ವಿದ್ಯಾರ್ಥಿಗಳು ಕುಳಿತಿದ್ದರು. ವೇದಿಕೆಗೆ ಆಗಮಿಸಿದ ನಿವೃತ್ತ ಯೋಧ ಮಾ ತುಜೆ ಸಲಾಂ ಹಾಡಿದ್ದಾರೆ. ಆದರೆ ಹಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳು, ನೆರೆದಿದ್ದ ಸಿಬ್ಬಂದಿಗಳಿಗೆ ಯೋಧ ಗಡಿಯಲ್ಲಿನ ಚಿತ್ರಣವನ್ನು ನಟನೆ ಮೂಲಕ ತೋರಿಸುತ್ತಿದ್ದಾರೆ ಎಂದುಕೊಂಡಿದ್ದಾರೆ.
ಇಂದೋರ್(ಮೇ.31) ಭಾರತೀಯ ಸೇನೆಯ ನಿವೃತ್ತ ಯೋಧ ತಿರಂಗ ಹಿಡಿದು ವೇದಿಕೆ ಮೇಲೆ ಆಗಮಿಸಿ ಮಾ ತುಜೆ ಸಲಾಂ ಹಾಡಿದ್ದಾರೆ. ಆದರೆ ಹಾಡುತ್ತಲೇ ವೇದಿಕೆಯಲ್ಲೇ ಕುಸಿದು ಬಿದ್ದ ಯೋಧ ಮೃತಪಟ್ಟಿದ್ದಾರೆ. ಆದರೆ ಚಪ್ಪಾಳೆ ತಟ್ಟುತ್ತಿದ್ದ ವಿದ್ಯಾರ್ಥಿಗಳಿಗೆ ಯೋಧ ಕುಸಿದು ಬಿದ್ದ ಮೃತಪಟ್ಟಿರುವುದು ಗೊತ್ತಾಗಲೇ ಇಲ್ಲ. ಯೋಧ ಕೊನೆಯ ಉಸಿರಾಡಿದರೆ ಇತ್ತ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಮಾ ತುಜೆ ಹಾಡನ್ನು ಗುನುಗಿದ್ದಾರೆ. ನೆರೆದಿದ್ದವರೂ ನಿವೃತ್ತ ಯೋಧ ಹಾಡಿಗೆ ನಟನೆ ಮೂಲಕ ವಿದ್ಯಾರ್ಥಿಗಳಿಗೆ ಮನಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದುಕೊಂಡಿದ್ದಾರೆ. ಹಾಡು ಮುಗಿದರೂ ಯೋಧ ಮೇಲೆಳೆದಾಗ ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ. ಅಷ್ಟರಲ್ಲೇ ಯೋಧನ ಪ್ರಾಣ ಪಕ್ಷಿ ಹಾರಿ ಹೋದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಅಗ್ರಸೇನ್ ಧಾಮದಲ್ಲಿ ಯೋಗ ಶಿಬಿರ ಸಂಸ್ಥೆ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಅದೇ ಊರಿನ ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಚಬ್ರಾಗೆ ಆಹ್ವಾನ ನೀಡಿದ್ದರು. ವಿದ್ಯಾರ್ಥಿಗಳು, ಯೋಗ ಶಿಬಿರಾರ್ಥಿಗಳು ಕುಳಿತಿದ್ದರು. ಹಲವು ಚಟುವಟಿಕಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಿವೃತ್ತ ಯೋಧ ಬಲ್ವಿಂದರ್, ತಿರಂಗ ಹಿಡಿದು ವೇದಿಕೆ ಆಗಮಿಸಿದ್ದಾರೆ. ಬಳಿಕ ಮಾ ತುಜೆ ಸಲಾಂ ಹಾಡು ಹಾಡಿದ್ದಾರೆ.
ಮೂರು ದಿನದಲ್ಲಿ ಪುಟ್ಟ ಮಗನ ಹುಟ್ಟುಹಬ್ಬಕ್ಕೆ ಬರಬೇಕಿದ್ದ ತಂದೆ, ಪೂಂಚ್ ಉಗ್ರ ದಾಳಿಯಲ್ಲಿ ಹುತಾತ್ಮ!
ವೇದಿಕೆ ಹತ್ತಿ ಬಂದ ಬೆನ್ನಲ್ಲೇ ಹೃದಯಾಘಾತವಾಗಿದೆ. ಆದರೆ ಒಂದೆರಡು ಸಾಲು ಹಾಡಿದ ಬಲ್ವಿಂದರ್ ತಿರಂಗ ಹಿಡಿದುಕೊಂಡೆ ವೇದಿಕೆ ಮೇಲೆ ಕುಸಿದು ಬಿದ್ದಿದ್ದಾರೆ. ಆದರೆ ವಿದ್ಯಾರ್ಥಿಗಳು, ನೆರೆದಿದ್ದ ಸಿಬ್ಬಂದಿಗಳಿಗೆ ಬಲ್ವಿಂದರ್ ಗಡಿಯಲ್ಲಿನ ಸನ್ನಿವೇಶವನ್ನು ನಟನೆ ಮೂಲಕ ತೋರಿಸುತ್ತಿದ್ದಾರೆ ಎಂದುಕೊಂಡಿದ್ದಾರೆ.
ಯೋಧ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುತ್ತಲೇ ಮಾ ತುಜೆ ಸಲಾಂ ಹಾಡನ್ನು ಮುಂದುವರಿಸಿದ್ದಾರೆ. ಇತ್ತ ಸಿಬ್ಬಂದಿಯೊಬ್ಬರು ಬಂದು ಕೆಳಮುಖವಾಗಿ ಬಿದ್ದಿದ್ದ ತಿರಂಗ ಎತ್ತಿ ಹಿಡಿದು ಹಾರಿಸಿದ್ದಾರೆ. ವಿದ್ಯಾರ್ಥಿಗಳ ಮಾ ತುಜೆ ಸಲಾಂ ಹಾಡು ಹಾಗೂ ಚಪ್ಪಾಳೆಗೆ ತಕ್ಕಂತೆ ತಿರಂಗ ಹಾರಾಡಿಸಿದ್ದಾರೆ.
ಮಾ ತುಜೆ ಸಲಾಂ ಹಾಡು ಮುಗಿದರೂ ನಿವೃತ್ತ ಯೋಧ ಬಲ್ವಿಂದರ್ ಮೇಲೆೇಳಲೇ ಇಲ್ಲ. ಈ ವೇಳೆ ಅನುಮಾನ ಹೆಚ್ಚಾಗಿದೆ. ಸಿಬ್ಬಂದಿಗಳು ಓಡೋಡಿ ಬಂದಿದ್ದಾರೆ. ಆದರೆ ಬಲ್ವಿಂದರ್ ದೇಹದಿಂದ ಯಾವುದೇ ಸ್ಪಂದನ ಇರಲಿಲ್ಲ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಯಾವೂದು ಸಾಧ್ಯವಾಗಿಲ್ಲ. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಗ್ರರಿಗೆ ಹೆದರಿ ಮ್ಯಾನ್ಮಾರ್‌ನಿಂದ ಮಿಜೋರಾಂಗೆ ಓಡಿಬಂದ ಬರ್ಮಾ ಸೈನಿಕರು!
ತಪಾಸಣೆ ನಡೆಸಿದ ವೈದ್ಯರು ಬಲ್ವಿಂದರ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 2008ರಲ್ಲಿ ಬಲ್ವಿಂದರ್ ಸಿಂಗ್ ಬೈಪಾಸ್ ಸರ್ಜರಿ ಮಾಡಿದ್ದರು. ಇದೀಗ ವಿದ್ಯಾರ್ಥಿಗಳ ಎದುರಲ್ಲಿ, ಮಾ ತುಜೆ ಸಲಾಂ ಹಾಡು ಹಾಡುತ್ತಾ, ತಿರಂಗ ಹಿಡಿದುಕೊಂಡೆ ಪ್ರಾಣಬಿಟ್ಟಿದ್ದಾರೆ.
