Asianet Suvarna News Asianet Suvarna News

ನಾಲ್ಕಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ಕುಟಂಬಕ್ಕೆ ಸರ್ಕಾರದ ಸೌಲಭ್ಯ ಕಟ್, ಸುಗ್ರಿವಾಜ್ಞೆಗೆ ಅನುಮೋದನೆ!

ಜನಸಂಖ್ಯಾ ನಿಯಂತ್ರಣಾ ಚರ್ಚೆಗೆ ಇತ್ತೀಚೆಗೆ ಮುನ್ನಲೆಗೆ ಬಂದಿದೆ. ಆರ್‌ಎಸ್ಎಸ್ ಮುಖ್ಯಸ್ಥರ ಭಾಷಣ ಬಳಿಕ ಪರ ವಿರೋಧಗಳು ವ್ಯಕ್ತವಾಗಿದೆ. ಇದೀಗ ನಾಲ್ಕಕ್ಕಿಂತ ಹೆಚ್ಚು ಮಕ್ಕಳು ಹೊಂದಿರುವ ಕುಟುಂಬಕ್ಕೆ ಯಾವುದೇ ಸರ್ಕಾರಿ ಪ್ರಯೋಜನ ಇಲ್ಲ. ಸುಗ್ರಿವಾಜ್ಞೆಗೆ ಸಹಿ ಬಿದ್ದಿದೆ.

N Biren Singh approved Manipur Population Commission as an ordinance govt stops benefits families with more than 4 children ckm
Author
First Published Oct 14, 2022, 5:00 PM IST

ಮಣಿಪುರ(ಅ.14): ಜಸಂಖ್ಯೆ ನಿಯಂತ್ರಣ ಭಾರತದಲ್ಲಿ ಅತೀ ಅವಶ್ಯಕ ಅನ್ನೋ ಮಾತುಗಳು ಇಂದು ನಿನ್ನೆಯದಲ್ಲ. ಆದರೆ ಹೇಗೆ? ಇದಕ್ಕೆ ಹಲವು ವ್ಯಾಖ್ಯಾನಗಳು ಇವೆ. ಚರ್ಚೆಗಳು ನಡೆದಿದೆ. ಭಾರತದಲ್ಲಿ ಒಂದು ಸಮುದಾಯದ ಜನಸಂಖ್ಯೆ ಹೆಚ್ಚಳದಿಂದ ಜನಸಂಖ್ಯಾ ಅಸಮತೋಲನ ಹೆಚ್ಚಾಗುತ್ತಿದೆ. ಇದರಿಂದ ಮತ್ತೆ ದೇಶ ಒಡೆದು ಹೋಗುವ ಆತಂಕವಿದೆ ಎಂದು ಇತ್ತೀಚೆಗೆ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಿದ್ದರು. ಈ ಭಾಷಣ ಭಾರಿ ಚರ್ಚೆಗೆ ಒಳಪಟ್ಟಿತ್ತು. ಪರ ವಿರೋಧಗಳು ಕೇಳಿಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮಣಿಪುರದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದಿಗೆ ಸುಗ್ರಿವಾಜ್ಞೆ ಮೂಲಕ ಅನುಮೋದನೆ ನೀಡಲಾಗಿದೆ. ಒಂದು ಕುಟಂಬ ನಾಲ್ಕಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರಿಗ ಸರ್ಕಾರಿ ಸೌಲಭ್ಯ ಹಾಗೂ ಪ್ರಯೋಜನಗಳು ಲಭ್ಯವಿಲ್ಲ ಎಂದು ಮಣಿಪುರು ಸರ್ಕಾರ ಘೋಷಿಸಿದೆ.

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್(Manipur CM N Biren Singh) ನೇತೃತ್ವದ ರಾಜ್ಯ ಕ್ಯಾಬಿನೆಟ್(Cabinet) ಸುಗ್ರಿವಾಜ್ಞೆ ಮೂಲಕ ಈ ಕಾಯ್ದೆಗೆ ಅನುಮೋದನೆ ನೀಡಿದೆ. ಮಣಿಪುರ ರಾಜ್ಯ ಜನಸಂಖ್ಯಾ ಆಯೋಗ ನೀಡಿರುವ ವರದಿ ಆಧರಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮಣಿಪುರ ರಾಜ್ಯ ಜನಸಂಖ್ಯಾ(Population) ಆಯೋಗದ ಅಡಿಯಲ್ಲಿ ಈ ನೀತಿ ಜಾರಿಗೆ ಬಂದ ಬಳಿಕ ಯಾವುದೇ ದಂಪತಿ ನಾಲ್ಕು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ, ಆ ಕುಟುಂಬದ ಯಾವುದೇ ಸದಸ್ಯರಿಗೆ ಸರ್ಕಾರಿ ಸೌಲಭ್ಯಗಳು ಇರುವುದಿಲ್ಲ.

ಭಾರತದ ಯಾವ ಪ್ರದೇಶದಲ್ಲಿದೆ ಜನಸಂಖ್ಯಾ ಅಸಮತೋಲನ, ಕೇಳುತ್ತಿದೆ ಪ್ರತ್ಯೇಕತಾ ಕೂಗು!

2001ರ ಜನಗಣತಿಯಲ್ಲಿ ಅಸ್ಸಾಂ ಜನಸಂಖ್ಯೆ 22.93 ಲಕ್ಷ ಆಗಿತ್ತು. 2011ರ ಜನಗಣತಿಯಲ್ಲಿ ಈ ಸಂಖ್ಯೆ 28.56 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಜನಸಂಖ್ಯಾ ಅಸಮತೋಲನವನ್ನು ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಅಪಾಯ ತಪ್ಪಿಸಲು ಜನಸಂಖ್ಯಾ ನಿಯಂತ್ರಣ(Population Control) ಕಾನೂನು ಅತ್ಯವಶ್ಯಕ ಎಂದು ಮಣಿಪುರ ಸರ್ಕಾರ ಹೇಳಿದೆ. 1971 ರಿಂದ 2001ರ ವರೆಗೆ ಮಣಿಪುರದಲ್ಲಿ ಜನಸಂಖ್ಯಾ ಬೆಳವಣಿಗೆ ಶೇಕಡಾ 153.3. ಇನ್ನು 2001 ರಿಂದ 2011ರವರೆಗಿನ 10 ವರ್ಷಗಳ ಅವಧಿಯಲ್ಲಿನ ಮಣಿಪುರ ಜನಸಂಖ್ಯಾ ಬೆಳವಣಿಗೆ ಶೇಕಡಾ 250. ಹೀಗೆ ಮುಂದುವರಿದೆರೆ ಮಣಿಪುರದಲ್ಲಿ ಜನಸಂಖ್ಯಾ ಅಸಮತೋಲನ ಹಾಗೂ ಹಲವು ಸಮಸ್ಯೆಗಳಿಗೆ ಕಾರಣವಾಗಲಿದೆ ಎಂದು ಮಣಿಪುರ ಬಿಜೆಪಿ ಶಾಸಕ ಕುಮುಕಚಾಮ್ ಜೋಯ್ಕಿಸಾನ್ ಹೇಳಿದ್ದಾರೆ.

ಜನಸಂಖ್ಯಾ ನಿಯಂತ್ರಣ ಕಾನೂನು: ಕೇಂದ್ರಕ್ಕೆ ಸುಪ್ರೀಂ ನೋಟಿಸ್‌
ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಚ್‌, ಈ ಕುರಿತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಮಥುರಾ ಮೂಲದ ಹಿಂದೂ ಹಕ್ಕುಗಳ ನಾಯಕ ದೇವಕಿನಂದನ್‌ ಠಾಕೂರ್‌ ಜೀ ಅವರು ಈ ಕುರಿತು ಅರ್ಜಿ ಸಲ್ಲಿಸಿದ್ದರು. ಜೊತೆಗೆ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಕೂಡಾ ಇದೇ ರೀತಿಯ ಅರ್ಜಿ ಸಲ್ಲಿಸಿದ್ದು, ಎರಡೂ ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ನ್ಯಾಯಾಲಯ ಕೇಂದ್ರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಮುಸ್ಲಿಮರ ಜನಸಂಖ್ಯೆ ಕಡಿಮೆಯಾಗ್ತಿದೆ; ನಮ್ಮಿಂದಲೇ ಹೆಚ್ಚು ಕಾಂಡೋಮ್‌ ಬಳಕೆ: Asaduddin Owaisi

Follow Us:
Download App:
  • android
  • ios