Asianet Suvarna News Asianet Suvarna News

ವೈದ್ಯರ ಶ್ರಮ ಕಣ್ಣಾರೆ ಕಂಡು ಆನಂದವಾಯ್ತು: ವ್ಯಾಕ್ಸಿನ್‌ ವಾರ್‌ ಚಿತ್ರಕ್ಕೆ ಮೋದಿ ಪ್ರಶಂಸೆ

ಪ್ರಪಂಚವನ್ನೇ ನಡುಗಿಸಿದ್ದ ಮಹಾಮಾರಿ ಕೊರೊನಾ ವೈರಾಣುವಿಗೆ ಲಸಿಕೆ ಕಂಡು ಹಿಡಿಯುವಲ್ಲಿ ವೈದ್ಯಕೀಯ ತಂಡ ಪಟ್ಟ ಶ್ರಮವನ್ನು ಎಳೆ ಎಳೆಯಾಗಿ ತೆರೆ ಮೇಲೆ ತಂದಿರುವ 'ದಿ ವ್ಯಾಕ್ಸಿನ್‌ ವಾರ್' ಚಲನಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Narendra Modis praised Vaccine War movie which earned 8 crores in 7 days akb
Author
First Published Oct 6, 2023, 11:11 AM IST

ಜೋಧ್‌ಪುರ: ಪ್ರಪಂಚವನ್ನೇ ನಡುಗಿಸಿದ್ದ ಮಹಾಮಾರಿ ಕೊರೊನಾ ವೈರಾಣುವಿಗೆ ಲಸಿಕೆ ಕಂಡು ಹಿಡಿಯುವಲ್ಲಿ ವೈದ್ಯಕೀಯ ತಂಡ ಪಟ್ಟ ಶ್ರಮವನ್ನು ಎಳೆ ಎಳೆಯಾಗಿ ತೆರೆ ಮೇಲೆ ತಂದಿರುವ 'ದಿ ವ್ಯಾಕ್ಸಿನ್‌ ವಾರ್' ಚಲನಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಲನಚಿತ್ರ ವೀಕ್ಷಿಸಿದ ನಂತರ ಪ್ರತಿಯೊಬ್ಬ ಭಾರತೀಯನಿಗೂ (Indian)ಹೆಮ್ಮೆಯ ಭಾವ ವ್ಯಕ್ತವಾಗುತ್ತದೆ. ನಾನು ಕೇವಲ ನಮ್ಮ ವೈದ್ಯಕೀಯ ತಂಡ ಪಟ್ಟ ಶ್ರಮದ ಬಗ್ಗೆ ಕೇಳಿದ್ದೆ. ಅದನ್ನು ಕಣ್ಣಾರೆ ನೋಡಿದಾಗ ಬಹಳ ಆನಂದವಾಯಿತು. ಮುಂದಿನ ಪೀಳಿಗೆಗೆ ಚಲನಚಿತ್ರ ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ನಾನು ಚಿತ್ರ ನಿರ್ಮಾತೃಗಳನ್ನು ಅಭಿನಂದಿಸುತ್ತೇನೆ ಎಂದು ಇಲ್ಲಿ ನಡೆದ ಸಮಾವೇಶವೊಂದರಲ್ಲಿ ಮೋದಿ ಪ್ರಶಂಸಿಸಿದರು.

ವಾಯುಪಡೆ ಸೇರಿದ 2 ಸೀಟಿನ ತೇಜಸ್‌ ಯುದ್ಧ ವಿಮಾನ: ದಕ್ಷಿಣ ಭಾರತದಲ್ಲಿ ಏರಿಂಡಿಯಾ ಹಬ್‌?

ಈ ನಡುವೆ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ (vivek Agnihotri), ತಮ್ಮ ತಂಡವನ್ನು ಅಭಿನಂದಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ. ಈ ಹಿಂದೆ ವಿವೇಕ್‌ ಅಗ್ನಿಹೋತ್ರಿ ಅವರ ಕಾಶ್ಮೀರ್ ಫೈಲ್ಸ್‌ ಚಿತ್ರವನ್ನೂ ಮೋದಿ ಪ್ರಶಂಸಿಸಿದ್ದರು.

7 ದಿನಗಳಲ್ಲಿ 8.15 ಕೋಟಿ ರು. ಗಳಿಕೆ

ವಿವೇಕ್‌ ಅಗ್ನಿಹೋತ್ರಿ ನಿರ್ದೇಶಿಸಿದ್ದ ‘ದ ವ್ಯಾಕ್ಸಿನ್‌ ವಾರ್‌’(The vaccine war) ಚಿತ್ರವು ಬುಧವಾರ 50 ಲಕ್ಷ ರು. ಗಳಿಕೆ ಮಾಡಿದ್ದು, ಒಟ್ಟಾರೆಯಾಗಿ ಚಿತ್ರ ಬಿಡುಗಡೆಯಾದ 7 ದಿನಗಳಲ್ಲಿ 8.15 ಕೋಟಿ ರು. ಗಳಿಸಿದೆ. ಕಳೆದ ಸೆ.28ರಂದು ಬಿಡುಗಡೆಯಾಗಿರುವ ಸಿನಿಮಾ ಬರೋಬ್ಬರಿ 10 ಕೋಟಿ ರು. ಬಂಡವಾಳದಲ್ಲಿ ನಿರ್ಮಾಣವಾಗಿದೆ. 

ಸಿಕ್ಕಿಂ ಪ್ರವಾಹ: 14 ಸಾವು, 102 ಜನ ನಾಪತ್ತೆ: ಕಣ್ಮರೆಯಾದ 22 ಯೋಧರಿಗಾಗಿ ತೀವ್ರ ಶೋಧ

ಕನ್ನಡದ ನಟಿ ಸಪ್ತಮಿ ಗೌಡ ಸೇರಿದಂತೆ ಅನುಪಮ್‌ ಖೇರ್, ನಾನಾ ಪಾಟೇಕರ್‌ ಹಾಗೂ ನಟಿ ಪಲ್ಲವಿ ಜೋಶಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಿಡುಗಡೆಯಾದ ಮೊದಲ ದಿನ ಚಿತ್ರವು 1.3 ಕೋಟಿ ರು. ಗಳಿಕೆ ಮಾಡಿತ್ತು. ವಿವೇಕ್‌ ಅವರ ಹಿಂದಿನ ‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರದಂತೆ ಯಶಸ್ಸು ಕಾಣುವಲ್ಲಿ ಈ ಚಿತ್ರ ವಿಫಲವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್, ಚಿತ್ರದಲ್ಲಿ ರಾಜಕೀಯವಿಲ್ಲ. ಹೀಗಾಗಿ ಕಡಿಮೆ ಗಳಿಕೆ ಸಹಜ ಎಂದಿದ್ದಾರೆ.

 

Follow Us:
Download App:
  • android
  • ios