Asianet Suvarna News Asianet Suvarna News

ಡ್ಯಾನ್ಸಿಂಗ್ ಪೊಲೀಸ್ ರಂಜೀತ್ ಪ್ರಯತ್ನಕ್ಕೆ ಸಚಿವರ ಮೆಚ್ಚುಗೆ, ಜಾಕ್ಸನ್ ಮೂನ್‌ವಾಕ್ ವಿಡಿಯೋ ವೈರಲ್!

ಟ್ರಾಫಿಕ್ ಪೊಲೀಸ್ ರಂಜೀತ್ ಸಿಂಗ್ ಬಹುತೇಕರಿಗೆ ಚಿರಪರಿಚಿತ. ಕಾರಣ ತಮ್ಮ ಡ್ಯಾನ್ಸಿಂಗ್ ಸ್ಟೈಲ್‌ನಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವ ಈ ರಂಜೀತ್ ಸಿಂಗ್ ಇದೀಗ ಮೈಕಲ್ ಜಾಕ್ಸನ್ ಮೂನ್ ವಾಕ್ ಮೂಲಕ ಮತ್ತೆ ಸದ್ದು ಮಾಡಿದ್ದಾರೆ. ಈ ಬಾರಿ ರಂಜೀತ್ ಕಾಳಜಿ ಹಾಗೂ ಜಾಗೃತಿಗೆ ಸಚಿವರೆ ವಿಡಿಯೋ ಹಂಚಿಕೊಂಡು ಶಹಬ್ಬಾಶ್ ಹೇಳಿದ್ದಾರೆ.
 

Nagaland minister Temjen Imna share Dancing traffic cops Ranjeet singh video praise his moves ckm
Author
First Published Feb 28, 2024, 6:31 PM IST | Last Updated Feb 28, 2024, 6:33 PM IST

ಇಂದೋರ್(ಫೆ.28) ಡ್ಯಾನ್ಸಿಂಗ್ ಕಾಪ್ ಎಂದೇ ಹೆಸರುವಾಸಿಯಾಗಿರುವ ಇಂದೋರ್‌ನ ಟ್ರಾಪಿಕ್ ಪೊಲೀಸ್ ರಂಜೀತ್ ಸಿಂಗ್ ಇದೀಗ ಮತ್ತೆ ಬಾರಿ ಸಂಚಲನ ಸೃಷ್ಟಿಸಿದ್ದಾರೆ. ರಂಜೀತ್ ಸಿಂಗ್ ಡ್ಯಾನ್ಸಿಂಗ್ ಮೂಲಕ ವಾಹನ ಸವಾರರಲ್ಲಿ ಜಾಗೃತಿ ಜೊತೆಗೆ ನಿಯಮ ಅನುಸರಿಸುವಂತೆ ಮಾಡುತ್ತಿರುವ ವಿಶೇಷ ಪ್ರಯತ್ನವನ್ನು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಮೆಚ್ಚಿಕೊಂಡಿದ್ದಾರೆ. ರಂಜೀತ್ ಸಿಂಗ್ ಅವರ ಮೈಕಲ್ ಜಾಕ್ಸನ್ ಮೂನ್ ವಾಕ್ ಸ್ಟೈಲ್ ವಿಡಿಯೋವನ್ನು ಹಂಚಿಕೊಂಡ ತೆಮ್ಜನ್ ಇಮ್ನಾ ಸ್ಪೂರ್ತಿ ಹಾಗೂ ಮಾದರಿ ಪೊಲೀಸ್ ರಂಜೀತ್ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ರಂಜೀತ್ ಸಿಂಗ್ ಕಳೆದ 16 ವರ್ಷಗಳಿಂದ ಇಂದೋರ್ ನಗರದಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಕಲ್ ಜಾಕ್ಸನ್ ಅವರ ಮೂನ್‌ವಾಕ್ ಡ್ಯಾನ್ಸ್ ಶೈಲಿಯಲ್ಲೇ ಟ್ರಾಫಿಕ್ ನಿಯಂತ್ರ ಮಾಡುವ ರಂಜೀತ್ ಸಿಂಗ್ ವಾಹನ ಸವಾರರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ರಂಜೀತ್ ಸಿಂಗ್ ಡ್ಯಾನ್ಸಿಂಗ್ ಸ್ಟೈಲ್ ಹಾಗೂ ವಿಶೇಷ ಪ್ರಯತ್ನದಿಂದ ವಾಹನ ಸವಾರರು ಸಿಗ್ನಲ್ ಜಂಪ್, ಹೆಲ್ಮೆಟ್, ರಾಂಗ್ ಸೈಡ್ ಸೇರಿದಂತೆ ಇತರ ಟ್ರಾಫಿಕ್ ನಿಯಮ ಉಲ್ಲಂಘನೆ ತಗ್ಗಿದೆ. ರಂಜೀತ್ ಸಿಂಗ್ ನಿಯೋಜನೆಗೊಂಡಿರುವ ಸ್ಥಳದಲ್ಲಿ ಬಹುತೇಕ ಸವಾರರು ಟ್ರಾಫಿಕ್ ನಿಯಮ ಪಾಲಿಸುತ್ತಿರುವ ಕುರಿತು ಹಲವು ವರದಿಗಳು ಪ್ರಕಟಗೊಂಡಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಕಾದಿದೆ ಆಪತ್ತು, ಎರಡೇ ನಿಮಿಷಕ್ಕೆ ದಂಡ ಪಾವತಿ ಮಸೇಜ್!

ರಂಜೀತ್ ಸಿಂಗ್ ಸಾಮಾಜಿಕ ಜಾಲತಾಣ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ರಂಜೀತ್ ಸಿಂಗ್ ವಿಡಿಯೋಗಳು ಮಿಲಿಯನ್ ವೀಕ್ಷಣೆ ಪಡೆದಿದೆ. ಇಷ್ಟೇ ಅಲ್ಲ ಭಾರಿ ವೈರಲ್ ಆಗಿ ಜನಪ್ರಿಯ ಪೊಲೀಸ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಮೂನ್‌ವಾಕ್ ಸ್ಟೈಲ್ ಟ್ರಾಫಿಕ್ ನಿಯಂತ್ರಣ ವಿಡಿಯೋ ಹಂಚಿಕೊಂಡಿದ್ದಾರೆ.

 

 

ನಿಮ್ಮ ಪ್ರತಿಭೆ ಪ್ರದರ್ಶಿಸಲು ಸರಿಯಾದ ವೇದಿಕೆಗಾಗಿ ಕಾಯಬೇಡಿ, ಸರಿಯಾದ ವೇದಿಕೆಯನ್ನೂ ನೀವೆ ನಿರ್ಮಿಸಿ ಎಂದು ತೆಮ್ಜನ್ ಇಮ್ನಾ ವಿಡಿಯೋ ಪೋಸ್ಟ್ ಮಾಡಿದ್ದಾರೆ.  ಈ ವಿಡಿಯೋದಲ್ಲಿ ಖ್ಯಾತ ಗಾಯಕ ಮೈಕಲ್ ಜಾಕ್ಸನ್ ಅವರ ಮೂನ್‌ವಾಕ್ ಡ್ಯಾನ್ಸ್ ಶೈಲಿಯನ್ನು ಮಾಡುತ್ತಾ ಟ್ರಾಫಿಕ್ ನಿಯಂತ್ರಣ ಮಾಡುವ ದೃಶ್ಯವಿದೆ.

ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ವಾಹನ ಸೀಜ್ ಮಾಡಿ ಗುಜುರಿಗೆ, ಹೊಸ ರೂಲ್ಸ್ ಎಚ್ಚರ!

ರಂಜೀತ್ ಸಿಂಗ್ ಜನಪ್ರಿಯತೆ ಬಾಲಿವುಡ್ ವರೆಗೂ ತಲುಪಿದೆ. ಕಾಮಿಡಿಯನ್ ಭಾರತಿ ಈ ಪೊಲೀಸ್ ಜೊತೆ ಕೆಲ ವಿಡಿಯೋಗಳನ್ನು ಮಾಡಿದ್ದಾರೆ. ರಂಜಿತ್ ಸಿಂಗ್ ಕುರಿತು ಹಿರಿಯ ಪೊಲೀಸರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿ ಗೌರವಿಸಿದ್ದಾರೆ. ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯ. ಟ್ರಾಫಿಕ್ ಸರ್ಕಲ್, ಸಿಗ್ನಲ್ ಬಳಿ ನಿಯೋಜನೆಗೊಳ್ಳುವ ರಂಜೀತ್ ಸಿಂಗ್, ವಾಹನ ಸವಾರರನ್ನು ಟ್ರಾಫಿಕ್ ನಿಯಮ ಪಾಲಿಸುವಂತೆ ಮಾಡುತ್ತಾರೆ. 
 

Latest Videos
Follow Us:
Download App:
  • android
  • ios