ಕೊಯಮತ್ತೂರು(ಜ.24): ಈ ಬೇಸಿಗೆಯಲ್ಲಿ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಶನಿವಾರ ಕೊಯಮತ್ತೂರಿನಲ್ಲಿ ಭರ್ಜರಿ ರೋಡ್‌ ಶೋ ನಡೆಸಿದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

"

ನಗರದ ಅನೇಕ ಸ್ಥಳದಲ್ಲಿ ಮಾತನಾಡಿದ ಅವರು, ‘ಮೋದಿ ಸರ್ಕಾರದ ಜತೆ ಶಾಮೀಲಾಗಿ ಅಣ್ಣಾ ಡಿಎಂಕೆ ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟಿದೆ. ಮೋದಿ ಅವರು ತಮಗೆ ಬೇಕಾದದ್ದನ್ನು ಈಡೇರಿಸಿಕೊಳ್ಳಲು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಾರೆ.

ತಮಿಳು ಜನರನ್ನು ನಿಯಂತ್ರಿಸಲು ಮೋದಿ ಬಯಸುತ್ತಾರೆ. ಆದರೆ ತಮಿಳುನಾಡನ್ನು ನಿಯಂತ್ರಿಸುವುದು ತಮಿಳರು ಮಾತ್ರ. ನಾಗಪುರ (ಆರೆಸ್ಸೆಸ್‌) ಅಲ್ಲ’ ಎಂದು ಗುಡುಗಿದರು. ‘ಆದರೆ ನಿಮಗೆ ಬೇಕಾದ ಸರ್ಕಾರ ಬರುವಂತಾಗಲು ನಾನು ತಮಿಳುನಾಡಿನ ಜನರ ಪರ ಕೆಲಸ ಮಾಡುತ್ತೇನೆ’ ಎಂದು ಜನತೆಗೆ ಭರವಸೆ ನೀಡಿದರು.