Asianet Suvarna News Asianet Suvarna News

ಮಠದಲ್ಲೇ ನರೇಂದ್ರ ಗಿರಿ ಆತ್ಮ​ಹತ್ಯೆ ಕೇಸು: ಮೂವರ ಬಂಧ​ನ

* ಅಖಿಲ ಭಾರತ ಅಖಾಡ ಪರಿಷತ್‌ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ

* ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು 18 ಜನರ ವಿಶೇಷ ತನಿಖಾ ತಂಡ

* ಪ್ರಕರಣದ ಪ್ರಮುಖ ಆರೋಪಿಯಾದ ನರೇಂದ್ರರ ಶಿಷ್ಯ ಆನಂದ ಗಿರಿ, ಸಂದೀಪ್‌ ತಿವಾರಿ ಅರೆಸ್ಟ್

Narendra Giri death case Hanuman temple priest Aadya Tiwari arrested pod
Author
Bangalore, First Published Sep 22, 2021, 12:27 PM IST

ಪ್ರಯಾ​ಗ್‌ರಾಜ್‌(ಸೆ.22): ಅಖಿಲ ಭಾರತ ಅಖಾಡ ಪರಿಷತ್‌ ಮುಖ್ಯಸ್ಥ ಮಹಾಂತ ನರೇಂದ್ರ ಗಿರಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು 18 ಜನರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಈ ನಡುವೆ, ಪ್ರಕರಣದ ಪ್ರಮುಖ ಆರೋಪಿಯಾದ ನರೇಂದ್ರರ ಶಿಷ್ಯ ಆನಂದ ಗಿರಿ, ಸಂದೀಪ್‌ ತಿವಾರಿ ಹಾಗೂ ಇನ್ನೊ​ಬ್ಬ​ನ​ನ್ನು ಬಂಧಿಸಲಾಗಿದೆ. ಈ ಮೂವರ ಹೆಸರೂ ನರೇಂದ್ರ ಬರೆ​ದಿದ್ದ ಡೆತ್‌​ನೋ​ಟ್‌​ನ​ಲ್ಲಿ​ತ್ತು.

‘ನಾನು ಮಹಿಳೆಯೊಂದಿಗಿರುವ ಪೋಟೋವನ್ನು ಆನಂದ ಗಿರಿ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈವರೆಗೆ ನಾನು ಗೌರವದಿಂದ ಬದುಕಿದ್ದೆ, ಹಾಗಾಗಿ ಅಪವಾದ ಹೊತ್ತುಕೊಂಡು ಬದುಕಲು ಇಷ್ಟವಾಗಲಿಲ್ಲ. ಹಾಗಾಗಿ ಈ ನಿರ್ಧಾರ ಮಾಡಿದ್ದೇನೆ’ ಎಂದು ಡೆತ್‌​ನೋ​ಟಲ್ಲಿ ನರೇಂದ್ರ ಬರೆ​ದಿ​ದ್ದಾ​ರೆ.

ಅಖಾಡ ಪರಿಷತ್‌ನ ಮುಖ್ಯಸ್ಥರಾಗಿದ್ದ ನರೇಂದ್ರ ಗಿರಿ ಅವರು ಸೋಮವಾರ ಸಾಯಂಕಾಲ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

Follow Us:
Download App:
  • android
  • ios