Asianet Suvarna News Asianet Suvarna News

ಭಾರತೀಯ ಸೇನೆಯ ಬತ್ತಳಿಗೆ ಬಂತು ಆತ್ಮಾಹುತಿ ನಾಗಾಸ್ತ್ರ ಡ್ರೋನ್‌..!

ಶತ್ರುಪಡೆಗಳ ಗುರಿ ಪತ್ತೆಯಾಗುವವರೆಗೂ ನಾಗಾಸ್ತ್ರ ಡ್ರೋನ್‌ಗಳು ಆಗಸಲ್ಲಿ ಓಡಾಡುತ್ತಿರುತ್ತವೆ. ಗುರಿ ನಿಗದಿಯಾದ ಕೂಡಲೇ ಅದರ ಮೇಲೆ ಬೀಳುತ್ತವೆ. ಹಾರಾಟ ಆರಂಭಿಸಿದ ಬಳಿಕವೂ ಇದರ ಗುರಿಯನ್ನು ಬದಲಿಸಬಹುದು ಅಥವಾ ರದ್ದುಪಡಿಸಬಹುದು. ಯಾವುದೇ ಬೆದರಿಕೆಯನ್ನೂ ಜಿಪಿಎಸ್‌ ಸಹಾಯದಿಂದ ಕರಾರುವಾಕ್ಕಾಗಿ ಧ್ವಂಸಗೊಳಿಸುತ್ತದೆ.

Nagastra 1 Airships have been added to the Indian Army grg
Author
First Published Jun 16, 2024, 10:08 AM IST

ನವದೆಹಲಿ(ಜೂ.16):  ಶತ್ರುಗಳ ತರಬೇತಿ ಶಿಬಿರಗಳು ಹಾಗೂ ಉಗ್ರರ ಲಾಂಚ್‌ ಪ್ಯಾಂಡ್‌ಗಳ ಮೇಲೆ ಅತ್ಯಂತ ನಿಖರವಾಗಿ ದಾಳಿ ನಡೆಸಿ, ಯೋಧರ ಜೀವ ಉಳಿಸುವ, ‘ಆತ್ಮಾಹುತಿ ಡ್ರೋನ್‌’ ಎಂದೇ ಕರೆಯಲಾಗುವ ‘ನಾಗಾಸ್ತ್ರ-1’ ವೈಮಾನಿಕ ನೌಕೆಗಳು ಭಾರತೀಯ ಸೇನೆಗೆ ಸೇರ್ಪಡೆಯಾಗಿವೆ. ಇದರಿಂದಾಗಿ ಭವಿಷ್ಯದಲ್ಲಿ ಡ್ರೋನ್‌ ಸಮರ ಸಾರಲು ಸೇನೆಗೆ ಭೀಮಬಲ ಲಭಿಸಿದಂತಾಗಿದೆ.

ಈ ಡ್ರೋನ್‌ಗಳನ್ನು ನಾಗಪುರದ ಸೋಲಾರ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿರುವ ಎಕನಾಮಿಕ್‌ ಎಕ್ಸ್‌ಪ್ಲೋಸಿವ್ಸ್‌ ಲಿಮಿಟೆಡ್‌ ಕಂಪನಿ ತಯಾರು ಮಾಡಿದೆ. 480 ಡ್ರೋನ್‌ಗಳಿಗೆ ಸೇನೆ ಬೇಡಿಕೆ ಇಟ್ಟಿತ್ತು. ಆ ಪೈಕಿ 120ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಮಾ ತುಜೆ ಸಲಾಂ ಹಾಡುತ್ತಲೇ ಪ್ರಾಣ ಬಿಟ್ಟ ಯೋಧ, ವಿದ್ಯಾರ್ಥಿಗಳಿಗೆ ತಿಳಿಯಲೇ ಇಲ್ಲ ಸಾವು!

ಏನಿದರ ವಿಶೇಷತೆ?:

ಶತ್ರುಪಡೆಗಳ ಗುರಿ ಪತ್ತೆಯಾಗುವವರೆಗೂ ನಾಗಾಸ್ತ್ರ ಡ್ರೋನ್‌ಗಳು ಆಗಸಲ್ಲಿ ಓಡಾಡುತ್ತಿರುತ್ತವೆ. ಗುರಿ ನಿಗದಿಯಾದ ಕೂಡಲೇ ಅದರ ಮೇಲೆ ಬೀಳುತ್ತವೆ. ಹಾರಾಟ ಆರಂಭಿಸಿದ ಬಳಿಕವೂ ಇದರ ಗುರಿಯನ್ನು ಬದಲಿಸಬಹುದು ಅಥವಾ ರದ್ದುಪಡಿಸಬಹುದು. ಯಾವುದೇ ಬೆದರಿಕೆಯನ್ನೂ ಜಿಪಿಎಸ್‌ ಸಹಾಯದಿಂದ ಕರಾರುವಾಕ್ಕಾಗಿ ಧ್ವಂಸಗೊಳಿಸುತ್ತದೆ.

9 ಕೇಜಿ ತೂಕ ಹೊಂದಿರುವ ಈ ಡ್ರೋನ್‌ ಆಗಸದಲ್ಲಿ 30 ನಿಮಿಷ ಹಾರಾಡಬಲ್ಲದು. 15 ಕಿ.ಮೀ. ದೂರದವರೆಗೂ ಮನುಷ್ಯರ ನಿಯಂತ್ರಣದಲ್ಲಿರುತ್ತದೆ. 30 ಕಿ.ಮೀ. ದೂರದವರೆಗೆ ಸ್ವಯಂ ನಿಯಂತ್ರಣದಲ್ಲಿ ಹಾರಾಡುತ್ತದೆ. 1 ಕೇಜಿ ಬಾಂಬ್‌ ಹೊತ್ತು 15 ಕಿ.ಮೀ. ವರೆಗೂ ಹಾರಬಲ್ಲದು. ಸುಧಾರಿತ ಡ್ರೋನ್‌ 2.2 ಕೇಜಿ ಬಾಂಬ್‌ನೊಂದಿಗೆ 30 ಕಿ.ಮೀ. ದೂರ ಸಾಗುತ್ತದೆ.

ಅಧಿಕಾರಿಯಾಗಿದ್ದ ಬಾಲಿವುಡ್ ನಟಿ ದಿಶಾ ಪಟಾನಿ ಅಕ್ಕ ಖುಷ್ಬೂ ಭಾರತೀಯ ಸೇನೆ ಬಿಟ್ಟಿದ್ದೇಕೆ?

ಒಂದು ವೇಳೆ, ಗುರಿ ಪತ್ತೆಯಾಗದಿದ್ದರೆ ಅಥವಾ ದಾಳಿಯನ್ನು ರದ್ದುಪಡಿಸಿದರೆ ಈ ಆತ್ಮಾಹುತಿ ಡ್ರೋನ್‌ಗಳನ್ನು ವಾಪಸ್‌ ಕರೆಸಿಕೊಳ್ಳಬಹುದು. ಪ್ಯಾರಾಶೂಟ್‌ ಸಹಾಯದಿಂದ ಇವು ಸುರಕ್ಷಿತವಾಗಿ ಬಂದಿಳಿಯುತ್ತವೆ. ಮತ್ತೊಂದು ದಾಳಿಗೆ ಇದನ್ನು ಬಳಸಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಶತ್ರುಪಡೆಗಳ ಮೇಲೆ ದಾಳಿಗೆ ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಮಾಸಾರಂಭದಲ್ಲಿ 25 ಡ್ರೋನ್‌ಗಳನ್ನು ಬಳಸಿ ರಷ್ಯಾ ಮೇಲೆ ಉಕ್ರೇನ್‌ ದಾಳಿ ನಡೆಸಿತ್ತು. ಅಮೆರಿಕದ ಯುದ್ಧ ನೌಕೆ, ಸರಕು ಸಾಗಣೆ ಹಡಗುಗಳ ಮೇಲೆ ಯೆಮೆನ್‌ನ ಹೌತಿ ಉಗ್ರರು ಡ್ರೋನ್‌ ಬಳಸಿಯೇ ದಾಳಿ ಮಾಡಿದ್ದರು.

Latest Videos
Follow Us:
Download App:
  • android
  • ios