Asianet Suvarna News Asianet Suvarna News

ಅಯೋಧ್ಯೆ ಟ್ರಸ್ಟ್‌ಗೆ ಚಿನ್ನ, ಬೆಳ್ಳಿ ದಾನ: ಲೋಹ ಬೇಡ ಹಣ ನೀಡಿ ಎಂದು ಮನವಿ!

ಅಯೋಧ್ಯೆ ಟ್ರಸ್ಟ್‌ಗೆ ಚಿನ್ನ, ಬೆಳ್ಳಿ ವಸ್ತು ಭಾರಿ ದಾನ| ಇವನ್ನು ಕಾಯುವುದೇ ಟ್ರಸ್ಟ್‌ಗೆ ಸವಾಲು| ಲೋಹದ ಬದಲು ಹಣ ನೀಡಲು ಮನವಿ

Donations pour in for Ram temple construction ahead of Bhoomi Pujan
Author
Bangalore, First Published Jul 30, 2020, 11:02 AM IST

ನವದೆಹಲಿ(ju.೩೦): ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಂಕುಸ್ಥಾಪನೆ ನೆರವೇರುವ ದಿನ ಹತ್ತಿರವಾಗುತ್ತಿದ್ದಂತೆ, ಶ್ರೀರಾಮನ ಜನ್ಮಭೂಮಿಗೆ ಚಿನ್ನ, ಬೆಳ್ಳಿ ಗಟ್ಟಿಹಾಗೂ ಇಟ್ಟಿಗೆಗಳು ಸೇರಿದಂತೆ ಕ್ವಿಂಟಲ್‌ಗಟ್ಟಲೆ ಅಮೂಲ್ಯ ಲೋಹಗಳು ಬರುತ್ತಿವೆ.

"ರಾಮನ ಅಸ್ತಿತ್ವವೇ ಇಲ್ಲ ಎಂದಿದ್ದ ಕಾಂಗ್ರೆಸ್", ಇದೀಗ ಭಕ್ತರಾಗಿದ್ದು ಹೇಗೆ? ಬಿಜೆಪಿ ತಿರುಗೇಟು!

ಅಯೋಧ್ಯೆ ರಾಮಮಂದಿರ ನಿರ್ಮಾಣ ಸ್ಥಳದ ಭದ್ರತೆಗೆ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಈ ವಸ್ತುಗಳನ್ನು ಕಾಯುವುದು ಹೆಚ್ಚುವರಿ ಕೆಲಸವಾಗಿ ಪರಿಣಮಿಸಿದೆ.

ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ಅನುಮತಿ ನೀಡಿದ ಬಳಿಕ ದೇಶದ ವಿವಿಧ ಮೂಲೆಗಳಿಂದ ಭಕ್ತಾದಿಗಳು ಚಿನ್ನ, ಬೆಳ್ಳಿ ಸೇರಿದಂತೆ ವಿವಿಧ ಆಭರಣಗಳನ್ನು ರವಾನಿಸುತ್ತಿದ್ದಾರೆ. ಆದರೆ ಇದನ್ನು ಹೇಗೆ ಬಳಸಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೂ ಗೊತ್ತಾಗುತ್ತಿಲ್ಲ. ದೇಗುಲ ನಿರ್ಮಾಣ ವಿಷಯದಲ್ಲಿ ವ್ಯಸ್ತರಾಗಿರುವ ಟ್ರಸ್ಟ್‌ಗೆ ಈ ವಸ್ತುಗಳನ್ನು ಸುರಕ್ಷಿತವಾಗಿ ಕಾಯುವುದೇ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನ, ಬೆಳ್ಳಿಯಂತಹ ವಸ್ತುಗಳನ್ನು ರವಾನಿಸುವ ಬದಲಿಗೆ ಹಣ ಕಳುಹಿಸುವಂತೆ ಟ್ರಸ್ಟ್‌ ಮನವಿ ಮಾಡಿದೆ. ಬ್ಯಾಂಕ್‌ ಖಾತೆಯ ವಿವರವನ್ನು ಪದೇ ಪದೇ ನೀಡುತ್ತಿದೆ.

Follow Us:
Download App:
  • android
  • ios