ನವದೆಹಲಿ(ಏ. 15)  ಪ್ರಧಾನಿ ನರೇಂದ್ರ ಮೋದಿ ಎರಡನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ. 19 ದಿನಗಳ ಕಾಲ ಲಾಕ್ ಡೌನ್ ಇದ್ದೇ ಇರುತ್ತದೆ ಎಂದು ಹೇಳಲಾಗಿದೆ.

ಸಮೀಕ್ಷೆಯೊಂದನ್ನು ನಡೆಸಿದ್ದು  ದೇಶದ ಶೇ. 71 ಜನರಕು ಮೋದಿಯವರ ಬೆನ್ನಿಗೆ ನಿಂತಿದ್ದಾರೆ ಅಂದರೆ ಮೋದಿ ಅವರ ಲಾಕ್ ಡೌನ್ ಕ್ರಮವನ್ನು ಸ್ವಾಗತ ಮಾಡಿದ್ದಾರೆ ಎಂದಿದೆ.

ನರೇಂದ್ರ ಮೋದಿ ಸರ್ಕಾರ ಕೊರೋನಾ ವಿರುದ್ಧ ಮಾಡುತ್ತಿರುವ ಹೋರಾಟ ಸರಿಯಾಗಿದೆ ಎಂದು ಶೇ. 71 ರಷ್ಟು ಜನ ಹೇಳಿದ್ದಾರೆ.  ನೇತಾ ಆಪ್ ಈ ಸಮೀಕ್ಷೆ ನಡೆಸಿದ್ದು 50 ಸಾವಿರಕ್ಕೂ ಅಧಿಕ ರೆಸ್ಪಾನ್ಸ್ ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಯಾವ ಜಿಲ್ಲೆ ಸೇಫ್? ಯಾವುದು ಡೆಂಜರ್?

ಕೊರೋನಾ ಪರಿಸ್ಥಿತಿ ಗಂಭೀರತೆಗೆ ಹೋಗುವ ಮುನ್ನವೇ ದೇಶದ ಲಾಕ್ ಡೌನ್ ಮಾಡಿದ ಕೆಲಸ ಸರಿಯಾಗಿದೆ ಎಂದು ಶೇ. 65 ರಷ್ಟು ಜನ ಹೇಳಿದ್ದಾರೆ.

ಮೋದಿ ಸರ್ಕಾರದ ಎಲ್ಲ ಕ್ರಮಗಳನ್ನು ಶೇ. 68 ಜನ ಸ್ವಾಗತ ಮಾಡಿದ್ದಾರೆ.   ಏಪ್ರಿಲ್ 11 ಮತ್ತು 12 ರಂದು ಈ ಸಮೀಕ್ಷೆ ನಡೆದಿದೆ. ಅಂದರೆ ಎರಡನೇ ಹಂತದ ಲಾಕ್ ಡೌನ್ ಮಾಡುಬ ದಿನಕ್ಕಿಂತ ಮುನ್ನ ನಡೆದ ಸಮೀಕ್ಷೆ ಇದಾಗಿದೆ.

 ಸರಿಯಾದ ಸಮಯದಲ್ಲಿಯೇ ಲಾಕ್ ಡೌನ್ ಅನೌನ್ಸ್ ಮಾಡಲಾಯಿತು ಎಂದು ಶೇ. 65 ರಷ್ಟು ಜನ ಹೇಳಿದರೆ, ಲಾಕ್ ಡೌನ್ ಘೋಷಣೆ ಮಾಡಲು ಸರ್ಕಾರ ವಿಳಂಬ ಮಾಡಿತು ಎಂದು ಶೇ. 35 ರಷ್ಟು ಜನ ಹೇಳಿದ್ದಾರೆ.  ಆದರೆ ಶೇ. 71 ರಷ್ಟು ಜನ ಮೋದಿ ಸರ್ಕಾರದ ಕೃಮ ತೃಪ್ತಿದಾಯಕ ಎಂದು ಹೇಳಿದರೆ ಶೇ. 29 ಜನರು ಸರಿ ಇಲ್ಲ ಎಂದು ಹೇಳೀದ್ದಾರೆ.

ಕೆಳ ಮಧ್ಯಮ ವರ್ಗದ ಶೇ. 53 ಜನರಿಗೆ ಮೋದಿ ಸರ್ಕಾರದ ಕ್ರಮ ತೃಪ್ತಿ ತಂದಿದ್ದರೆ ಶೇ. 47 ಜನರಿಗೆ ಸರಿ ಕಂಡುಬಂದಿಲ್ಲ. ಶೇ. 72ರಷ್ಟು ಮಧ್ಯಮ ವರ್ಗದವರಿಗೆ ಶೇ. 82 ರಷ್ಟು ಮೇಲುವರ್ಗದ ಜನರಿಗೆ ಮೋದಿ ಸರ್ಕಾರದ ಕ್ರಮ ತೃಪ್ತಿ ತಂದಿದೆ.