಕ್ಷದ ಹಲವು ನಾಯಕರು ಸಾಥ್‌ ನೀಡಿದ್ದಾರೆ.

ಇದನ್ನೂ ಓದಿ: From the India Gate: ಸಿದ್ದರಾಮಯ್ಯ ಪುತ್ರ ವ್ಯಾಮೋಹ; ಬಂಗಾಳದಲ್ಲಿ ಬಡ ಪಕ್ಷ, ಸಿರಿವಂತ ನಾಯಕರು..!

Latest Videos
Follow Us:
Download App:
  • android
  • ios