Asianet Suvarna News Asianet Suvarna News

ಸೋಷಿಯಲ್ ಮೀಡಿಯಾದಲ್ಲಿ ಫ್ರೀ ಆಹಾರ ಸೇವಿಸ್ತಿರೊ ಗುಟ್ಟು ಬಿಚ್ಚಿಟ್ಟು, 81 ಲಕ್ಷದ ಕೆಲಸ ಕಳ್ಕೊಂಡ ವ್ಯಕ್ತಿ!

ಇನ್ಸ್ಟಾಗ್ರಾಮ್, ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬನ ವಿಡಿಯೋ ವೈರಲ್ ಆಗಿದೆ. ಆತ ಫ್ರೀಯಾಗಿ ಆಹಾರ ಸೇವನೆ ಮಾಡಿ, ಹಣ ಉಳಿಸೋ ಸತ್ಯ ಹೇಳಿದ್ದಾನೆ. ಆದ್ರೆ ಆತನ ಈ ಗುಟ್ಟೇ ಆತನ ಕೈ ಖಾಲಿಯಾಗುವಂತೆ ಮಾಡಿದೆ.
 

Indian Origin Man Losst His Job After Sharing Video on social media about free food sharing roo
Author
First Published Apr 25, 2024, 11:55 AM IST | Last Updated Apr 25, 2024, 11:55 AM IST

ಮನುಷ್ಯ ತನ್ನ ಗಳಿಕೆ ಮತ್ತೆ ಉಳಿತಾಯ, ಈ ಎರಡರ ಮೂಲವನ್ನು ಬಿಟ್ಟುಕೊಡಬಾರದು ಎಂದು ಹಿರಿಯರು ಹೇಳ್ತಾರೆ. ಅನೇಕ ಬಾರಿ ನಾವು ಹೇಳುವ ನಮ್ಮ ಜೀವನದ ಗುಟ್ಟೇ ನಮಗೆ ಶತ್ರುವಾಗಿ ಕಾಡುತ್ತೆ. ವ್ಯಕ್ತಿಯೊಬ್ಬ ಅತ್ಯುತ್ಸಾಹದಲ್ಲಿ ಜನರಿಗೆ ಸಲಹೆ ನೀಡಲು ಹೋಗಿ, ತನ್ನ ಗುಟ್ಟು ಬಿಟ್ಟುಕೊಟ್ಟಿದ್ದಾನೆ. ಇದ್ರಿಂದ ಆತನಿಗೆ ನಷ್ಟವಾಗಿದೆ. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಕೆಲಸವನ್ನು ವ್ಯಕ್ತಿ ಕಳೆದುಕೊಂಡಿದ್ದಾನೆ. ಯುಟ್ಯೂಬ್, ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮನೆ, ನಿಮ್ಮ ನೌಕರಿ ಸೇರಿದಂತೆ ವೈಯಕ್ತಿಕ ವಿಷ್ಯಗಳನ್ನು ಹಂಚಿಕೊಳ್ಳುವಾಗ ಎಚ್ಚರದಿಂದ ಇರಬೇಕು. ಆತ ತಪ್ಪು ಮಾರ್ಗದಿಂದ ಹಣ ಉಳಿತಾಯ ಮಾಡ್ತಿದ್ದ ಎನ್ನುವುದು ನೆಟ್ಟಿಗರ ಅಭಿಪ್ರಾಯ. ಇದನ್ನು ತಿಳಿದ ಕಂಪನಿ ಕೂಡ ಆತನ ವಿರುದ್ಧ ಸೂಕ್ತ ಕ್ರಮಕೈಗೊಂಡಿದೆ. ಉಚಿತವಾಗಿ ಆಹಾರ ಪಡೆದು ಹಣ ಉಳಿತಾಯ ಮಾಡ್ತಿದ್ದವನ ಕೈನಲ್ಲಿ ಈಗ ಕೆಲಸವೂ ಇಲ್ಲ, ಉಚಿತ ಊಟವೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಆತನ್ಯಾರು? ಮಾಡಿದ ಕೆಲಸವೇನು ಎಂಬುದನ್ನು ನಾವು ಹೇಳ್ತೇವೆ.

ಭಾರತೀಯ ಮೂಲದ ಈ ವ್ಯಕ್ತಿ ಕೆನಡಾ (Canada) ದಲ್ಲಿ ಬ್ಯಾಂಕ್ ಡೇಟಾ ಸೈಂಟಿಸ್ಟ್ ಉದ್ಯೋಗಿ (Employee) ಯಾಗಿ ಕೆಲಸ ಮಾಡ್ತಿದ್ದಾನೆ. ಈತನ ವಾರ್ಷಿಕ ಆದಾಯ 81 ಲಕ್ಷ ರೂಪಾಯಿ. ಈತ ಉಚಿತವಾಗಿ ಆಹಾರ (food) ಸೇವನೆ ಮಾಡುವ ಮೂಲಕ ಸಾಕಷ್ಟು ಹಣವನ್ನು ಉಳಿತಾಯ ಮಾಡಿದ್ದಾನೆ. ವ್ಯಕ್ತಿ ಮೊದಲು ತನ್ನ ಉಳಿತಾಯ ಹೇಗೆ ಎನ್ನುವ ಬಗ್ಗೆ ಒಂದು ವಿಡಿಯೋ ಮಾಡಿದ್ದಾನೆ. ಅದ್ರಲ್ಲಿ ತಾನು ವಿದ್ಯಾರ್ಥಿ ಎಂದು ಆತ ಹೇಳಿದ್ದಾನೆ. ಆದ್ರೆ ಆತನ ಮತ್ತೊಂದು ಪ್ರೊಫೈಲ್ ನಲ್ಲಿ ಆತ ಡೇಟಾ ಸೈಂಟಿಸ್ಟ್ ಎನ್ನುವ ವಿವರವಿದೆ. ಈ ವ್ಯಕ್ತಿ ಉಚಿತವಾಗಿ ಎಲ್ಲಿಂದ ಆಹಾರ ಸೇವನೆ ಮಾಡ್ತೇನೆ ಎಂಬುದನ್ನು ವಿವರಿಸಿದ್ದಾನೆ. ವಿದ್ಯಾರ್ಥಿಗಳಿಗೆ ಸಿಗುವ ಉಚಿತ ಆಹಾರವನ್ನು ಈತ ಕೂಡ ತೆಗೆದುಕೊಳ್ತಿದ್ದಾನೆ. ಸ್ಟುಡೆಂಟ್ಸ್ ಫುಡ್ ಬ್ಯಾಂಕ್ ನಿಂದ ಈತ ಆಹಾರ ಪಡೆಯುತ್ತಿದ್ದ. ಟ್ರಸ್ಟ್‌ಗಳು, ಚರ್ಚ್‌ಗಳು ಮತ್ತು ಲಾಭರಹಿತ ಸಂಸ್ಥೆಗಳು ಫುಡ್ ಬ್ಯಾಂಕ್ ಮೂಲಕ, ಕಾಲೇಜ್ ಹಾಗೂ ಯುನಿವರ್ಸಿಟಿ ವಿದ್ಯಾರ್ಥಿಗಳಿಗೆ ಆಹಾರವನ್ನು ಉಚಿತವಾಗಿ ನೀಡುತ್ತವೆ. ಅವರ ಈ ಆಹಾರ ತಿಂದು ನಾನು ನೂರಾರು ಡಾಲರ್ ಉಳಿಸಿದ್ದಾಗಿ ಹೆಮ್ಮೆಯಿಂದ ಹೇಳಿದ್ದಾನೆ.  ಉಳಿದವರಿಗೂ ಹೇಗೆ ಆಹಾರ ಪಡೆಯಬೇಕು ಎನ್ನುವ ಬಗ್ಗೆ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾನೆ. 

ಈಕೆ ಪಾಕಿಸ್ತಾನಿ, ಆದ್ರೆ ದಿಲ್ ಹೈ ಹಿಂದೂಸ್ತಾನಿ; ಪಾಕ್ ಹುಡುಗಿಗೆ ಭಾರತೀಯ ದಾನಿಯ ಹೃದಯ ಕಸಿ

ಆತನ ವಿಡಿಯೋವನ್ನು ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿತ್ತು. ನಂತ್ರ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದ್ರೆ ಇದೇ ಆತನಿಗೆ ಮುಳುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಾನಾ ಕಮೆಂಟ್ ಗಳು ಬಂದಿದ್ದಲ್ಲದೆ ಫುಡ್ ಬ್ಯಾಂಕ್ ಈತನನ್ನು ವಜಾ ಮಾಡಿದೆ. 

ವಿಡಿಯೋ ನೋಡಿದ ಕೆಲವರು ಈ ವ್ಯಕ್ತಿಯನ್ನು ಬೆಂಬಲಿಸಿದ್ರೆ ಮತ್ತೆ ಬಹುತೇಕರು ಖಂಡಿಸಿದ್ದಾರೆ. ಈತ ಮೋಸ ಮಾಡ್ತಿದ್ದಾನೆಂದು ಆರೋಪಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟನ್ನು ಈವರೆಗೆ 3.28ಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಮೆಂಟ್ ನಲ್ಲಿ ಜನರು ಮಾಹಿತಿ ನೀಡಿದ್ದಾರೆ. 

ವರ್ಕೌಟ್ ಅಥವಾ ಡಯಟ್ ಮಾಡ್ದೆ ಒಂದೇ ವಾರದಲ್ಲಿ ಬೆಲ್ಲಿ ಫ್ಯಾಟ್ ಕರಗಿಸೋಕೆ ಇಲ್ಲಿದೆ ಟಿಪ್ಸ್

ಬಡವರ ಊಟವನ್ನು ಶ್ರೀಮಂತರು ತೆಗೆದುಕೊಂಡ್ರೆ ಏನಾಗ್ಬೇಕು ಎಂದು ಬಳಕೆದಾರರು ಪ್ರಶ್ನೆ ಮಾಡಿದ್ದಾರೆ. ಇದ್ರಲ್ಲಿ ಅಚ್ಚರಿ ಏನಿಲ್ಲ. ಈ ಜನರು ಗುರುದ್ವಾರಗಳಲ್ಲಿಯೂ ಇದೇ ಕೆಲಸ ಮಾಡ್ತಾರೆ. ಬಡ ಜನರಿಗೆ ಆಹಾರ ದಾನ ಮಾಡುವ ಜನರ ಉದಾರತೆಯನ್ನು ಇವರು ದುರುಪಯೋಗಪಡಿಸಿಕೊಳ್ತಿದ್ದಾರೆ ಎಂದು ಜನರು ಕಮೆಂಟ್ ಮಾಡಿದ್ದಾರೆ. ಜನರ ಒಂದೊಂದು ಕಮೆಂಟ್ ನೋಡಿ ವಿಡಿಯೋ ಮಾಡಿದ ವ್ಯಕ್ತಿ ಸುಸ್ತಾದಂತಿದೆ. ಲಿಂಕ್ಡ್ ಇನ್ ನಲ್ಲಿ ಪ್ರೊಫೈಲ್ ಡಿಲಿಟ್ ಮಾಡಿದ್ದಾರೆ ಎಂದು ಎಕ್ಸ್ ನಲ್ಲಿ ಇನ್ನೊಬ್ಬರು ಮಾಹಿತಿ ನೀಡಿದ್ದಾರೆ. 

Latest Videos
Follow Us:
Download App:
  • android
  • ios